ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದ ಸೊಲ್ಲಾಪುರ ಜೈಲಿನಲ್ಲಿ 60 ಮಂದಿಗೆ ಕೊರೊನಾ ಸೋಂಕು

|
Google Oneindia Kannada News

ಮುಂಬೈ, ಜೂನ್ 5 : ಮಹಾರಾಷ್ಟ್ರದ ಸೊಲ್ಲಾಪುರ ಜೈಲಿನಲ್ಲಿರುವ ಸಿಬ್ಬಂದಿ ಹಾಗೂ ಕೈದಿಗಳು ಸೇರಿ ಒಟ್ಟು 60 ಮಂದಿಗೆ ಕೊರೊನಾ ವೈರಸ್ ತಗುಲಿರುವುದು ಪತ್ತೆಯಾಗಿದೆ.

ಸೊಲ್ಲಾಪುರ ಜೈಲಿನ ಕೈದಿ ಮತ್ತು ಸಿಬ್ಬಂದಿಗೆ ಕೊರೊನಾ ಗುಣಲಕ್ಷಣಗಳು ಕಂಡು ಬಂದಿದ್ದವು. ಈ ಹಿನ್ನೆಲೆ ಅವರನ್ನು ಕೊರೊನಾ ಟೆಸ್ಟ್‍ಗೆ ಒಳಪಡಿಸಿದಾಗ ಮೇ 26ರಂದು ರಿಪೋರ್ಟ್ ಪಾಸಿಟಿವ್ ಬಂದಿತ್ತು.

ಕೋವಿಡ್ - 19 ಸೋಂಕಿತರ ಸಾವು; ದಾಖಲೆ ಬರೆದ ಮಹಾರಾಷ್ಟ್ರಕೋವಿಡ್ - 19 ಸೋಂಕಿತರ ಸಾವು; ದಾಖಲೆ ಬರೆದ ಮಹಾರಾಷ್ಟ್ರ

ತಕ್ಷಣವೇ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಗುರುವಾರ 60 ಮಂದಿಗೆ ಸೋಂಕು ದೃಢಪಟ್ಟಿದೆ.

 60 Including Eight Staff Contract Coronavirus At Solapur Jail

ಈ ಕುರಿತು ಪ್ರತಿಕ್ರಿಯಿಸಿರುವ ಸೊಲ್ಲಾಪುರ ಜಿಲ್ಲಾಧಿಕಾರಿ ಮಿಲಿಂದ್ ಶಂಭಾರ್ಕರ್, ಜೈಲಿನಲ್ಲಿ ಒಟ್ಟು 300 ಮಂದಿ ಕೈದಿಗಳಿದ್ದಾರೆ. ಕೊರೊನಾ ತಗುಲಿದ 60 ಮಂದಿಯ ಪೈಕಿ 8 ಜನ ಜೈಲು ಸಿಬ್ಬಂದಿ ಇದ್ದಾರೆ. ಎಲ್ಲರನ್ನೂ ಸದ್ಯ ಐಸೋಲೇಷನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈವರೆಗೂ ಸೊಲ್ಲಾಪುರ ಜಿಲ್ಲೆಯಲ್ಲಿ ಒಟ್ಟು 1,144 ಮಂದಿ ಸೋಂಕಿತರಿದ್ದು, 99 ಜನ ಮೃತಪಟ್ಟಿದ್ದಾರೆ. ಕೊರೊನಾ ವೈರಸ್ ಮಹಾರಾಷ್ಟ್ರದ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಮಹಾರಾಷ್ಟ್ರದಲ್ಲಿ ಈವರೆಗೂ 74 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢಪಟ್ಟಿದ್ದು, 32,329 ಜನ ಗುಣಮುಖರಾಗಿದ್ದಾರೆ. 2,587 ಮಂದಿ ಮೃತಪಟ್ಟಿದ್ದಾರೆ.

English summary
The prison at Solapur in Maharashtra has reported 60 COVID-19 patients including inmates and jail staff in the last few days, a senior jail official said on Thursday. On May 26, an inmate and a staff tested positive. Subsequently, the samples of primary contacts of the patients also tested positive, a prison official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X