ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಮಂದಿ ಏರ್‌ ಇಂಡಿಯಾ ಪೈಲೆಟ್‌ಗಳಿಗೆ ಕೊರೊನಾ ಸೋಂಕು

|
Google Oneindia Kannada News

ಮುಂಬೈ, ಮೇ 10: ಏರ್‌ ಇಂಡಿಯಾ ಸಂಸ್ಥೆಯ ಐದು ಜನ ಪೈಲೆಟ್‌ಗಳಿಗೆ ಕೊರೊನಾ ವೈರಸ್ ತಗುಲಿದೆ ಎಂದು ಏರ್‌ಲೈನ್‌ ಮೂಲಗಳು ಭಾನುವಾರ ಖಚಿತಪಡಿಸಿದೆ.

ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ಕರೆದುಕೊಂಡು ಬರಲು ಕೇಂದ್ರ ಸರ್ಕಾರ ಬಹುದೊಡ್ಡ ಕಾರ್ಯಾಚರಣೆ ಮಾಡುತ್ತಿದ್ದು, ಈ ಆಪರೇಷನ್‌ಗೆ ಏರ್‌ ಇಂಡಿಯಾ ವಿಮಾನಗಳು ಕಾರ್ಯನಿರ್ವಹಿಸುತ್ತಿದೆ. ಈ ವಿಮಾನಗಳಲ್ಲಿ ಕೆಲಸಕ್ಕೆ ಭಾಗವಹಿಸುವುದಕ್ಕೂ ಮುಂಚೆ ಪೈಲೆಟ್ ಹಾಗು ಸಿಬ್ಬಂದಿಗಳನ್ನು ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ವಿಮಾನದಿಂದ ಬಂದಿಳಿದ ಇಬ್ಬರು ಕೊರೊನಾ ಸೋಂಕಿತರುಏರ್ ಇಂಡಿಯಾ ವಿಮಾನದಿಂದ ಬಂದಿಳಿದ ಇಬ್ಬರು ಕೊರೊನಾ ಸೋಂಕಿತರು

'ಐದು ಜನ ಪೈಲೆಟ್‌ಗಳಿಗೆ ಕೊರೊನಾ ಸೋಂಕು ದೃಢವಾಗಿದೆ. ಒಬ್ಬರ ನಂತರ ಒಬ್ಬರನ್ನು ಪರೀಕ್ಷಗೆ ಒಳಪಡಿಸಲಾಗಿದೆ. ಬಹುಶಃ ಇದು ದೋಷಪೂರಿತ ಪರೀಕ್ಷಾ ಕಿಟ್‌ ಆಗಿರಬಹುದು' ಎಂದು ನಾವು ಅನುಮಾನಿಸುತ್ತಿದ್ದೇವೆ ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.

5 Air India Pilots Tested COVID19 Positive

ಕೊವಿಡ್‌ಗೆ ಸೋಂಕು ಖಚಿತವಾಗಿರುವ ಐದು ಪೈಲೆಟ್‌ಗಳು ಬೋಯಿಂಗ್ 787 ವಿಮಾನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಏರ್ ಇಂಡಿಯಾ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ಒಂದು ವಾರದಿಂದ ಐದು ಜನ ಪೈಲೆಟ್‌ಗಳು ವಿಮಾನಗಳಲ್ಲಿ ಕೆಲಸ ಮಾಡಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಐದು ಜನ ಪೈಲೆಟ್‌ಗಳು ಏಪ್ರಿಲ್ 20ಕ್ಕೂ ಮುಂಚೆ ಚೀನಾಗೆ ಸರಕು ಸರಬರಾಜು ಮಾಡುತ್ತಿದ್ದ ವಿಮಾನ ಹಾರಿಸುತ್ತಿದ್ದರು' ಎಂದು ಅಧಿಕಾರಿ ತಿಳಿಸಿದ್ದಾರೆ.

English summary
5 Air India pilots found COVID19 positive during pre-COVID 19 test, which is done 72 hours earlier for flight duty. They are all located in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X