• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣದಲ್ಲಿ 3239 ಅಭ್ಯರ್ಥಿಗಳು

|

ಮುಂಬೈ, ಅಕ್ಟೋಬರ್ 08: ಮಹಾರಾಷ್ಟ್ರ ಚುನಾವಣಾ ಅಖಾಡದಲ್ಲಿ ಅಂತಿಮವಾಗಿ 3239 ಅಭ್ಯರ್ಥಿಗಳಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ತಿಳಿಸಿದೆ.

288 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು 5543 ನಾಮಪತ್ರಗಳು ಸಲ್ಲಿಸಲಾಗಿತ್ತು. ಈ ಪೈಕಿ 800 ಅರ್ಜಿಗಳನ್ನು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಇನ್ನು ಕೆಲವು ನಾಮಪತ್ರಗಳು ತಾಂತ್ರಿಕ ಕಾರಣದಿಂದ ರದ್ದಾಗಿವೆ. 34 ಕ್ಷೇತ್ರಗಳಲ್ಲಿ 15 ಅಭ್ಯರ್ಥಿಗಳು ಕಣದಲ್ಲಿರುವ ಕಾರಣ ಹೆಚ್ಚುವರಿ ಮತಯಂತ್ರಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಎದ್ದಿದ್ದ ಬಂಡಾಯವನ್ನು ಶಮನವಾಗಿದ್ದರಿಂದ ಅಧಿಕೃತ ಅಭ್ಯರ್ಥಿಗಳ ಎದುರು ಸ್ಪರ್ಧಿಸಿದ್ದವರು ನಾಮಪತ್ರ ಹಿಂಪಡೆದುಕೊಂಡಿದ್ದಾರೆ.

ಪ್ರಮುಖ ಅಂಶಗಳು:

* ರತ್ನಗಿರಿ ಜಿಲ್ಲೆಯ ಚಿಪ್ಲುನ್ ಸ್ಥಾನಕ್ಕೆ ಕೇವಲ ಮೂವರು ಸ್ಪರ್ಧಿಗಳು (ಎನ್ ಸಿಪಿ ಶೇಖರ್ ನಿಖಂ, ಶಿವಸೇನಾದ ಸದಾನಂದ ಚವಾಣ್, ಬಿಎಸ್ಪಿಯ ಸಚಿನ್ ಮೋಹಿತೆ) ಕಣದಲ್ಲಿದ್ದು, ಅತಿ ಕಡಿಮೆ ಸ್ಪರ್ಧಿಗಳಿರುವ ಕ್ಷೇತ್ರವಾಗಿದೆ.

* ಮರಾಠ್ ವಾಡ ಪ್ರದೇಶದ ನಾಂದೇಡ್ ದಕ್ಷಿಣ ಕ್ಷೇತ್ರದಲ್ಲಿ ಅತಿಹೆಚ್ಚು ಸ್ಪರ್ಧಿಗಳನ್ನು ಹೊಂದಿದ್ದು, 38 ಸ್ಪರ್ಧಿಗಳಿದ್ದಾರೆ. ಈ ಕ್ಷೇತ್ರದಲ್ಲಿ ಶಿವಸೇನಾದಿಂದ ರಾಜಶ್ರೀ ಪಾಟೀಲ್ , ಕಾಂಗ್ರೆಸ್ಸಿನಿಂದ ಮೋಹನ್ ಅಂಬಾರ್ದೆ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

* ಮುಂಬೈ ಪಕ್ಕದ ಥಾಣೆ ಜಿಲ್ಲೆಯಲ್ಲಿ 18 ಕ್ಷೇತ್ರಗಳಿಗೆ 213 ಅಭ್ಯರ್ಥಿಗಳಿದ್ದಾರೆ.

* ಮರಾಠವಾಡ ಪ್ರದೇಶದಲ್ಲಿ 46 ಕ್ಷೇತ್ರಗಳಲ್ಲಿ 679 ಸ್ಪರ್ಧಿಗಳಿದ್ದು, ಕೊನೆ ದಿನದಂದು 528 ಸ್ಪರ್ಧಿಗಳು ನಾಮಪತ್ರ ಹಿಂಪಡೆದಿದ್ದು ವಿಶೇಷವಾಗಿತ್ತು.

* ಮಹಾರಾಷ್ಟ್ರ ಪೂರ್ವದಲ್ಲಿರುವ ಅಮರಾವತಿ ಜಿಲ್ಲೆಯಲ್ಲಿ 42 ಮಂದಿ ನಾಮಪತ್ರ ಹಿಂಪಡೆದಿದ್ದು, ಕಣದಲ್ಲಿ 109 ಮಂದಿ ಉಳಿದಿದ್ದಾರೆ.

* ನಾಸಿಕ್ ಜಿಲ್ಲೆಯಲ್ಲಿ 15 ಸ್ಥಾನಕ್ಕಾಗಿ 148 ಮಂದಿ ಸ್ಪರ್ಧಿಸಿದ್ದಾರೆ.

ಪ್ರಮುಖ ಸ್ಪರ್ಧಿಗಳು:

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗಪುರ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಆಶೀಶ್ ದೇಶ್ ಮುಖ್ ರನ್ನು ಎದುರಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಪುಣೆಯ ಕೋತ್ರಾಡ್ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿಯ ಪಂಕಜಾ ಮುಂಡೆ ಹಾಗೂ ಸುಧೀರ್ ಮುಂಗತಿವಾರ್ ಅವರು ಪಾರ್ಲಿ ಹಾಗೂ ಬಳ್ಳಾರ್ ಪುರ್ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ.

ಶಿವಸೇನಾ ಸ್ಥಾಪಕ ಬಾಳಾ ಠಾಕ್ರೆ ಅವರ ಕುಟುಂಬದಿಂದ ಮೊದಲ ಬಾರಿಗೆ ಅವರ ಮೊಮ್ಮಗ ಆದಿತ್ಯ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್ಸಿನಿಂದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್(ನಾಂದೇಡ್ ಜಿಲ್ಲೆಯ ಭೋಕಾರ್), ಪೃಥ್ವಿರಾಜ್ ಚವಾಣ್(ಸತಾರಾ ಜಿಲ್ಲೆಯ ಕರಡ್ ದಕ್ಷಿಣ), ಎನ್ ಸ್ಪಿ ನಾಯಕ, ಮಾಜಿ ಡಿಸಿಎಂ ಅಜಿತ್ ಪವಾರ್ ಅವರು ಪುಣೆಯ ಬಾರಾಮತಿಯಿಂದ ಮತ್ತೊಮ್ಮೆ ವಿಧಾನಸಭೆಗೆ ಪ್ರವೇಶ ಬಯಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಶಿವಸೇನಾ, ಎನ್ಸಿಪಿ ಅಲ್ಲದೆ, ರಾಜ್ ಠಾಕ್ರೆ ಅವರ ಎಂಎನ್ಎಸ್, ಎಐಎಂಐಎಂ, ವಂಚಿತ್ ಬಹುಜನ್ ಅಘಾಡಿ, ಸ್ವಾಭಿಮಾನಿ ಶೇತ್ಕಾರಿ ಸಂಘಟನಾ ಮುಂತಾದ ಸಣ್ಣ ಪುಟ್ಟ ಪಕ್ಷಗಳು ತಮ್ಮ ಛಾಪು ಮೂಡಿಸಲು ಮುಂದಾಗಿವೆ. ಅಕ್ಟೋಬರ್ 21ರಂದು ಮತದಾನ ಹಾಗೂ ಅಕ್ಟೋಬರ್ 24ರಂದು ಫಲಿತಾಂಶ ಹೊರಬರಲಿದೆ.

English summary
A total of 3239 candidates are in the fray for the October 21 assembly elections in Maharashtra for the 288 seats up for grabs where the BJP-led NDA alliance and the Congress-NCP combine are locked in keen contests marked by defections, rebellions and one-upmanships.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X