ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ 26 ವರ್ಷಗಳ ದಾಖಲೆ ಮುರಿದ ಮಳೆ

|
Google Oneindia Kannada News

ಮುಂಬೈ, ಸಪ್ಚೆಂಬರ್.23: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಒಂದೇ ದಿನ ಸುರಿದ ಮಳೆಯು 26 ವರ್ಷಗಳ ದಾಖಲೆಯನ್ನೇ ಮುರಿದಿದೆ. ಕಳೆದ 24 ಗಂಟೆಗಳಲ್ಲಿ 273.6 ಮಿಮಿ ನಷ್ಟು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಂಗಳವಾರ ಸಂಜೆ ಶುರುವಾದ ವರುಣನ ರೌದ್ರನರ್ತನ ಬುಧವಾರ ಬೆಳಗ್ಗೆವರೆಗೂ ಮುಂದುವರಿದಿದ್ದು, ವರುಣನ ಅಬ್ಬರಕ್ಕೆ ವಾಣಿಜ್ಯನಗರಿ ಈಗಾಗಲೇ ತತ್ತರಿಸಿ ಹೋಗಿದೆ. 1994 ರಿಂದ 2020ರ ಸಪ್ಟೆಂಬರ್ ಅವಧಿಯಲ್ಲಿ ಸುರಿದ 2ನೇ ಅತಿದೊಡ್ಡ ಮಳೆಯಾಗಿದೆ. ಇನ್ನು, 1974 ರಿಂದ 2020 ಸಪ್ಟೆಂಬರ್ ಅವಧಿಯಲ್ಲಿ ಸುರಿದ 4ನೇ ಅತಿದೊಡ್ಡ ಮಳೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಹಾರಾಷ್ಟ್ರ, ನವದೆಹಲಿಯಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳ ವಿವರಮಹಾರಾಷ್ಟ್ರ, ನವದೆಹಲಿಯಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳ ವಿವರ

ಮಳೆಯ ಹೊಡೆತಕ್ಕೆ ರಾತ್ರಿ ಕಳೆದು ಬೆಳಗಾಗುವಷ್ಟರಷ್ಟೇ ಮುಂಬೈ ನಗರದ ಚಿತ್ರಣವೇ ಬದಲಾಗಿದೆ. ಮಳೆ ನೀರಿನ ನಡುವೆ ಸಿಲುಕಿದ ವಾಹನ ಸವಾರರ ಪರದಾಟ, ಮನೆಗಳಿಂದ ಹೊರ ಬರುವುದಕ್ಕೂ ಆಗದಂತೆ ದಿಗ್ಬಂಧನಕ್ಕೆ ಒಳಗಾಗಿರುವ ಜನರು, ಬೆಳ್ಳಂಬೆಳಗ್ಗೆ ಹಿಡಿದ ಮಳೆಯಿಂದಾಗಿ ಜನಜೀವನ ಸ್ತಬ್ಧಗೊಂಡಿದೆ.

ಮುಂಬೈ ಚಿತ್ರಣ ಬದಲಿಸಿದ 21 ಗಂಟೆಗಳ ಮಳೆ

ಮುಂಬೈ ಚಿತ್ರಣ ಬದಲಿಸಿದ 21 ಗಂಟೆಗಳ ಮಳೆ

ಮಂಗಳವಾರ ಬೆಳಿಗ್ಗೆ 8.30 ರಿಂದ ಬುಧವಾರ ಬೆಳಿಗ್ಗೆ 5.30ರ ಮಧ್ಯೆ ಉಪನಗರಗಳ ಪ್ರತಿನಿಧಿಯಾದ ಸ್ಯಾಂಟಕ್ರೂಜ್ ಹವಾಮಾನ ಕೇಂದ್ರವು 273.6 ಮಿಮೀ ಅತಿಹೆಚ್ಚು ಮಳೆಯಾಗಿದೆ. ದಕ್ಷಿಣ ಮುಂಬೈನ ಪ್ರತಿನಿಧಿ ಕೊಲಾಬಾ 122.2 ಮಿಮೀ ಭಾರಿ ಮಳೆಯಾಗಿದೆ ಎಂದು ತಿಳಿಸಿದೆ. ಉಪನಗರಗಳಲ್ಲಿ ಮಂಗಳವಾರ ಸಂಜೆ 5.30 ರಿಂದ 11.30 ಅಂದರೆ ಆರು ಗಂಟೆಗಳಲ್ಲಿ 107 ಮಿ.ಮೀ ಮಳೆಯಾಗಿದೆ. ದಕ್ಷಿಣ ಮುಂಬೈದಲ್ಲಿ ಮಂಗಳವಾರ ಸಂಜೆ 5.30 ರಿಂದ ರಾತ್ರಿ 11.30 ಗಂಟೆವರೆಗೂ 89 ಮಿ.ಮೀ ಮಳೆಯಾಗಿದೆ. ಮಂಗಳವಾರ ರಾತ್ರಿ 11.30 ರಿಂದ ಬುಧವಾರ ಬೆಳಗ್ಗೆ 5.30 ರವರೆಗೆ 166.6 ಮಿ.ಮೀ ಮಳೆಯಾಗಿದೆ.

ಮುಂಬೈನ ಉಪನಗರದಲ್ಲಿ ರಾತ್ರಿಯಿಡೀ ಸುರಿದ ಮಳೆ

ಮುಂಬೈನ ಉಪನಗರದಲ್ಲಿ ರಾತ್ರಿಯಿಡೀ ಸುರಿದ ಮಳೆ

ಕಳೆದ ಮಂಗಳವಾರ ಸಂಜೆಯಿಂದ ಶುರುವಾದ ಮಳೆಯು ರಾತ್ರಿಯಿಡೀ ಸುರಿದಿದೆ. ಕೊಲಂಬಾದಿಂದ ಭಾಯಂದರ್ ‌ವರೆಗಿನ ಮುಂಬೈನ ಸಂಪೂರ್ಣ ಪಶ್ಚಿಮ ಭಾಗವು ದಟ್ಟವಾದ ಮೋಡದ ಮುಸುಕಿದ ವಾತಾವರಣವಿದ್ದು, ಮಂಗಳವಾರ ಸಂಜೆಯಿಂದ ಭಾರೀ ಮಳೆಯಾಗಿದೆ. ರಾತ್ರಿ 3.30 ರಿಂದ 5.30ರ ನಡುವೆ ಗುಡುಗು ಸಹಿತ ಭಾರಿ ಮಳೆಯಾಗಿರುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಪಶ್ಚಿಮ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಜನರಲ್ ಕೆ.ಎಸ್.ಹೊಸಲಿಕರ್ ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲೇ ಸುರಿದ ಮಳೆಯ ದಾಖಲೆ

ಕಳೆದ 24 ಗಂಟೆಗಳಲ್ಲೇ ಸುರಿದ ಮಳೆಯ ದಾಖಲೆ

ಮಹಾರಾಷ್ಟ್ರದ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯು ಹೊಸ ದಾಖಲೆಯನ್ನು ಬರೆದಿದೆ. 1981 ರಿಂದ 2020ರ ಅವಧಿಯಲ್ಲಿ ಮುಂಬೈನಲ್ಲಿ ಸುರಿದ ನಾಲ್ಕನೇ ಅತಿದೊಡ್ಡ ಮಳೆ ಇದಾಗಿದೆ. ಕಳೆದ ಸಪ್ಟೆಂಬರ್.20, 2016ರಲ್ಲಿ 303.7 ಮಿ.ಮೀ ಮಳೆಯಾಗಿದೆ. ಸಪ್ಟೆಂಬರ್.23, 1993ರಲ್ಲಿ 312.4 ಮಿ.ಮೀ ಮಳೆಯಾಗಿದ್ದು, ಇದಕ್ಕೂ ಮೊದಲು ಅಂದರೆ ಸಪ್ಟೆಂಬರ್.23ರ 1981ರಲ್ಲಿ 318.2 ಮಿ.ಮೀ ಮಳೆಯಾಗಿತ್ತು.

ಮಳೆಯ ಹೊಡೆತಕ್ಕೆ ಉಪ ನಗರ ರೈಲ್ವೆ ಸಂಚಾರ ರದ್ದು

ಮುಂಬೈನಲ್ಲಿ ಸುರಿದ ಮಳೆಯಿಂದ ಸಬ್ ಅರ್ಬನ್ ರೈಲ್ವೆ ಸಂಚಾರವನ್ನು ರದ್ದುಗೊಳಿಸಲಾಗಿದೆ. ಠಾಣೆಯ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ವಶಿ ನಡುವಿನ ರೈಲ್ವೆ ಸಂಚಾರವು ಬಂದ್ ಆಗಿದೆ. ರೈಲ್ವೆ ಹಳಿಗಳ ಮೇಲೆ ನೀರು ನಿಂತಿದ್ದು ಸಿಯಾನ್-ಕುರ್ಲಾ, ಚುನಭಟ್ಟಿ ಕುರ್ಲಾ ಮತ್ತು ಮಸೀದ್ ಸಬ್ ಅರ್ಬನ್ ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದೂರದ ರೈಲುಗಳ ಸಂಚಾರ ಬಂದ್ ಅಥವಾ ಸಮಯ ಬದಲಾವಣೆ ಮಾಡಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮಳೆ ಪ್ರಮಾಣ ಅಳತೆ ಮಾಡುವುದು ಹೇಗೆ?

ಮಳೆ ಪ್ರಮಾಣ ಅಳತೆ ಮಾಡುವುದು ಹೇಗೆ?

ಮಳೆಯ ದಾಖಲೆಯ ಪ್ರಕಾರ, 15 ಮಿ.ಮೀಗಿಂತ ಕಡಿಮೆಯಾಗಿದ್ದಲ್ಲಿ ಅಲ್ಪ, 15.6 ರಿಂದ 64.4 ಮಿ.ಮೀ ಮಧ್ಯಮ, 64.5 ರಿಂದ 115.5 ಮಿ. ಮೀ ಹೆಚ್ಚು, 115.6 ರಿಂದ 204.4 ಮಿ.ಮೀ ಅತಿಹೆಚ್ಚು, 204.5 ಮಿ.ಮೀ ಗಿಂತ ಹೆಚ್ಚಾಗಿದ್ದಲ್ಲಿ ಭಾರಿ ಮತ್ತು 300 ಮಿ.ಮೀ ಗಿಂತ ಹೆಚ್ಚಾಗಿದ್ದಲ್ಲಿ ಅಸಾಧಾರಣ ಭಾರಿ ಮಳೆ ಎಂದು ಭಾರತೀಯ ಹವಾಮಾನ ಇಲಾಖೆಯು ಗುರುತಿಸಿದೆ.

English summary
24-Hours Heavy Rain Beats Past 26 Years Record In Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X