ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಸೇನೆಯ ಉದ್ಧವ್ ಠಾಕ್ರೆಯಿಂದ ಬಿಜೆಪಿಗೆ ಮತ್ತೆ ತಪರಾಕಿ!

|
Google Oneindia Kannada News

ಮುಂಬೈ, ಜನವರಿ 10: "ಮೊದಲು ರೈತರ ಸಮಸ್ಯೆಗಳನ್ನು ಪರಿಹರಿಸಿ. ನಂತರ ಮೈತ್ರಿ ಬಗ್ಗೆ ಮಾತನಾಡಿ" ಎಂದು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಬಿಜೆಪಿಗೆ ತಪರಾಕಿ ಕೊಟ್ಟಿದ್ದಾರೆ!

ಬಿಜೆಪಿಯನ್ನು ಹೂತುಹಾಕುತ್ತೇನೆ ಎಂದ ಶಿವಸೇನೆ ನಾಯಕ!ಬಿಜೆಪಿಯನ್ನು ಹೂತುಹಾಕುತ್ತೇನೆ ಎಂದ ಶಿವಸೇನೆ ನಾಯಕ!

ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಪುಡಿ ಪುಡಿ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಠಾಕ್ರೆ, "ಮೊದಲು ರೈತರ ಸಮಸ್ಯೆಗಳನ್ನು ಪರಿಹರಿಸಿ, ನಂತರ ಮೈತ್ರಿ ಬಗ್ಗೆ ಮಾತನಾಡಿ" ಎಂದು ಖಡಕ್ಕಾಗಿ ಹೇಳಿದ್ದಾರೆ.

ಪ್ರಧಾನಿ ಕುರ್ಚಿ ಮೇಲೆ ಗಡ್ಕರಿ ಟವೆಲ್; ಶಿವಸೇನಾ ಸಂಸದನ ಲೆಕ್ಕಾಚಾರ ಪ್ರಧಾನಿ ಕುರ್ಚಿ ಮೇಲೆ ಗಡ್ಕರಿ ಟವೆಲ್; ಶಿವಸೇನಾ ಸಂಸದನ ಲೆಕ್ಕಾಚಾರ

ಮಹಾರಾಷ್ಟ್ರದ ಮರಾಠಾವಾಡದಲ್ಲಿ ರೈತರ ಸಭೆಯೊಂದರಲ್ಲಿ ಬುಧವಾರ ಠಾಕ್ರೆ ಮಾತನಾಡುತ್ತಿದ್ದರು. 'ರೈತರ ಸಾಲಮನ್ನಾ ಎಂಬುದು ಕಾಗದದ ಘೋಷಣೆಯಾಗಿದೆ ಅಷ್ಟೆ. ಬೆಳೆವಿಮೆ ಎಂಬುದು ಬಹುದೊಡ್ಡ ಹಗರಣವಾಗಿದೆ. ಇದರಿಂದ ಎಷ್ಟು ರೈತರಿಗೆ ಲಾಭವಾಗಿದೆ ಹೇಳಿ' ಎದು ಅವರು ಪ್ರಶ್ನಿಸಿದರು.

1st solve farmer issues, then talk about coalition: Shiva Sena to BJP

ಗುರುವಾರ ಮಹಾರಾಷ್ಟ್ರದ ಸೋಲಾಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ಠಾಕ್ರೆ ಅವರು ನೀಡಿದ ಹೇಳಿಕೆ ಬಿಜೆಪಿ ವಲಯದಲ್ಲಿ ಇರಿಸುಮುರಿಸುಂಟುಮಾಡಿದೆ.

ತಾಕತ್ತಿದ್ರೆ NDA ಯಿಂದ ಹೊರಹೋಗಿ... ಶಿವಸೇನೆಗೆ RSS ಖಡಕ್ ಎಚ್ಚರಿಕೆ?!ತಾಕತ್ತಿದ್ರೆ NDA ಯಿಂದ ಹೊರಹೋಗಿ... ಶಿವಸೇನೆಗೆ RSS ಖಡಕ್ ಎಚ್ಚರಿಕೆ?!

"ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಪುಡಿ ಪುಡಿ ಮಾಡುತ್ತೇನೆ" ಎಂದಿದ್ದ ಅಮಿತ್ ಶಾ ಹೇಳಿಕೆ ಶಿವಸೇನೆ ನಾಯಕರನ್ನು ಕೆರಳಿಸಿದೆ. ಶಿವಸೇನೆ ಮುಖಂಡ ರಾಮದಾಸ್ ಕದಮ್ ಈ ಹೇಳಿಕೆ ಪ್ರತಿಕ್ರಿಯೆ ನೀಡಿ, "ನಮ್ಮ ತಂಟೆಗೆ ಬಂದರೆ ಬಿಜೆಪಿಯನ್ನು ನಾವು ಹೂತು ಹಾಕುತ್ತೇವೆ" ಎಂಬ ಹೇಳಿಕೆ ನೀದಿದ್ದರು.

English summary
Shiv Sena chief Uddhav Thackeray on Wednesday asked the Bharatiya Janata Party (BJP) to first focus on farmer's issue and then talk about the coalition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X