ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1993 ಮುಂಬೈ ಸ್ಫೋಟ ಆರೋಪಿ ದೊಸ್ಸಾಗೆ ವಿಧಿಯೇ ನೀಡಿತು ಮರಣದಂಡನೆ!

|
Google Oneindia Kannada News

ಮುಂಬೈ, ಜೂನ್ 28: ಇಂದು (ಜೂನ್ 28) ಬೆಳಗ್ಗೆ ತಾನೇ ಎದೆನೋವಿನಿಂದ ಮುಂಬೈಯ ಜೆ.ಜೆ.ಆಸ್ಪತ್ರೆಗೆ ಸೇರಿದ್ದ 1993 ರ ಮುಂಬೈ ಸ್ಪೋಟದ ಆರೋಪಿ ಮುಸ್ತಫಾ ದೊಸ್ಸಾ ಆಸ್ಪತ್ರೆಯಲ್ಲೇ ಸಾವಿಗೀಡಾಗಿದ್ದಾನೆ. ಅನಿಯಂತ್ರಿತ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಮುಸ್ತಫಾ ಬೆಳಗ್ಗೆ ಎದೆನೋವು ಮತ್ತು ಸೋಂಕಿನಿಂದಾಗಿ ಆಸ್ಪತ್ರೆ ಸೇರಿದ್ದ.

1993ರ ಮುಂಬೈ ಸರಣಿ ಸ್ಫೋಟ; ಅಬು ಸಲೇಂ, ಮುಸ್ತಾಫಾ ಅಪರಾಧಿ: ಟಾಡಾ ಕೋರ್ಟ್1993ರ ಮುಂಬೈ ಸರಣಿ ಸ್ಫೋಟ; ಅಬು ಸಲೇಂ, ಮುಸ್ತಾಫಾ ಅಪರಾಧಿ: ಟಾಡಾ ಕೋರ್ಟ್

ತನಗೆ ಹೃದಯ ಸಂಬಂಧಿ ಕಾಯಿಲೆ ಇದೆಯೆಂದೂ, ತನಗೆ ಬೈಪಾಸ್ ಸರ್ಜರಿಗೆ ಒಳಗಾಗಬೇಕಿದೆ ಎಂದೂ ಆತ ನ್ಯಾಯಾಲಯಕ್ಕೆ ತಿಳಿಸಿದ್ದ. 1993 ರ ಮಾರ್ಚ್ 12 ರಂದು ಮುಂಬೈನ ವಿವಿಧೆಡೆ ಸ್ಫೋಟಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ 257 ಮಂದಿ ಸಾವನ್ನಪ್ಪಿ, 700 ಕ್ಕೂ ಅಧಿಕ ಜನ ಗಂಭೀರ ಗಾಯಗೊಂಡಿದ್ದರು. ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ್ದ ಮುಂಬೈನ ಟಾಡಾ ನ್ಯಾಯಾಲಯ ಇತ್ತೀಚೆಗಷ್ಟೆ ದೊಸ್ಸಾನನ್ನು ಆರೋಪಿ ಎಂದು ಘೋಷಿಸಿತ್ತು.

1993 Mumbai blasts convict Mustafa Dossa dies in Mumbai

ಮುಂಬೈ ಸ್ಫೋಟದ ರೂವಾರಿಗಳಿಂದ ಆಜ್ಞೆ ಪಡೆದು ಪ್ರಮುಖ ಆರೋಪಿಗಳಿಗೆ ಶಸ್ತ್ರಾಸ್ತ್ರ ಹಾಗೂ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡಿದ ಆರೋಪವನ್ನು ಮುಸ್ತಫಾ ದೊಸ್ಸಾ ಎದುರಿಸುತ್ತಿದ್ದ. ಇದೀಗ ಆತನ ಹೇಯ ಕೃತ್ಯಕ್ಕೆ ನ್ಯಾಯಾಲಯ ಶಿಕ್ಷೆ ಘೋಷಿಸುವ ಮೊದಲು ಆತನೇ ಅನಾರೋಗ್ಯದಿಂದ ಸಾವಿಗೀಡಾಗಿದ್ದು, ಆತನಿಗೆ ವಿಧಿಯೇ ಮರಣದಂಡನೆ ವಿಧಿಸಿದಂತಾಗಿದೆ!

English summary
1993 Mumbai blasts convict Mustafa Dossa dies in Mumbai today (June 28th) in J.J. Hospitali, He had admitted to hospital, this morning because of chest pain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X