ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ; ಬಾವಿಗೆ ಬಿದ್ದ ಬಸ್, ಆಟೋ, 20 ಸಾವು

|
Google Oneindia Kannada News

ಮುಂಬೈ, ಜನವರಿ 28 : ಬಸ್ ಮತ್ತು ಆಟೋ ಬಾವಿಗೆ ಬಿದ್ದು 20 ಜನರು ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 30 ಜನರನ್ನು ರಕ್ಷಣೆ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಮಹಾರಾಷ್ಟ್ರದ ನಾಸಿಕ್ ಸಮೀಪ ಮಂಗಳವಾರ ಸಂಜೆ ಈ ಅಪಘಾತ ನಡೆದಿದೆ. ಮುಖಾಮುಖಿ ಡಿಕ್ಕಿಯಾದ ಆಟೋ ಮತ್ತು ಬಸ್ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಉರುಳಿವೆ. ಮೊದಲು ಆಟೋ ಬಿದ್ದಿದ್ದು, ಬಳಿಕ ಬಸ್ ಅದರ ಮೇಲೆ ಉರುಳಿದೆ.

ಧಾರವಾಡದಲ್ಲಿ ರಸ್ತೆ ಅಪಘಾತ; ಸ್ವಾಮೀಜಿ ಸಾವುಧಾರವಾಡದಲ್ಲಿ ರಸ್ತೆ ಅಪಘಾತ; ಸ್ವಾಮೀಜಿ ಸಾವು

ನಾಸಿಕ್ ಗ್ರಾಮಾಂತರ ಎಸ್‌ಪಿ ಆರತಿ ಸಿಂಗ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದುವರೆಗೂ 20 ಶವಗಳನ್ನು ಹೊರತೆಗೆಯಲಾಗಿದ್ದು, 30 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದರೂ ದುಡ್ಡೇ ದುಡ್ಡು! ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಬಿದ್ದರೂ ದುಡ್ಡೇ ದುಡ್ಡು!

20 Dead After Bus And Rickshaw Fell Into Well

ಈ ಅಪಘಾತದಲ್ಲಿ 18 ಜನರು ಗಾಯಗೊಂಡಿದ್ದು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಶಬನಾ ಆಜ್ಮಿ ಕಾರು ಅಪಘಾತ: ಚಾಲಕನ ವಿರುದ್ಧ ಎಫ್ಐಆರ್ ಶಬನಾ ಆಜ್ಮಿ ಕಾರು ಅಪಘಾತ: ಚಾಲಕನ ವಿರುದ್ಧ ಎಫ್ಐಆರ್

ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ನ ಒಂದು ಟೈರ್ ಸ್ಫೋಟಗೊಂಡಾಗ ಚಾಲಕ ನಿಯಂತ್ರಣ ಕಳೆದುಕೊಂಡನು. ಆಗ ಆಟೋಗೆ ಬಸ್ ಡಿಕ್ಕಿ ಹೊಡೆದಿದ್ದು, ಎರಡೂ ವಾಹನಗಳು ಬಾವಿಗೆ ಬಿದ್ದವು.

ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರವನ್ನು ಮಹಾರಾಷ್ಟ್ರ ಸರ್ಕಾರ ಘೋಷಣೆ ಮಾಡಿದೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ ಎಂದು ಭರವಸೆ ನೀಡಿದೆ.

ಬಾವಿಗೆ ಬಿದ್ದ ಬಸ್, ಆಟೋ

English summary
20 bodies have been recovered and 30 persons rescued after A bus and a rickshaw fell into a well after ramming into each other. Incident reported in Deola area of Nashik, Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X