ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆ ಸೇರಿದ ಮುಂಬೈ ಸ್ಫೋಟದ ಆರೋಪಿ ಮುಸ್ತಫಾ ದೊಸ್ಸಾ

|
Google Oneindia Kannada News

ಮುಂಬೈ, ಜೂನ್ 28: 1993 ರ ಮುಂಬೈ ಸ್ಪೋಟದ ಆರೋಪಿ ಮುಸ್ತಫಾ ದೊಸ್ಸಾ ಎದೆನೋವಿನ ಕಾರಣ ಹೇಳಿ ಇಂದು ಮುಂಬೈಯ ಜೆ.ಜೆ.ಆಸ್ಪತ್ರೆಗೆ ಸೇರಿದ್ದಾನೆ.

1993ರ ಮುಂಬೈ ಸರಣಿ ಸ್ಫೋಟ; ಅಬು ಸಲೇಂ, ಮುಸ್ತಾಫಾ ಅಪರಾಧಿ: ಟಾಡಾ ಕೋರ್ಟ್1993ರ ಮುಂಬೈ ಸರಣಿ ಸ್ಫೋಟ; ಅಬು ಸಲೇಂ, ಮುಸ್ತಾಫಾ ಅಪರಾಧಿ: ಟಾಡಾ ಕೋರ್ಟ್

ಅನಿಯಂತ್ರಿತ ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದ ಮುಸ್ತಫಾ ಇಂದು (ಜೂನ್ 28) ಬೆಳಗ್ಗೆ ಎದೆನೋವು ಮತ್ತು ಸೋಂಕಿನಿಂದ ಬಳಲುತ್ತಿದ್ದ. ಈತ ತನ್ನ ಹೃದಯ ಸಂಬಂಧಿ ಸಮಸ್ಯೆಯ ಬಗ್ಗೆ ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದ್ದು, ತಾನು ಬೈಪಾಸ್ ಸರ್ಜರಿಗೆ ಒಳಗಾಗಬೇಕಿದೆ ಎಂದು ತಿಳಿಸಿದ್ದಾನೆ.

1993 Mumbai blasts convict Mustafa Dossa admitted to hospital

ಇತ್ತೀಚೆಗಷ್ಟೇ 1993 ರ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಮುಂಬೈನ ವಿಶೇಷ ಟಾಡಾ ನ್ಯಾಯಾಲಯ, ಮುಸ್ತಫಾ ದೊಸ್ಸಾ ನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಟಾಡಾ ಸೆಷನ್ಸ್ ನ್ಯಾಯಾಲಯ, ಸ್ಫೋಟದ ರೂವಾರಿಗಳಿಂದ ಆಜ್ಞೆ ಪಡೆದು ಪ್ರಮುಖ ಆರೋಪಿಗಳಿಗೆ ಶಸ್ತ್ರಾಸ್ತ್ರ ಹಾಗೂ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡಿದ ಆರೋಪವನ್ನು ಮುಸ್ತಫಾ ದೊಸ್ಸಾ ಹೊತ್ತಿದ್ದಾನೆ.

1993ರ ಮಾರ್ಚ್ 12ರಂದು ಒಟ್ಟು 12 ಬಾಂಬ್ ಗಳು ಮುಂಬೈನ ವಿವಿಧೆಡೆ ಸ್ಫೋಟಗೊಂಡು ಘೋರ ಪರಿಣಾಮವನ್ನು ಬೀರಿದ್ದವು. ಈ ಸ್ಫೋಟಗಳಲ್ಲಿ ಒಟ್ಟಾರೆ 257 ಮಂದಿ ಸಾವನ್ನಪ್ಪಿದ್ದರೆ, 713 ಮಂದಿ ಭೀಕರವಾಗಿ ಗಾಯಗೊಂಡಿದ್ದರು.

English summary
Mumbai 1993 serial blasts convict Mustafa Dossa was admitted to the J.J. Hospital in Mumbai, on June 28th, after he complained of chest pain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X