ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಹೆಡ್ಲಿ ತಪ್ಪೊಪ್ಪಿಗೆ, ರೋಚಕ ಸತ್ಯಗಳ ವಿವರ ಇಲ್ಲಿದೆ

By Mahesh
|
Google Oneindia Kannada News

ಮುಂಬೈ, ಫೆ. 08: ಮುಂಬೈ ಉಗ್ರರ ದಾಳಿ 26/11 ರೂವಾರಿ ಡೇವಿಡ್ ಹೆಡ್ಲಿ ಸುದೀರ್ಘ ವಿಚಾರಣೆ ಈ ದಿನಕ್ಕೆ ಮುಕ್ತಾಯವಾಗಿದೆ. ಶಿಕಾಗೋ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈನ ಸೆಷನ್ಸ್ ಕೋರ್ಟಿನ ವಿಚಾರಣೆ ಎದುರಿಸುತ್ತಿರುವ ಹೆಡ್ಲಿ ತಪ್ಪೊಪ್ಪಿಗೆ ನೀಡಿದ್ದಾನೆ. ಜೊತೆಗೆ ಜಿಹಾದಿ, ಲಷ್ಕರ್, ಹಫೀಜ್ ಸಯೀದ್ ಸೇರಿದಂತೆ ಅನೇಕ ರಹಸ್ಯಗಳನ್ನು ಹೊರ ಹಾಕಿದ್ದಾನೆ.

ಡೇವಿಡ್ ಹೆಡ್ಲಿ ಪರ ವಕೀಲರಾದ ಮಹೇಶ್ ಜೇಠ್ಮಲಾನಿ, ಎಸ್‌ಪಿಸಿ ಉಜ್ವನ್ ನಿಕ್ಕಮ್ ಸೇರಿದಂತೆ ಅಮೆರಿಕ ರಾಯಭಾರ ಕಚೇರಿಯ ಕೆಲವು ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು 5 ಗಂಟೆಗಳ ಕಾಲ ಹೆಡ್ಲಿ ವಿಚಾರಣೆ ನಡೆಯಿತು. ಮುಂದಿನ ವಿಚಾರಣೆ ಮಂಗಳವಾರ (ಫೆಬ್ರವರಿ 09) ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. [1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು]

ಪಾಕಿಸ್ತಾನದಲ್ಲಿ ಜನಿಸಿದ ದಾವೂದ್ ಸಯೀದ್ ಗಿಲಾನಿ ಅಲಿಯಾಸ್ ಡೇವಿಡ್ ಹೆಡ್ಲಿ 26/11 ಮುಂಬೈ ದಾಳಿ ಘಟನೆಗೂ ಮುನ್ನ ಭಾರತಕ್ಕೆ 8 ಬಾರಿ ಬಂದಿದ್ದೆ. ಲಷ್ಕರ್ ಇ-ತೈಯ್ಬಾ ಹಿಂಬಾಲಕನಾಗಿ, ನಿಕಟ ಸಂಪರ್ಕ ಹೊಂದಿದ್ದೆ.

ಭಾರತವೆಂದರೆ ಮುಸ್ಲಿಮ್ ವಿರೋಧಿ ರಾಷ್ಟ್ರ ಎಂದು ಹೇಳಿಕೊಡಲಾಗಿತ್ತು. ನಾನು ಜಿಹಾದಿಯಾಗಿ ಫಿಯಾದಿಯಾನ್(ಆತ್ಮಾಹುತಿ ದಳ) ಸೇರಬೇಕೆಂದುಕೊಂಡಿದ್ದೆ. ಆದರೆ, ಬೇರೆ ರೀತಿ ನೆರವಾಗಲು ನನ್ನನ್ನು ನಿಯೋಜಿಸಲಾಯಿತು.

David Headley Deposition from Chicago

ಮುಂಬೈ ದಾಳಿಯ ಹಿಂದೆ ಪಾಕಿಸ್ತಾನದ ಸೇನೆ ಹಾಗೂ ಪಾಕ್ ಗುಪ್ತಚರ ಸಂಸ್ಥೆ ಐಎಸ್​ಐ ಕೈವಾಡವಿದೆ ಎಂದು ಹೇಳಿರುವ ಆರೋಪಿ ಡೇವಿಡ್ ಹೆಡ್ಲಿಬಾಯ್ಬಿಟ್ಟ ಸತ್ಯಗಳು ಇಲ್ಲಿವೆ:

* ಹೆಡ್ಲಿ ಹೇಳಿಕೆಯಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಹಾಗೂ ಲಷ್ಕರ್ ಇ ತೋಯ್ಬಾ ನಡುವೆ ನಿಕಟ ಸಂಪರ್ಕ ಇರುವುದು ದೃಢಪಟ್ಟಿದೆ: ಉಜ್ವಲ್ ನಿಕಂ.
* ಕಾಶ್ಮೀರದಲ್ಲಿ ಭಾರತ ವಿರುದ್ಧ ಸೆಣಸಲು ಉಗ್ರರಿಗೆ ಆಯುಧ ಖರೀದಿಗಾಗಿ ಡ್ರಗ್ ಸ್ಮಗ್ಲರ್ ಆಗಿದ್ದ ಹೆಡ್ಲಿ, 2002/03ರಲ್ಲಿ ಪೇಶಾವರ್ ನಲ್ಲಿ ಬಂಧಿತನಾಗಿದ್ದ.
* 26/11ರಂದು ಮುಂಬೈ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ಎರಡು ಬಾರಿ ದಾಳಿಯ ವಿಫಲ ಯತ್ನ ನಡೆದಿತ್ತು.
* ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗುವ ಮೊದಲು ದಾವೂದ್ ಗಿಲಾನಿ ಎಂಬ ಹೆಸರನ್ನು ಡೇವಿಡ್ ಹೆಡ್ಲಿ ಎಂದು ಬದಲಾಯಿಸಿಕೊಂಡ.
* ಭಾರತದೆಲ್ಲೆಡೆ ಲಷ್ಕರ್ ಉಗ್ರರ ದಾಳಿ ಮಾಡುವುದೆಲ್ಲವೂ ಕಾಶ್ಮೀರವನ್ನು ಭಾರತ ಮುಕ್ತಗೊಳಿಸಬೇಕು ಎಂಬ ಉದ್ದೇಶದಿಂದ ಎಂದು ಹೆಡ್ಲಿ ಹೇಳಿದ್ದಾನೆ.
* ನಾನು ಮಾಹಿತಿ ಕಲೆ ಹಾಕುವುದು, ಗೂಢಾಚಾರಿಕೆಯಲ್ಲಿ ಪರಿಣಿತನಾಗಲು ನನಗೆ ಜಾಕೀರ್ ರೆಹ್ಮಾನ್ ಲಖ್ವಿ ನೆರವಾಗಿದ್ದರು.
* ಲಷ್ಕರ್ ಇ ತೋಯ್ಬಾದ ಮುಖ್ಯಸ್ಥ ಹಫೀಜ್ ಸಯೀದ್ ಅವರು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಟಕ್ಕೆ ಉತ್ತೇಜಿಸುವ ಮಾತುಗಳನ್ನೇ ಸದಾ ಅಡುತ್ತಿದ್ದರು.
* [email protected] ಇಮೇಲ್ ಮೂಲಕ ಸಾಜಿದ್ ಮೀರ್ ಅವರು ನನ್ನನ್ನು ಸಂಪರ್ಕಿಸುತ್ತಿದ್ದರು.

* ಮುಂಬೈ ನಗರದ ಪ್ರಮುಖ ತಾಣಗಳ ವಿಡಿಯೋ ಮಾಡಿಕೊಳ್ಳಲು ಸಾಜಿದ್ ನನಗೆ ಸಲಹೆ ನೀಡಿದ್ದ.
* ಮುಂಬೈ ದಾಳಿಯ ಬಳಿಕ ಮತ್ತೆ ನಾನು ಭಾರತಕ್ಕೆ ಲಾಹೋರ್​ನಿಂದ ದೆಹಲಿಗೆ , 2009ರ ಮಾರ್ಚ್ 7ರಂದು ಆಗಮಿಸಿದ್ದೆ.
* ವೀಸಾ ಮಾಡಿಸಿಕೊಳ್ಳಲು ತಂದೆ-ತಾಯಿ ಹೆಸರು, ನನ್ನ ವಿಳಾಸ, ಜನ್ಮ ದಿನಾಂಕ... ಈ ಎಲ್ಲಾ ಮಾಹಿತಿಯನ್ನು ತಪ್ಪಾಗಿ ನೀಡಿದ್ದೆ.ಜಿಹಾದಿ ಎಂದರೇನು?: ಇಸ್ಲಾಮಿನ ಶತ್ರುಗಳ ವಿರುದ್ಧ ಹೋರಾಟ ನಡೆಸುವುದೇ ಜಿಹಾದಿ. ಭಾರತ ಇಸ್ಲಾಮಿನ ಶತ್ರು. ಕಾಶ್ಮೀರಕ್ಕಾಗಿ ಹೋರಾಟ ಮಾಡಲು ನಾನು ಸಿದ್ಧನಿದ್ದೆ. ಆದರೆ, ಆತ್ಮಾಹುತಿ ದಳ ಸೇರಲು ನಾನು ತುಂಬಾ ವಯಸ್ಸಾದವನು ಎಂದು ಜಾಕೀರ್ ರೆಹ್ಮಾನ್ ಗೆ ಅನ್ನಿಸಿತ್ತು. ಲಷ್ಕರ್ ಇ ತೋಯ್ಬಾದ ಐದು ಮಿಲಿಟರಿ ಕ್ಯಾಂಪಿಗೆ ಭೇಟಿ ನೀಡಿದೆ.

* ಐಎಸ್ಐ ಆಧಿಕಾರಿ ಮೇಜರ್ ಅಲಿ ಭೇಟಿ ಮಾಡಿದೆ. ಅವರಿಂದ ಇಕ್ಬಾಲ್ ಪರಿಚಯವಾಯಿತು. ಸಾಜಿದ್ ಮೀರ್ ಜೊತೆ ನಿರಂತರ ಸಂಪರ್ಕ ಇದ್ದೇ ಇತ್ತು.
* ಡೆನ್ಮಾರ್ಕಿನ ಮಿಕ್ಕಿ ಮೌಸ್ ಆಪರೇಷನ್ ಮೇಲೆ ನಿಗಾ ವಹಿಸಿದ್ದರಿಂದ ಮುಂಬೈ ದಾಳಿ ಬಗ್ಗೆ ಯಾವುದೇ ಅದೇಶ ಬಂದಿರಲಿಲ್ಲ.
* ನವೆಂಬರ್ 26ರಂದು ಸಾಜಿದ್ ಅಲಿ ನನಗೆ ಎಸ್ಎಂಎಸ್ ಕಳಿಸಿ ಟಿವಿ ನೋಡು ಆಪರೇಷನ್ ಶುರು ಎಂದ. ಕೊನೆಗೂ ದಾಳಿ ಮೊದಲುಗೊಂಡಿತ್ತು.


(ಒನ್ ಇಂಡಿಯಾ ಸುದ್ದಿ)

English summary
David Headley who began testifying before a court in Mumbai in connection with the 26/11 trial has said that it was the Lashkar-e-Taiba which inspired him to carry out this job. I was a follower of the Lashkar-e-Taiba and its leadership inspired me, he also said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X