ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18 ವರ್ಷದ ಬಳಿಕ ಪಾಕಿಸ್ತಾನ ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ ಮಹಿಳೆ

|
Google Oneindia Kannada News

ಔರಂಗಾಬಾದ್, ಜನವರಿ 27: ಸುಮಾರು 18 ವರ್ಷಗಳ ಹಿಂದೆ ತಮ್ಮ ಪತಿಯ ಸಂಬಂಧಿಕರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ 65 ವರ್ಷದ ಮಹಿಳೆ ಕೊನೆಗೂ ಮಂಗಳವಾರ ತಾಯ್ನಾಡಿಗೆ ಮರಳಿದ್ದಾರೆ. ಪಾಕಿಸ್ತಾನಕ್ಕೆ ತೆರಳಿದ್ದಾಗ ತಮ್ಮ ಪಾಸ್‌ಪೋರ್ಟ್ ಕಳೆದುಕೊಂಡಿದ್ದೇ ಅವರ ಬದುಕು ನರಕವಾಗಲು ಕಾರಣವಾಗಿತ್ತು. ಮಹಿಳೆ 'ನಾಪತ್ತೆ'ಯಾಗಿದ್ದಾರೆ ಎಂದು ಔರಂಗಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪಾಕಿಸ್ತಾನದಲ್ಲಿ ಸೆರೆವಾಸ ಅನುಭವಿಸಿ 18 ವರ್ಷದ ಬಳಿಕ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿನ ತಮ್ಮ ಮನೆಗೆ ಮರಳಿದ ಹಸೀನಾ ಬೇಗಂ ಅವರನ್ನು ಕುಟುಂಬದ ಸದಸ್ಯರು ಮತ್ತು ಔರಂಗಾಬಾದ್ ಪೊಲೀಸರು ಸಂಭ್ರಮದಿಂದ ಸ್ವಾಗತಿಸಿದರು.

ದೆಹಲಿಯಲ್ಲಿ ಮಧ್ಯರಾತ್ರಿ 1 ಗಂಟೆಗೆ ದೆಹಲಿಯಲ್ಲಿ ಮಧ್ಯರಾತ್ರಿ 1 ಗಂಟೆಗೆ "ಪಾಕಿಸ್ತಾನ್ ಜಿಂದಾಬಾದ್" ಘೋಷಣೆ!

'ನಾನು ಬಹಳ ಸಂಕಷ್ಟಗಳನ್ನು ಎದುರಿಸಿದೆ. ನನ್ನ ದೇಶಕ್ಕೆ ವಾಪಸಾದ ಬಳಿಕ ನನಗೆ ನೆಮ್ಮದಿ ಸಿಕ್ಕಂತಾಗಿದೆ. ನನಗೆ ನಾನು ಸ್ವರ್ಗದಲ್ಲಿದ್ದೇನೆ ಎನಿಸುತ್ತಿದೆ. ಪಾಕಿಸ್ತಾನದಲ್ಲಿ ಬಲವಂತವಾಗಿ ಜೈಲಿಗೆ ಹಾಕಲಾಗಿತ್ತು' ಎಂದು ಹಸೀನಾ ಬೇಗಂ ಭಾವುಕರಾಗಿ ಹೇಳಿದ್ದಾರೆ.

 65 Year Old Woman Spent 18 Years In Pakistan Jail, Returns To Aurangabad

ಪತಿಯ ಸಂಬಂಧಿಕರನ್ನು ಭೇಟಿ ಮಾಡುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಅವರು, ಲಾಹೋರ್‌ನಲ್ಲಿದ್ದಾಗ ಆಕಸ್ಮಿಕವಾಗಿ ತಮ್ಮ ಪಾಸ್‌ಪೋರ್ಟ್ ಕಳೆದುಕೊಂಡರು. ಆಕೆಯನ್ನು ಅಲ್ಲಿನ ಅಧಿಕಾರಿಗಳು ಬಲವಂತವಾಗಿ ಜೈಲಿಗೆ ಕಳುಹಿಸಿದರು. ತಾವು ಮುಗ್ಧೆ, ಬಿಡುಗಡೆ ಮಾಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳ ಮನಸು ಕರಗಿರಲಿಲ್ಲ. ಹೀಗೆ ಜೈಲಿನಲ್ಲಿ ಅನ್ಯಾಯವಾಗಿ 18 ವರ್ಷಗಳನ್ನು ಕಳೆಯುವಂತಾಗಿತ್ತು.

ಔರಂಗಾಬಾದ್ ಪೊಲೀಸರು ತಮ್ಮ ಸಿಟಿ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರಶೀದ್‌ಪುರ ಎಂಬಲ್ಲಿ ಹಸೀನಾ ಅವರ ಮನೆ ಇದೆ ಎಂಬ ದಾಖಲಾತಿಗಳನ್ನು ಒಳಗೊಂಡ ವರದಿಯನ್ನು ಕಳುಹಿಸಿದ ಬಳಿಕವಷ್ಟೇ ಪಾಕಿಸ್ತಾನದ ಅಧಿಕಾರಿಗಳ ಅದರ ಬಗ್ಗೆ ಗಮನ ಹರಿಸಿದ್ದರು. 'ಈ ವಿಚಾರದಲ್ಲಿ ವರದಿ ಸಲ್ಲಿಸಿದ್ದಕ್ಕಾಗಿ ಔರಂಗಾಬಾದ್ ಪೊಲೀಸರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ' ಎಂದು ಹಸೀನಾ ತಿಳಿಸಿದ್ದಾರೆ.

'ಆನ್ಲೈನ್ ಗೆಳತಿ'ಗಾಗಿ ಪಾಕಿಸ್ತಾನದಿಂದ ಗೋವಾಕ್ಕೆ ವೀಸಾ ಪಡೆಯದೇ ಬಂದಳಾ ಯುವತಿ?'ಆನ್ಲೈನ್ ಗೆಳತಿ'ಗಾಗಿ ಪಾಕಿಸ್ತಾನದಿಂದ ಗೋವಾಕ್ಕೆ ವೀಸಾ ಪಡೆಯದೇ ಬಂದಳಾ ಯುವತಿ?

ಉತ್ತರ ಪ್ರದೇಶದ ಸಹರಾನ್‌ಪುರ ನಿವಾಸಿ ದಿಲ್ಶಾದ್ ಅಹ್ಮದ್ ಎಂಬುವವರೊಂದಿಗೆ ಹಸೀನಾ ಮದುವೆಯಾಗಿತ್ತು. ಕಳೆದ ವಾರ ಅವರನ್ನು ಬಿಡುಗಡೆ ಮಾಡಿದ್ದ ಪಾಕಿಸ್ತಾನ, ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು.

English summary
A 65 year old woman, Hasina Begum who had gone to Pakistan, lost her passport and spent 18 years in jail, returned to Aurangabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X