ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಟ್ರಾಫಿಕ್ ಜಾಮ್ ನಿಂದ ಗಂಡ-ಹೆಂಡತಿ ಡೈವೋರ್ಸ್; 100ರಲ್ಲಿ 3ರದ್ದು ಇದೇ ಕಥೆ!

|
Google Oneindia Kannada News

ಮುಂಬೈ, ಫೆಬ್ರವರಿ 5: ಗಂಡ-ಹೆಂಡತಿ ನಡುವೆ ಜಗಳ ಆಗೋದಕ್ಕೆ ಕಾರಣಗಳು ಒಂದು ಎರಡಲ್ಲ. ಸಣ್ಣ ಒಡವೆಯಿಂದ ಹಿಡಿದು ದೊಡ್ಡ ಬಂಗಲೆವರೆಗೂ ಪತಿ-ಪತ್ನಿ ಮುನಿಸು ಕಾಮನ್. ಆದರೆ ಹಿರಿಯರ ಪ್ರಕಾರ, ಗಂಡ-ಹೆಂಡತಿ ಜಗಳು ಉಂಡು ಮಲಗುವ ತನಕ ಎನ್ನುವ ಗಾದೆಯೂ ಇದೆ. ಆದರೆ ಟ್ರೆಂಡ್ ಈಗ ಚೇಂಜ್ ಆಗಿದೆ.

ಜಗತ್ತಿನಲ್ಲಿ ಗಂಡ-ಹೆಂಡತಿ ಜಗಳ ಡೈವೋರ್ಸ್ ವರೆಗೂ ಹೋಗಿ ಮುಟ್ಟಿತ್ತಿದೆ. ಸಣ್ಣ-ಪುಟ್ಟ ಕಾರಣಗಳಿಗೂ ವಿಚ್ಛೇದನ ತೆಗೆದುಕೊಳ್ಳುವವರ ಸಂಖ್ಯೆ ಇತ್ತೀಚಿಗೆ ಮತ್ತಷ್ಟು ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಮಹಾನಗರಗಳಲ್ಲಿ ಡೈವೋರ್ಸ್ ಕೇಸ್ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತವೆ.

ಹೋಟೆಲ್‌ನಲ್ಲಿ ಗೆಳತಿ ಜೊತೆ ತಂಗಲು ಪತ್ನಿಯ ಆಧಾರ್ ಬಳಸಿದ ಭೂಪ ಅಂದರ್!ಹೋಟೆಲ್‌ನಲ್ಲಿ ಗೆಳತಿ ಜೊತೆ ತಂಗಲು ಪತ್ನಿಯ ಆಧಾರ್ ಬಳಸಿದ ಭೂಪ ಅಂದರ್!

ಬೆಂಗಳೂರು, ಕೋಲ್ಕತ್ತಾ, ದೆಹಲಿ, ಹೈದ್ರಾಬಾದ್, ಚೆನ್ನೈನಂತರ ಮಹಾನಗರಗಳಲ್ಲಿ ನಿತ್ಯ ಒಂದಿಲ್ಲೊಂದು ಕಾರಣಗಳಿಗೆ ಡೈವೋರ್ಸ್ ಪ್ರಕರಣಗಳು ಸುದ್ದಿ ಆಗುತ್ತದೆ. ಆದರೆ ಮುಂಬೈ ನಗರವು ಈ ಎಲ್ಲ ನಗರಗಳಿಗಿಂತ ಕೊಂಚ ಡಿಫರೆಂಟ್. ಮಹಾನಗರಿ ಮುಂಬೈನಲ್ಲಿ ಟ್ರಾಫಿಕ್ ಜಾಮ್ ನಿಂದ ಡೈವರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆಯಂತೆ. ಇದೆನಪ್ಪಾ ಅನ್ನೋ ಕುತೂಹಲಕ್ಕೆ ಈ ವರದಿಯಲ್ಲಿ ಉತ್ತರ ತಿಳಿದುಕೊಳ್ಳಿರಿ.

ಸೋಷಿಯಲ್ ಮೀಡಿಯಾದಲ್ಲಿ ಅಮೃತಾ ಫಡ್ನವೀಸ್ ಹೇಳಿಕೆಯದ್ದೇ ಸದ್ದು

ಮುಂಬೈನಲ್ಲಿ ಟ್ರಾಫಿಕ್ ಜಾಮ್ ಮಿತಿ ಮೀರುತ್ತಿದೆ. ಇದರಿಂದ ವಾಣಿಜ್ಯ ನಗರಿಯಲ್ಲಿ ಗಂಡ-ಹೆಂಡತಿ ಪರಸ್ಪರ ಸಮಯ ಕೊಡುವುದಕ್ಕೆ ಆಗುತ್ತಿಲ್ಲ. ಇದರಿಂದ ಮನಸ್ತಾಪ ಹೆಚ್ಚಾಗುತ್ತಿದೆ. ಒಂದು ಅರ್ಥದಲ್ಲಿ ಮುಂಬೈ ಟ್ರಾಫಿಕ್ ನಿಂದಾಗಿಯೇ ಡೈವೋರ್ಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮುಂಬೈನಲ್ಲಿ 100ರಲ್ಲಿ ಮೂವರು ಟ್ರಾಫಿಕ್ ಜಾಮ್ ನಿಂದಾಗಿಯೇ ಡೈವೋರ್ಸ್ ಪಡೆದುಕೊಳ್ಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮುಂಬೈನ ಹದಗೆಟ್ಟ ರಸ್ತೆಗಳ ಬಗ್ಗೆ ತಿಳಿಸಲು ಇಂಥಾ ಮಾತು

ಮುಂಬೈನ ಹದಗೆಟ್ಟ ರಸ್ತೆಗಳ ಬಗ್ಗೆ ತಿಳಿಸಲು ಇಂಥಾ ಮಾತು

ಮಹಾರಾಷ್ಟ್ರ ರಾಜಧಾನಿ ಮತ್ತು ವಾಣಿಜ್ಯ ನಗರಿ ಎನಿಸಿರುವ ಮುಂಬೈನಲ್ಲೇ ರಸ್ತೆಗಳು ಹದಗೆಟ್ಟು ಹೋಗಿವೆ. ರಸ್ತೆಗಳಲ್ಲಿನ ಗುಂಡಿಗಳಿಂದ ಮತ್ತು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿರುವುದರಿಂದ ವೈಯಕ್ತಿಕವಾಗಿ ತೀವ್ರ ತೊಂದರೆ ಅನುಭವಿಸಿದ್ದೇನೆ. "ನಾನು ದೇವೇಂದ್ರ ಫಡ್ನವೀಸ್ ಅವರ ಪತ್ನಿ ಎಂಬುದನ್ನು ಮರೆತುಬಿಡಿ. ನಾನು ಮಹಿಳೆಯಾಗಿ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ರಸ್ತೆಗಳು ಮತ್ತು ಗುಂಡಿಗಳು ಟ್ರಾಫಿಕ್ ಮತ್ತು ನಮಗೆ ಎಷ್ಟರ ಮಟ್ಟಿಗೆ ತೊಂದರೆ ಕೊಡುತ್ತವೆ," ಎಂದು ಅಮೃತಾ ಫಡ್ನವೀಸ್ ಹೇಳಿದ್ದಾರೆ.

ಬೆಂಗಳೂರಿನ ಕುಟುಂಬಗಳು ಇದನ್ನು ಓದದಂತೆ ತಡೆಯಬೇಕು

ಬೆಂಗಳೂರಿನ ಕುಟುಂಬಗಳು ಇದನ್ನು ಓದದಂತೆ ತಡೆಯಬೇಕು

ಮುಂಬೈನಲ್ಲಿ ಡೈವೋರ್ಸ್ ಪ್ರಕರಣಗಳು ಹೆಚ್ಚಾಗುವುದಕ್ಕೆ ಟ್ರಾಫಿಕ್ ಜಾಮ್ ಮತ್ತು ಹದಗೆಟ್ಟ ರಸ್ತೆಗಳೇ ಕಾರಣ ಎಂಬ ಅಮೃತಾ ಫಡ್ನವೀಸ್ ಹೇಳಿಕೆಗೆ ಶಿವಸೇನೆ ಮುಖಂಡರಾದ ಪ್ರಿಯಾಂಕಾ ಚತುರ್ವೇದಿ ಲೇವಡಿ ಮಾಡಿದ್ದಾರೆ. ಬೆಂಗಳೂರಿನ ಕುಟುಂಬಗಳು ಇದನ್ನು ಓದದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ. ಬೆಂಗಳೂರಿನ ಕುಟುಂಬಗಳು ದಯವಿಟ್ಟು ಇದನ್ನು ಓದುವುದನ್ನು ತಪ್ಪಿಸಿ, ನಿಮ್ಮ ಮದುವೆಗೆ ಮಾರಕವಾಗಬಹುದು," ಎಂದು ಅವರು ನಗುವ ಎಮೋಜಿಯೊಂದಿಗೆ ಟ್ವೀಟ್ ಮಾಡಿದ್ದಾರೆ.

ಅಮೃತಾ ಫಡ್ನವೀಸ್ ಅವರಿಗೆ ಅತ್ಯುತ್ತಮ ತರ್ಕ ಪ್ರಶಸ್ತಿ

ಅಮೃತಾ ಫಡ್ನವೀಸ್ ಅವರಿಗೆ ಅತ್ಯುತ್ತಮ ತರ್ಕ ಪ್ರಶಸ್ತಿ

ಒಟ್ಟು 100ರಲ್ಲಿ ಶೇಕಡಾ 3ರಷ್ಟು ಮುಂಬೈಕರ್‌ಗಳು ರಸ್ತೆಗಳಲ್ಲಿ ಟ್ರಾಫಿಕ್‌ನಿಂದಾಗಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳುವ ಮಹಿಳೆಗೆ ದಿನದ ಅತ್ಯುತ್ತಮ (IL) ತರ್ಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ದಯವಿಟ್ಟು ವೇಗದ ಮೇಲೆ ಮನಸ್ಸು ಮಾಡುವ ಬದಲು ರಜೆಯ ವಿರಾಮ ತೆಗೆದುಕೊಳ್ಳಿ," ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

English summary
3% Divorces In Mumbai Due To Traffic, says Maharashtra former CM Devendra Fadnavis' wife Amruta Fadnavis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X