ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್‌ಗೆ ಐವರು ಬಲಿ: ಪ್ರಕರಣಗಳ ಸಂಖ್ಯೆ ಮತ್ತಷ್ಟು ಏರಿಕೆ

|
Google Oneindia Kannada News

ಮುಂಬೈ, ಆ. 14: ಮಹಾರಾಷ್ಟ್ರದಲ್ಲಿ ಇದುವರೆಗೆ ಮುಂಬೈಯಿಂದ ಓರ್ವ ವ್ಯಕ್ತಿ ಸೇರಿದಂತೆ ಐದು ಜನರು ಕೊರೊನಾ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರಕ್ಕೆ ಬಲಿಯಾಗಿದ್ದಾರೆ. ಈವರೆಗೆ 66 ಜನರಲ್ಲಿ ಸಾಂಕ್ರಾಮಿಕ ಕೋವಿಡ್‌ ರೂಪಾಂತರ ಡೆಲ್ಟಾ ಪ್ಲಸ್ ದೃಢಪಟ್ಟಿದೆ. ಈ ಪೈಕಿ ಕೆಲವರು ಕೋವಿಡ್ ವಿರುದ್ದವಾಗಿ ಎರಡೂ ಡೋಸ್‌ ಲಸಿಕೆಗಳನ್ನು ಪಡೆದುಕೊಂಡವರು. ಈ ಪೈಕಿ ಈ ಏಳು ರೋಗಿಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು," ಎಂದು ರಾಜ್ಯ ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ.

ಕೋವಿಡ್ -19 ಡೆಲ್ಟಾ ಪ್ಲಸ್ ರೂಪಾಂತರವನ್ನು ಹೆಚ್ಚು ಸಾಂಕ್ರಾಮಿಕ ಎಂದು ಪರಿಗಣಿಸಲಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ ಕಳುಹಿಸಲಾದ ಸ್ವ್ಯಾಬ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಸಮಯದಲ್ಲಿ ಈ ಡೆಲ್ಟಾ ಪ್ಲಸ್‌ ಇರುವುದು ಪತ್ತೆಯಾಗಿದೆ. ಮುಂಬೈನ 63 ವರ್ಷದ ಸಂಪೂರ್ಣ ಕೋವಿಡ್‌ ಲಸಿಕೆ ಹಾಕಿಸಿಕೊಂಡ ಮಹಿಳೆ ಜುಲೈ ಕೊನೆಯ ವಾರದಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ ಡೆಲ್ಟಾ ಪ್ಲಸ್ ರೂಪಾಂತರದಿಂದಾಗಿ ಮೊದಲ ಸಾವು ಸಂಭವಿಸಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈನಲ್ಲಿ ಡೆಲ್ಟಾ ಪ್ಲಸ್‌ಗೆ ಪ್ರಥಮ ಬಲಿ: ಮಹಾರಾಷ್ಟ್ರದಲ್ಲಿ ಎರಡನೇ ಸಾವು ದಾಖಲುಮುಂಬೈನಲ್ಲಿ ಡೆಲ್ಟಾ ಪ್ಲಸ್‌ಗೆ ಪ್ರಥಮ ಬಲಿ: ಮಹಾರಾಷ್ಟ್ರದಲ್ಲಿ ಎರಡನೇ ಸಾವು ದಾಖಲು

ಮುಂಬೈನ್‌ಲ್ಲಿ ಮಹಿಳೆಯ ಸಾವಿನ ನಂತರ, ಆಕೆಯ ಕನಿಷ್ಠ ನಿಕಟ ಸಂಪರ್ಕದಲ್ಲಿರುವ ಇಬ್ಬರಲ್ಲೂ ಕೂಡಾ ಕೊರೊನಾ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರದ ಪತ್ತೆಯಾಗಿದೆ ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿ ತಿಳಿಸಿದ್ದಾರೆ. ಮುಂಬೈನ ಸಬ್ ಅರ್ಬನ್ ಘಾಟ್ಕೋಪರ್ ಪ್ರದೇಶದ ನಿವಾಸಿಯಾದ ಮಹಿಳೆ ಜುಲೈ 27 ರಂದು ಆಸ್ಪತ್ರೆಯ ಐಸಿಯುನಲ್ಲಿ ನಿಧನರಾದರು. ಆಗಸ್ಟ್ 11 ರಂದು ಜೀನೋಮ್ ಸೀಕ್ವೆನ್ಸಿಂಗ್ ವರದಿ ಬಂದ ನಂತರವೇ ಮಹಿಳೆಯಲ್ಲಿ ಕೋವಿಡ್‌ನ ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ಇರುವುದು ಪತ್ತೆಯಾಗಿದೆ ಎಂದು ರಾಜ್ಯ ಅಧಿಕಾರಿಗಳು ತಿಳಿದುಕೊಂಡರು ಎಂದು ಅಧಿಕಾರಿ ಹೇಳಿದರು.

 ಎರಡು ಡೋಸ್‌ ಕೋವಿಶೀಲ್ಡ್‌ ಪಡೆದಿದ್ದ ಮಹಿಳೆ

ಎರಡು ಡೋಸ್‌ ಕೋವಿಶೀಲ್ಡ್‌ ಪಡೆದಿದ್ದ ಮಹಿಳೆ

ಮುಂಬೈನ್‌ಲ್ಲಿ ಕೋವಿಡ್‌ನ ಡೆಲ್ಟಾ ರೂಪಾಂತರಕ್ಕೆ ಬಲಿಯಾದ ಮಹಿಳೆಯು ಕೋವಿಶೀಲ್ಡ್ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ವರಿಯಾಗಿದೆ. ಆದರೆ ಮಹಿಳೆಯಲ್ಲಿ ಜುಲೈ 21 ರಂದು ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗೆಯೇ ಕೊರೊನಾ ವೈರಸ್‌ ವಿರುದ್ದದ ಲಸಿಕೆ ಪಡೆದ ನಂತರ ಸೋಂಕು ಬಂದರೆ ಸಾವನ್ನಪ್ಪುವ ಪರಿಸ್ಥಿತಿ ತೀರಾ ವಿರಳ ಎಂದು ಕೂಡಾ ಅಧಿಕಾರಿಗಳು ಉಲ್ಲೇಖ ಮಾಡಿದ್ದಾರೆ. ಆರೋಗ್ಯ ಇಲಾಖೆಯ ಹೇಳಿಕೆಯ ಪ್ರಕಾರ, ಥಾಣೆಯ 50 ವರ್ಷದ ಮಹಿಳೆಯಲ್ಲಿ ಜುಲೈ 22 ರಂದು ಕೊರೊನಾ ವೈರಸ್‌ ಸೋಂಕು ಇದೆ ಎಂದು ಕಂಡುಬಂದಿದೆ ಮತ್ತು ಶುಕ್ರವಾರ ಪಡೆದ ಕೋವಿಡ್‌ ವರದಿಯಲ್ಲಿ ಆ ಮಹಿಳೆಯು ಕೋವಿಡ್‌ನ ಡೆಲ್ಟಾ ಪ್ಲಸ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮಹಿಳೆಯಲ್ಲಿ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದಳು ಮತ್ತು ಆಕೆ ಚೇತರಿಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

 ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್‌ಗೆ ಐವರು ಬಲಿ

ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್‌ಗೆ ಐವರು ಬಲಿ

ಕೊರೊನಾ ವೈರಸ್‌ ಸೋಂಕು ರೂಪಾಂತರ ಡೆಲ್ಟಾ ಪ್ಲಸ್‌ನಿಂದಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಈವರೆಗೆ ಐವರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಡೆಲ್ಟಾ ಪ್ಲಸ್‌ಗೆ ಸಂಬಂಧಿಸಿದ ಐದು ಸಾವುಗಳಲ್ಲಿ, ಇಬ್ಬರು ರೋಗಿಗಳು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರು ಮತ್ತು ರಾಯಗಢ, ಬೀಡ್ ಮತ್ತು ಮುಂಬೈನಿಂದ ತಲಾ ಒಬ್ಬರು ಆಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ವರದಿ ಮಾಡಿದೆ. ಗರಿಷ್ಠ ಸಂಖ್ಯೆಯ ಕೋವಿಡ್‌ ರೂಪಾಂತರ ಡೆಲ್ಟಾ ಪ್ಲಸ್ ರೋಗಿಗಳು ಉತ್ತರ ಮಹಾರಾಷ್ಟ್ರದ ಜಲಗಾಂವ್‌ಗೆ ಸೇರಿದವರು ಆಗಿದ್ದಾರೆ. ಜಲಗಾಂವ್‌ನಲ್ಲಿ 13 ಜನರಲ್ಲಿ ಡೆಲ್ಟಾ ಪ್ಲಸ್‌ ಕಾಣಿಸಿಕೊಂಡಿದೆ. ಇನ್ನುಳಿದಂತೆ ರತ್ನಗಿರಿ 12 ಮತ್ತು ಮುಂಬೈನಲ್ಲಿ 11 ಮಂದಿಗೆ ಕೋವಿಡ್‌ ತೀವ್ರ ಸಾಂಕ್ರಾಮಿಕ ರೂಪಾಂತರ ಡೆಲ್ಟಾ ಪ್ಲಸ್‌ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸಿಡ್ನಿ, ಮೊಲ್ಬೋರ್ನ್‌ ಡೆಲ್ಟಾ ದಾಳಿ: ಆಸ್ಟ್ರೇಲಿಯಾ ರಾಜಧಾನಿಯಲ್ಲಿ ಲಾಕ್‌ಡೌನ್‌ಸಿಡ್ನಿ, ಮೊಲ್ಬೋರ್ನ್‌ ಡೆಲ್ಟಾ ದಾಳಿ: ಆಸ್ಟ್ರೇಲಿಯಾ ರಾಜಧಾನಿಯಲ್ಲಿ ಲಾಕ್‌ಡೌನ್‌

ಥಾಣೆ ಮತ್ತು ಪುಣೆ ಜಿಲ್ಲೆಗಳಿಂದ ತಲಾ ಆರು ರೋಗಿಗಳು, ಪಾಲ್ಘರ್ ಮತ್ತು ಜಿಲ್ಲೆಯಿಂದ ತಲಾ ಮೂವರು, ನಾಂದೇಡ್ ಮತ್ತು ಗೊಂಡಿಯಾದಿಂದ ತಲಾ ಇಬ್ಬರು, ಚಂದ್ರಾಪುರ, ಅಕೋಲಾ, ಸಿಂಧುದುರ್ಗ, ಸಾಂಗ್ಲಿ, ನಂದೂರ್ಬಾರ್, ಔರಂಗಾಬಾದ್, ಕೊಲ್ಹಾಪುರ ಮತ್ತು ಬೀಡ್ ನಿಂದ ತಲಾ ಒಬ್ಬರಲ್ಲಿ ಕೋವಿಡ್‌ ಡೆಲ್ಟಾ ರೂಪಾಂತರ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

 ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಿದ ಶೇ. 80 ಮಾದರಿಯಲ್ಲಿ ಡೆಲ್ಟಾ

ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಿದ ಶೇ. 80 ಮಾದರಿಯಲ್ಲಿ ಡೆಲ್ಟಾ

ಇನ್ನು ಆರೋಗ್ಯ ಇಲಾಖೆಯು, "ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಿದ ಶೇಕಡ 80 ರಷ್ಟು ಮಾದರಿಗಳಲ್ಲಿ ಕೊರೊನಾ ವೈರಸ್‌ ರೂಪಾಂತರ ಡೆಲ್ಟಾ ಪ್ಲಸ್ ಪಾಸಿಟಿವ್‌ ಪರೀಕ್ಷೆ ಮಾಡಿದೆ," ಎಂದು ತಿಳಿಸಿದ್ದಾರೆ. 66 ಡೆಲ್ಟಾ ಪ್ಲಸ್ ರೋಗಿಗಳಲ್ಲಿ, 33 ಮಂದಿ 19 ರಿಂದ 45 ವಯಸ್ಸಿನವರು, 18 ಮಂದಿ 46 ರಿಂದ 60 ವಯೋಮಾನದವರು, ಎಂಟು ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಏಳು ಮಂದಿ 18 ಕ್ಕಿಂತ ಕಡಿಮೆ ವಯಸ್ಸಿನವರು ಎಂದು ಆರೋಗ್ಯ ಇಲಾಖೆ ಉಲ್ಲೇಖ ಮಾಡಿದೆ. ಹಾಗೆಯೇ 66 ಡೆಲ್ಟಾ ಪ್ಲಸ್ ರೋಗಿಗಳ ಪೈಕಿ 34 ಮಹಿಳೆಯರು ಎಂದು ಕೂಡಾ ಆರೋಗ್ಯ ಇಲಾಖೆ ತಿಳಿಸಿದೆ.

5 ದೇಶಗಳಲ್ಲಿ ತೀವ್ರಗೊಳ್ಳುತ್ತಿದೆ ಡೆಲ್ಟಾ ಪ್ಲಸ್ ವೈರಸ್5 ದೇಶಗಳಲ್ಲಿ ತೀವ್ರಗೊಳ್ಳುತ್ತಿದೆ ಡೆಲ್ಟಾ ಪ್ಲಸ್ ವೈರಸ್

 10 ಡೆಲ್ಟಾ ಸೋಂಕಿತರು ಎರಡೂ ಡೋಸ್‌ ಲಸಿಕೆ ಪಡೆದವರು

10 ಡೆಲ್ಟಾ ಸೋಂಕಿತರು ಎರಡೂ ಡೋಸ್‌ ಲಸಿಕೆ ಪಡೆದವರು

"66 ರೋಗಿಗಳಲ್ಲಿ, 10 ಜನರು ಎರಡೂ ಡೋಸ್ ಕೋವಿಡ್‌ ಲಸಿಕೆಗಳನ್ನು ತೆಗೆದುಕೊಂಡಿದ್ದಾರೆ. ಇತರ ಎಂಟು ಜನರು ಕೋವಿಡ್‌ ಲಸಿಕೆಯ ಮೊದಲ ಡೋಸ್ ತೆಗೆದುಕೊಂಡಿದ್ದಾರೆ. ಈ 18 ಜನರಲ್ಲಿ ಇಬ್ಬರು ಕೋವಾಕ್ಸಿನ್ ಮತ್ತು 16 ಕೋವಿಶೀಲ್ಡ್ ತೆಗೆದುಕೊಂಡಿದ್ದಾರೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಒಟ್ಟು ಕೊರೊನಾ ವೈರಸ್‌ ರೋಗಿಗಳಲ್ಲಿ, 61 ಮಂದಿ ಈಗಾಗಲೇ ಚೇತರಿಸಿಕೊಂಡಿದ್ದಾರೆ ಮತ್ತು ಆ ಪೈಕಿ 31 ಮಂದಿಗೆ ಡೆಲ್ಟಾ ಸೋಂಕಿನ ಲಕ್ಷಣಗಳಿಲ್ಲ ಅಥವಾ ಸಣ್ಣ ಪುಟ್ಟ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ಅದು ಹೇಳಿದೆ.

ಈ ಹಿಂದೆ, ಡೆಲ್ಟಾ ಪ್ಲಸ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ 80 ವರ್ಷದ ವೃದ್ಧೆ ಜೂನ್ 13 ರಂದು ಸಾವನ್ನಪ್ಪಿದ್ದಾರೆ. ಆಕೆಗೆ ಲಸಿಕೆ ಹಾಕಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈನಲ್ಲಿ ರಾಯಗಡ ಜಿಲ್ಲೆಯ ಡೆಲ್ಟಾ ಪ್ಲಸ್ ಸಾವು ಮುಂಬೈನಿಂದ 100 ಕಿಮೀ ದೂರದಲ್ಲಿರುವ ನಾಗೋಥಾನೆಯಿಂದ ವರದಿಯಾಗಿದೆ.

ರಾಯಗಡ ಜಿಲ್ಲಾಧಿಕಾರಿ ನಿಧಿ ಚೌಧರಿ ಸುದ್ದಿ ಸಂಸ್ಥೆ ಪಿಟಿಐಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 69 ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಡೆಲ್ಟಾ ಪ್ಲಸ್‌ ಮಾತ್ರವಲ್ಲದೇ ಬೇರೆ ರೋಗಗಳಿಂದ ಬಳಲುತ್ತಿದ್ದರು. ಜುಲೈ 15 ರಂದು ಆ ವ್ಯಕ್ತಿಯಲ್ಲಿ ಕೋವಿಡ್‌ ದೃಢಪಟ್ಟಿದೆ. ಜುಲೈ 22 ರಂದು ಆ ವ್ಯಕ್ತಿ ಸಾವನ್ನಪ್ಪಿದ್ದು ಆ ವ್ಯಕ್ತಿಯಲ್ಲಿ ಡೆಲ್ಟಾ ಪ್ಲಸ್‌ ಇತ್ತು ಎಂಬುವುದು ಸಾವಿನ ಬಳಿಕ ಲಭಿಸಿದ ಡೆಲ್ಟಾ ಪ್ಲಸ್ ಸೋಂಕಿನ ವರದಿಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ. "ಈ ವ್ಯಕ್ತಿಗೆ ಸಂಪೂರ್ಣವಾಗಿ ಕೋವಿಡ್‌ ಲಸಿಕೆ ಹಾಕಲಾಗಿತ್ತು," ಎಂದು ಕೂಡಾ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Five people, including one from Mumbai, have died and as many as 66 people have been found infected with the Delta Plus variant of COVID-19 in Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X