ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ದಿನದ ಹಸುಗೂಸಿಗೆ ವಕ್ಕರಿಸಿದ ಕೊರೊನಾ ವೈರಸ್

|
Google Oneindia Kannada News

ಮುಂಬೈ, ಏಪ್ರಿಲ್ 30: ಮಹಾಮಾರಿ ಕೊರೊನಾ ವೈರಸ್‌ಗೆ 20 ದಿನ ಹಸುಗೂಸು ತುತ್ತಾಗಿದೆ. ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ್ ನಗರದಲ್ಲಿ 20 ದಿನದ ಮಗುವಿಗೆ ಕೊರೊನಾ ವೈರಸ್ ತಗುಲಿರುವುದು ಖಚಿತವಾಗಿದೆ.

Recommended Video

ಮೇ 3 ರ ನಂತರ ಎಫೆಕ್ಟ್ ಇನ್ನೂ ಜಾಸ್ತಿಯಾಗುತ್ತೆ,ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ | DKS | Oneindia Kannada

20 ದಿನದ ಗಂಡು ಮಗು ಸೇರಿದಂತೆ ಇತರೆ ಆರು ಮಂದಿಗೆ ಕೊವಿಡ್ ಪಾಸಿಟಿವ್ ಆಗಿದ್ದು, ಕಲ್ಯಾಣ್ ನಗರ ಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 162ಕ್ಕೆ ಏರಿಕೆಯಾಗಿದೆ. ಇದರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಅಧಿಕಾರಿ ಡಾ ರಾಜು ಲೊವಾಂಗರೆ ಮಾಹಿತಿ ನೀಡಿದ್ದಾರೆ.

ತಂದೆಯಿಂದಲೇ ಬಂತು 3 ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕುತಂದೆಯಿಂದಲೇ ಬಂತು 3 ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕು

ಈಗಷ್ಟೇ ಹೊರಜಗತ್ತನ್ನು ನೋಡುತ್ತಿರುವ ಮಗುವಿಗೆ ತನ್ನ ತಾಯಿಯಿಂದ ಸೋಂಕು ತಗುಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆ ಮಗುವಿನ ತಾಯಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

20 Days Old Child Tested Corona Positive In Thane

ಕೊರೊನಾ ವೈರಸ್‌ ಎಲ್ಲ ವಯಸ್ಸಿನವರಿಗೆ ತಗುಲಿದೆ. ಆದರೆ, ಆರಂಭದಲ್ಲಿ ಅಂಕಿ ಅಂಶ ಗಮನಿಸಿದರೆ ಹಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ಹೆಚ್ಚು ಸೋಂಕಿ ಕಾಣಿಸಿಕೊಂಡಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳಿಗೂ ಕೊರೊನಾ ಅಂಟಿಕೊಳ್ಳುತ್ತಿದೆ.

ಈ ಹಿಂದೆ ಮಹಾರಾಷ್ಟ್ರದಲ್ಲಿ ಮೂರು ವರ್ಷದ ಮಗುವಿಗೆ ಕೊವಿಡ್ ಸೋಂಕು ದೃಢಪಟ್ಟಿತ್ತು. ಠಾಣೆಯ ಕಲ್ಯಾಣ್ ನಗರದಲ್ಲೇ ಈ ಮಗು ನೆಲೆಸಿರುವುದು ಗಮನಾರ್ಹ.

ಮಹಾಮಾರಿ ಕೊರೊನಾ ಸೋಂಕಿನಿಂದ 14 ತಿಂಗಳ ಮಗು ಸಾವುಮಹಾಮಾರಿ ಕೊರೊನಾ ಸೋಂಕಿನಿಂದ 14 ತಿಂಗಳ ಮಗು ಸಾವು

ದೆಹಲಿಯಲ್ಲಿ 45 ದಿನ ಮಗು ಕೊರೊನಾ ಸೋಂಕಿನಿಂದ ಮೃತಪಟ್ಟಿತ್ತು. ಗುಜರಾತ್‌ನ ಅಹಮದಬಾದ್‌ನಲ್ಲಿ 14 ತಿಂಗಳು ಮಗು ಕೊವಿಡ್‌ನಿಂದ ಸಾವನ್ನಪ್ಪಿತ್ತು. ತಮಿಳುನಾಡಿನಲ್ಲಿ ಸುಮಾರು 120ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ ಪತ್ತೆಯಾಗಿದೆ ಎಂಬ ಮಾಹಿತಿ ಇದೆ.

English summary
20 days old baby boy tested positive for coronavirus In kalyan towan of maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X