ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೇ ತಿಂಗಳಲ್ಲಿ 300 ರೈತರ ಆತ್ಮಹತ್ಯೆ

|
Google Oneindia Kannada News

ಮುಂಬೈ, ಜನವರಿ 3: ಮಹಾರಾಷ್ಟ್ರದಲ್ಲಿ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಕೇವಲ ಎರಡು ತಿಂಗಳಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ 300 ಅನ್ನು ದಾಟಿದೆ.

ಮಹಾರಾಷ್ಟ್ರದಲ್ಲಿ ರಾಜಕೀಯ ಮೇಲಾಟಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕಳೆದ ಎರಡು ತಿಂಗಳಲ್ಲೇ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಮುನ್ನೂರನ್ನು ದಾಟಿದೆ.

6 ಕೋಟಿ ರೈತರಿಗೆ 12,000 ಕೋಟಿ ರೂ ಹಂಚಿಕೆ ಮಾಡಲಿದ್ದಾರೆ ಮೋದಿ6 ಕೋಟಿ ರೈತರಿಗೆ 12,000 ಕೋಟಿ ರೂ ಹಂಚಿಕೆ ಮಾಡಲಿದ್ದಾರೆ ಮೋದಿ

ಅಕ್ಟೋಬರ್ ತಿಂಗಳಲ್ಲಿ 186 ಹಾಗೂ ನವೆಂಬರ್‌ನಲ್ಲಿ 114 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಲ್ಲಿ ವರ್ಷದ ಬಹುತೇಕ ಸಮಯದಲ್ಲಿ ಇದೇ ಪ್ರಮಾಣದ ರೈತರ ಆತ್ಮಹತ್ಯೆ ಸಂಭವಿಸುತ್ತಿತ್ತು. ಆದರೆ ಈಗ ಕಳೆದ ಎರಡು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯದ ಪ್ರಹಸದನ ಹಿನ್ನೆಲೆಯಲ್ಲಿ ಇದಕ್ಕೆ ಮತ್ತೆ ಮಹತ್ವ ಬಂದಿದೆ.

300 Farmers Commit Suicide In Maharashtra In Two Months

ಒಟ್ಟಾರೆ 2019ರ ಮೊದಲ 11 ತಿಂಗಳಲ್ಲಿ 2532 ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ವಿದರ್ಭ ಭಾಗದವರೇ ಹೆಚಚ್ಆಗಿದ್ದು 1169 ರೈತರಿದ್ದಾರೆ. ಮಹಾರಾಷ್ಟ್ರದ ಹಿಂದಿನ ಸರ್ಕಾರ ಹಾಗೂ ಹಾಲಿ ಸರ್ಕಾರದ ಕೃಷಿ ಸಾಲ ಮನ್ನಾ ಯೋಜನೆಯ ಹೊರತಾಗಿಯೂ ಆತ್ಮಹತ್ಯೆ ಸರಣಿ ಮುಂದುವರೆದಿರುವುದು ಆತಂಕಕ್ಕೆ ಕಾರಣವಾಗಿದೆ.

ರೈತರ ಆತ್ಮಹತ್ಯೆಗೆ ಅನಾವೃಷ್ಠಿ ಕಾರಣವಾಗುತ್ತಿದ್ದರೆ ಈ ಬಾರಿ ಅತಿವೃಷ್ಠಿ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬರುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ತುರ್ತಾಗಿ ಎರಡೂ ಸರ್ಕಾರಗಳು ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಷಮಗೊಳ್ಳುವ ಸಾಧ್ಯತೆ ಇದೆ.

English summary
300 Farmers Commit Suicide In Maharashtra In October And November. In 2019 total 2532 farmers are committed suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X