ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಿ ಮೊಬೈಲ್ ತಜ್ಞರನ್ನು ಭಾರತ ತೊರೆಯುವಂತೆ ಸೂಚನೆ!

|
Google Oneindia Kannada News

ಮುಂಬೈ, ಡಿಸೆಂಬರ್ 20: ಮೇಕ್ ಇನ್ ಇಂಡಿಯಾ ಯೋಜನೆಯಡಿ ಮೊಬೈಲ್ ಫೋನ್ ಉತ್ಪಾದಿಸುತ್ತಿದ್ದ ಕಂಪನಿಯ ಡಮನ್ ಮತ್ತು ಸಿಲ್ವಸ್ಸಾ ಘಟಕಕ್ಕೆ ಭೇಟಿ ನೀಡಿದ್ದ 60 ಚೀನಿ ತಜ್ಞರನ್ನು ಭಾರತವನ್ನು ತೊರೆಯುವಂತೆ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಓ) ನಿರ್ದೇಶಿಸಿದೆ.

ಎಫ್‌ಆರ್‌ಆರ್‌ಓ ನಿರ್ದೇಶನದ ಕ್ರಮಬದ್ಧತೆಯನ್ನು ಪ್ರಶ್ನಿಸಿ ಕಂಪನಿಯು ಮುಂಬೈ ಹೈಕೋರ್ಟ್‌ನ ಮೆಟ್ಟಿಲೇರಿದೆ. ವ್ಯಾಪಾರ ವೀಸಾ ನೀತಿಯನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಎಫ್ ಆರ್ ಆರ್ ಓ ಈ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಬಿ.ಪಿ.ಧರ್ಮಾಧಿಕಾರಿ ಮತ್ತು ಸಾರಂಗ್ ಕೋತ್ವಾಲ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಿದ ಕಂಪನಿ ವಕೀಲ ನೌಶೆರ್ ಕೊಹ್ಲಿ, ಚೀನಿ ಪ್ರಜೆಗಳಿಗೆ ತಕ್ಷಣ ಭಾರತ ತೊರೆಯುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕ್ರಿಸ್‌ಮಸ್ ರಜೆಗೆ ಮುನ್ನ ತ್ವರಿತವಾಗಿ ಇದನ್ನು ವಿಚಾರಣೆ ನಡೆಸಬೇಕು ಎಂದು ಕೋರಿದರು. ಇವರ ವೀಸಾ ಅವಧಿ ಇನ್ನೂ ಇದ್ದರೂ ಕೆಲವರು ಈಗಾಗಲೇ ದೇಶ ಬಿಟ್ಟಿದ್ದಾರೆ ಎಂದು ಅವರು ಹೇಳಿದರು. ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಲು ನ್ಯಾಯಪೀಠ ನಿರ್ಧರಿಸಿತು

60 Chinese experts visiting desi mobile company told to leave India

ಪೆಸಿಫಿಕ್ ಸೈಬರ್ ಟೆಕ್ನಾಲಜಿ ಘಟಕಗಳಿಗೆ ವ್ಯಾಪಾರ ವೀಸಾದಡಿ 60 ಚೀನಿ ತಜ್ಞರು ಭೇಟಿ ನೀಡಿದ್ದು, ಇವರನ್ನು ಅಥವಾ ನಮ್ಮ ಕಂಪನಿ ಪ್ರತಿನಿಧಿಗಳ ವಿಚಾರಣೆಯನ್ನೂ ನಡೆಸದೇ ದೇಶ ತೊರೆಯುವಂತೆ ನೋಟಿಸ್ ನೀಡಲಾಗಿದೆ ಎಂದು ಕೊಹ್ಲಿ ವಾದಿಸಿದರು.

ಕಂಪನಿಯ ಜಂಟಿ ಸಹಭಾಗಿತ್ವದ ಪಾಲುದಾರ ಕಂಪನಿ, ಅದರ ಗ್ರಾಹಕರು ಮತ್ತು ಸರಬರಾಜುದಾರರನ್ನು ಈ ಘಟಕಕ್ಕೆ ಕಳುಹಿಸಿಕೊಟ್ಟಿತ್ತು. ಈ ಘಟಕಗಳು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನವೀಕೃತ ವಿಶೇಷ ಉತ್ತೇಜಕ ಯೋಜನೆಯ ಫಲಾನುಭವಿ ಕಂಪನಿಯಾಗಿದ್ದು, ಈ ಘಟಕಗಳ ವಿನ್ಯಾಸ, ಅಭಿವೃದ್ಧಿ ಮತ್ತು ಮೊಬೈಲ್ ಫೋನ್ ಜೋಡಣೆಯು ಸರ್ಕಾರದ ಮೇಕ್ ಇಂಡಿಯಾ ಯೋಜನೆಗೆ ಅನುಸಾರವಾಗಿವೆ ಎಂದು ವಿವರಿಸಿದ್ದಾರೆ.

ಚೀನಿ ತಜ್ಞರು ಬಹುತೇಕ 180 ದಿನಗಳ ವ್ಯಾಪಾರ ವೀಸಾ ಅನ್ವಯ ಭಾರತಕ್ಕೆ ಆಗಮಿಸಿದ್ದರು. 2019ರ ಮೇ ತಿಂಗಳ ವರೆಗೂ ಕೆಲವರ ವೀಸಾ ಅವಧಿ ಇದೆ. ಆದರೆ ಡಿಸೆಂಬರ್ 15ರಂದು ಇವರಿಗೆ ದೇಶ ತೊರೆಯುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ.

English summary
A mobile phone manufacturer implementing the government’s ‘Make in India' initiative recently learned that around 60 chines experts visting its Daman adn Silvassa plants were asked by the Foreigners Regional Registration office(FRRO) to 'leave India' immediately for violations of business visas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X