ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೂಸ್ ಹಡಗಿನಲ್ಲಿದ್ದ 66 ಪ್ರಯಾಣಿಕರಿಗೆ ಕೋವಿಡ್: ಸಹಪ್ರಯಾಣಿಕರ ಪ್ರೊಟೆಸ್ಟ್‌

|
Google Oneindia Kannada News

ಮುಂಬೈ ಜನವರಿ 4: ಮುಂಬೈ-ಗೋವಾ ಕ್ರೂಸ್ ಹಡಗಿನಲ್ಲಿದ್ದ 66 ಪ್ರಯಾಣಿಕರಿಗೆ ಕೋವಿಡ್ ಸೋಂಕು ದೃಢಪಟ್ಟ ಬೆನ್ನಲ್ಲೆ ಸಹಪ್ರಯಾಣಿಕರು ಹಡಗಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಾರ್ಡೆಲಿಯಾ ಕ್ರೂಸ್‌ನಲ್ಲಿ 66 ಕೋವಿಡ್ ರೋಗಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿಲ್ಲ ಎಂದು ಆರೋಪಿಸಿ ಸಹ ಪ್ರಯಾಣಿಕರು ಹಡಗಿನ ಒಳಗೆ ಪ್ರತಿಭಟನೆ ನಡೆಸಿದರು.

66 ಕೋವಿಡ್ ರೋಗಿಗಳೊಂದಿಗೆ ಕಾರ್ಡೆಲಿಯಾ ಕ್ರೂಸ್ ಹಡಗು ಯಾವುದೇ ಪಾಸಿಟಿವ್ ವರದಿ ಬಂದ ಪ್ರಯಾಣಿಕರನ್ನು ಗೋವಾದ ಪ್ರತ್ಯೇಕ ವಾರ್ಡ್‌ಗೆ ಕರೆದೊಯ್ಯದೆ ಮುಂಬೈನಿಂದ ಹೊರಟಿದೆ. ಹೀಗಾಗಿ ಇನ್ನುಳಿದ ಜನರಿಗೆ ಹಡಗಿನಿಂದ ಹೊರಬರಲು ಅವಕಾಶವಿರಲಿಲ್ಲ. ಪ್ರಸ್ತುತ ಎಲ್ಲಾ ನೆಗೆಟಿವ್ ಮತ್ತು ಪಾಸಿಟಿವ್ ಬಂದ ಜನರು ಹಡಗಿನಲ್ಲಿದ್ದಾರೆ. ಹೀಗಾಗಿ ಕೊರೊನಾ ಪಾಸಿವಿಟ್ ಬಂದ ಪ್ರಯಾಣಿಕರನ್ನು ಪ್ರತ್ಯೇಕಿಸುವಂತೆ ಸಹ ಪ್ರಯಾಣಿಕರು ಹಡಗಿನೊಳಗೆ ಪ್ರತಿಭಟನೆ ನಡೆಸಿದ್ದಾರೆ.

ಹೊಸ ವರ್ಷದ ಆಚರಣೆಗಳಿಗೆ ಹಲವಾರು ಕಟ್ಟುನಿಟ್ಟಿನ ನಿರ್ಬಂಧಗಳ ನಡುವೆಯೂ ಮುಂಬೈ-ಗೋವಾ ಕ್ರೂಸ್ ಹಡಗಿನಲ್ಲಿದ್ದ 66 ಪ್ರಯಾಣಿಕರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕ್ರೂಸ್ ಹಡಗಿನಲ್ಲಿದ್ದ ಒಬ್ಬ ಸಿಬ್ಬಂದಿಗೆ ಕೊರೊನಾ ದೃಢಪಟ್ಟ ಬೆನ್ನಲ್ಲೇ ಸಹ ಪ್ರಯಾಣಿಕರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಲಾಗಿತ್ತು. ಹಡಗಿನಲ್ಲಿದ್ದ 2000ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿತ್ತು. ಇದರಲ್ಲಿ 66 ಮಂದಿಗೆ ಕೋವಿಡ್ -19 ಪಾಸಿಟಿವ್ ಬಂದಿದೆ.

66 Covid patients on Cordelia cruise not placed in isolation, passengers protest inside

ಹೀಗಾಗಿ ಭಾನುವಾರ ಪಿಪಿಇ ಕಿಟ್‌ಗಳನ್ನು ಧರಿಸಿದ ವೈದ್ಯಕೀಯ ತಂಡವು ಹಡಗಿನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಎಲ್ಲಾ 2,016 ಜನರ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿದೆ. ಪರೀಕ್ಷಾ ವರದಿ ಬಂದ ಬಳಿಕ "ಆಯಾ ಕಲೆಕ್ಟರ್‌ಗಳು ಮತ್ತು ಮುಂಬೈ ಪೋರ್ಟ್ ಟ್ರಸ್ಟ್ (MPT) ಸಿಬ್ಬಂದಿಗೆ ತಿಳಿಸಲಾಗಿದೆ. ಪ್ರಯಾಣಿಕರನ್ನು ಇಳಿಸುವ ಬಗ್ಗೆ ಚರ್ಚಿಸಲು ಸರ್ಕಾರವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.

ಎಲ್ಲಾ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆಗಳನ್ನು ನಡೆಸುವಂತೆ ಹಡಗು ನಿರ್ವಾಹಕರನ್ನು ಕೇಳಲಾಗಿದೆ ಮತ್ತು ಅವರು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದರೆ ಅವರನ್ನು ಇಳಿಯಲು ಅನುಮತಿಸಲಾಗುವುದಿಲ್ಲ ಎಂದು ಸಚಿವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.


ಓಮಿಕ್ರಾನ್‌ ಸೋಂಕು ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಮಂಗಳವಾರ (ಜನವರಿ 04) ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 37,379 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ 124 ಜನರು ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ 11,007 ರೋಗಿಗಳು ಕೊರೋನಾದಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,71,830 ಇದ್ದು, ಒಟ್ಟು ಸಾವಿನ ಸಂಖ್ಯೆ 4,82,017ರಷ್ಟಿದೆ.

ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,49,60,261 ರಷ್ಟಾಗಿದ್ದು, ಇಲ್ಲಿಯವರೆಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,43,06,414 ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 1,46,70,18,464 ಲಸಿಕೆಗಳನ್ನು ನೀಡಲಾಗಿದೆ. ದೇಶದಲ್ಲಿ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 1,892 ಕ್ಕೆ ಏರಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತಿ ಹೆಚ್ಚು ಓಮಿಕ್ರಾನ್ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 568 ಮತ್ತು ದೆಹಲಿಯಲ್ಲಿ 382 ಒಮಿಕ್ರಾನ್ ಪ್ರಕರಣಗಳಿದ್ದು, ದೇಶದಲ್ಲಿ ದಾಖಲಾದ ಒಟ್ಟು 1,892 ಓಮಿಕ್ರಾನ್ ರೋಗಿಗಳಲ್ಲಿ 766 ರೋಗಿಗಳು ಗುಣಮುಖರಾಗಿದ್ದಾರೆ.

ಸೋಮವಾರ ದೆಹಲಿಯಲ್ಲಿ 4,099 ಹೊಸ ಕೊರೊನಾವೈರಸ್ ಪ್ರಕರಣಗಳು ದಾಖಲಾದರೆ, ಓರ್ವ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,986 ರಷ್ಟಿದೆ. ಇನ್ನೂ ಮುಂಬೈನಲ್ಲಿ 8082 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಕೋಲ್ಕತ್ತಾದಲ್ಲಿ 2801 ಹೊಸ ಪ್ರಕರಣಗಳು, ಬೆಂಗಳೂರಿನಲ್ಲಿ 1041 ಹೊಸ ಪ್ರಕರಣಗಳು ಮತ್ತು ಚೆನ್ನೈನಲ್ಲಿ 876 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

Recommended Video

ಓಮಿಕ್ರಾನ್ ರೂಪಾಂತರದ ಭೀತಿ: ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ಹೊಸ ಮಾರ್ಗಸೂಚಿ ಸಾಧ್ಯತೆ | Oneindia Kannada

English summary
The Cordelia cruise ship, with 66 Covid patients, left from Mumbai without any positive passengers being taken to the isolation ward in Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X