ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಕೀಯ ಪರೀಕ್ಷೆಯಲ್ಲಿ ಅವಳಲ್ಲ "ಅವನು" ಎಂದು ವರದಿ: ನ್ಯಾಯಾಲಯದಲ್ಲಿ ಮಹಿಳೆಗೆ ಸಿಕ್ಕಿತು ಜಯ

|
Google Oneindia Kannada News

ಮುಂಬೈ, ಮೇ 14: ವಿಶೇಷ ಪ್ರಕರಣವೊಂದರಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ 'ಪುರುಷ' ಎಂದು ಘೋಷಿಸಿದ್ದ ಮಹಿಳೆಗೆ ಪೊಲೀಸ್ ಉದ್ಯೋಗ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಹೈಕೋರ್ಟ್ ತೀರ್ಪು ನೀಡಿದೆ. ಎರಡು ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.

ಈ ಪ್ರಕರಣದಲ್ಲಿ ಅನುಕಂಪದ ದೃಷ್ಟಿಯಿಂದ ಮಹಿಳೆಗೆ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಅಲ್ಲದ ಬೇರೆ ಉದ್ಯೋಗ ಕೊಡಲು ನಿರ್ಧರಿಸಿದೆ ಎಂದು ಕಳೆದ ವಾರ ಮಹಾರಾಷ್ಟ್ರ ಸರ್ಕಾರದ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಕೋರ್ಟ್‌ಗೆ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ನ್ಯಾಯಮೂರ್ತಿ ರೇವತಿ ಮೋಹಿತೆ ದೇರೆ ಮತ್ತು ಮಾಧವ್ ಜಮಾದಾರ್ ಅವರನ್ನೊಳಗೊಂಡ ಹೈಕೋರ್ಟ್‌ ಪೀಠ ಮಹಿಳೆಗೆ ಪೊಲೀಸ್ ಉದ್ಯೋಗ ನೀಡಲು ಆದೇಶ ನೀಡಿದೆ.

ಮಹಿಳೆಯ ವಿದ್ಯಾರ್ಹತೆಗಳನ್ನು ಗಮನದಲ್ಲಿಟ್ಟುಕೊಂಡು ನಾಸಿಕ್ ವಿಶೇಷ ಐಜಿ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಶಿಫಾರಸ್ಸು ಮಾಡುವುದಾಗಿ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ತಿಳಿಸಿದ್ದಾರೆ.

23 Year old woman Declared Male in medical test: Wins Case

ಅರ್ಜಿದಾರ ಮಹಿಳೆಗೆ ಉದ್ಯೋಗದ ನಿಯಮ ಮತ್ತು ಪ್ರಯೋಜನಗಳು ಪ್ರಮಾಣಿತ ಕಾರ್ಯವಿಧಾನದ ಮೂಲಕ ನೇಮಕಗೊಳ್ಳುವ ಅವರ ಹಂತದ ಇತರ ಉದ್ಯೋಗಿಗಳಿಗೆ ಸಮಾನವಾಗಿರುತ್ತದೆ ಎಂದು ಪೀಠಕ್ಕೆ ತಿಳಿಸಿದ್ದಾರೆ. ಅಡ್ವೊಕೇಟ್ ಜನರಲ್ ಮುಖಾಂತರ ಮಹಾರಾಷ್ಟ್ರ ಸರ್ಕಾರದ ಸಲ್ಲಿಕೆಯನ್ನು ಅಂಗೀಕರಿಸಿರುವ ಪೀಠ ಮಹಿಳೆಯ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಎರಡು ತಿಂಗಳ ಕಾಲಾವಕಾಶ ನೀಡಿದೆ.

ಪ್ರಕರಣ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌ ಪೀಠ "ಇದೊಂದು ಅತ್ಯಂತ ದುರದೃಷ್ಟ ಸಂಗರಿ. ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ತಪ್ಪು ಕಂಡುಬಂದಿಲ್ಲ, ಅವರು ಮಹಿಳೆಯಾಗಿ ತಮ್ಮ ವೃತ್ತಿಜೀವನವನ್ನು ಮುಂದುವರೆಸಲಿದ್ದಾರೆ" ಎಂದು ಹೇಳಿದೆ.

23 Year old woman Declared Male in medical test: Wins Case

ಏನಿದು ಪ್ರಕರಣ?

ಪರಿಶಿಷ್ಟ ಜಾತಿ ವರ್ಗದ ಅಡಿಯಲ್ಲಿ ನಾಸಿಕ್ ಗ್ರಾಮೀಣ ಪೊಲೀಸ್ ನೇಮಕಾತಿಗೆ 2018ರಲ್ಲಿ 23 ವರ್ಷದ ಮಹಿಳೆ ಅರ್ಜಿ ಸಲ್ಲಿಸಿದ್ದರು. ಲಿಖಿತ, ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮಹಿಳೆ ಇನ್ನೇನು ಕೆಲಸ ಸಿಕ್ಕೇಬಿಟ್ಟಿತು ಎನ್ನುವ ಖುಷಿಯಲ್ಲಿದ್ದರು. ಆದರೆ ನಂತರ ನಡೆದ ವೈದ್ಯಕೀಯ ಪರೀಕ್ಷೆಯ ಸಂದರ್ಭದಲ್ಲಿ ಮಹಿಳೆಗೆ ಗರ್ಭಾಶಯ ಮತ್ತು ಅಂಡಾಶಯಗಳಿಲ್ಲ ಎಂದು ವರದಿ ನೀಡಿತ್ತು. ಮತ್ತೊಂದು ಪರೀಕ್ಷೆಯಲ್ಲಿ ಮಹಿಳೆಗೆ ಗಂಡು ಮತ್ತು ಹೆಣ್ಣು ವರ್ಣತಂತು ಹೊಂದಿದ್ದು, ಮಹಿಳೆಯನ್ನು "ಪುರುಷ" ಎಂದು ವರದಿ ನೀಡಿತ್ತು.

ನ್ಯಾಯಕ್ಕಾಗಿ ಕೋರ್ಟ್‌ಗೆ ಮೆಟ್ಟಿಲು ಹತ್ತಿದ್ದ ಮಹಿಳೆ

ವೈದ್ಯಕೀಯ ಪರೀಕ್ಷೆ ವರದಿಯಿಂದ ಸಿಕ್ಕಿದ್ದ ಕೆಲಸ ಕಳೆದುಕೊಂಡಿದ್ದ ಮಹಿಳೆ ನ್ಯಾಯಕ್ಕಾಗಿ ಕೋರ್ಟ್‌ ಮೊರೆ ಹೋಗಿದ್ದರು. ಸುಧೀರ್ಘ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ ಮಹಿಳೆಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಕೊಡುವಂತೆ ಆದೇಶ ನೀಡಿದೆ. ಈ ಮೂಲಕ ಪೊಲೀಸ್ ಆಗಬೇಕೆಂಬ ತನ್ನ ಕನಸನ್ನು ಮಹಿಳೆ ನನಸು ಮಾಡಿಕೊಂಡಿದ್ದಾರೆ.

English summary
The bench directed to state government and the police department two months to complete the process appointment in the state police department of the woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X