ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಮಾದರಿ ಉದ್ಯಮಿ ಆಗಿದ್ದು ಹೇಗೆ 13ರ ಬಾಲಕ?

|
Google Oneindia Kannada News

ನವದೆಹಲಿ, ಆಗಸ್ಟ್.15: ಭಾರತದ ಯುವ ಉದ್ಯಮಿ ಪಟ್ಟಿಗೆ ಮುಂಬೈ ಮೂಲದ 13 ವರ್ಷದ ತಿಲಕ್ ಮೆಹ್ತಾ ಸೇರ್ಪಡೆಯಾಗಿದ್ದಾರೆ. 8ನೇ ತರಗತಿ ಓದುತ್ತಿದ್ದ ಬಾಲಕ 2018ರಲ್ಲಿ ಆರಂಭಿಸಿದ ಪೇಪರ್ಸ್ ಆಂಡ್ ಪಾರ್ಸಲ್ಸ್ ಎಂಬ ಕೊರಿಯರ್ ಸೇವೆ, ಸರಕು ಸರಂಜಾಮುಗಳ ಸಾಗಾಟದಲ್ಲಿ ಪ್ರಖ್ಯಾತಿ ಗಳಿಸಿದೆ.

ಮುಂಬೈನಲ್ಲಿರುವ ಡಬ್ಬಾವಾಲಾಗಳ ಸಹಕಾರ ಮತ್ತು ಸಮನ್ವಯತೆ ಜೊತೆಗೆ 2018ರ ಜುಲೈ ತಿಂಗಳಿನಲ್ಲಿ ಆರಂಭಿಸಿದ ಕೊರಿಯರ್ ಸೇವೆಯು ಯಶಸ್ವಿಯಾಗಿದೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಉದ್ಯಮಿಯಾಗಬೇಕು ಎಂಬ ಬಾಲಕನ ಕನಸನ್ನು ನನಸುಗೊಳಿಸಿದೆ.

ಬಿಹಾರದ ಸಣ್ಣ ಊರಿನ 18 ವರ್ಷದ ಹುಡುಗ ಹೊಸ ಕಂಪನಿಯನ್ನೇ ಕಟ್ಟಿದ್ದೇಗೆ?ಬಿಹಾರದ ಸಣ್ಣ ಊರಿನ 18 ವರ್ಷದ ಹುಡುಗ ಹೊಸ ಕಂಪನಿಯನ್ನೇ ಕಟ್ಟಿದ್ದೇಗೆ?

ಲಾಜಿಸ್ಟಿಕ್ಸ್ ವಲಯದಲ್ಲಿ 3ನೇ ಆವೃತ್ತಿಯ ಭಾರತೀಯ ಮ್ಯಾರಿಟೈಮ್ ಪ್ರಶಸ್ತಿಗೆ ತಿಲಕ್ ಮೆಹ್ತಾ ಭಾಜನರಾಗಿದ್ದಾರೆ. ತಿಲಕ್ ಮೆಹ್ತಾ ತಮ್ಮ ಪ್ರಯಾಣದ ಸಂದರ್ಭದಲ್ಲಿ ತಮ್ಮ ತಂದೆಯ ಎದುರಿಸುತ್ತಿದ್ದ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದರು. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಲಾಜಿಸ್ಟಿಕ್ಸ್ ನಲ್ಲಿ ತೊಡಗಿಸಿಕೊಳ್ಳಲು ಅವರು ನಿರ್ಧರಿಸಿದರು.

13-Year-Old Tilak Mehta Who Launches His Own Start Up In Mumbai

ನಗರದೊಳಗೆ ಒಂದೇ ಒಂದು ದಿನದಲ್ಲಿ ವಸ್ತುಗಳನ್ನು ತಲುಪಿಸಲು ಅನುಕೂಲವಾಗುವಂತೆ ಕಂಪನಿಯನ್ನು ಹೊಂದಿರಲಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ತಿಲಕ್ ಮೆಹ್ತಾ ಅಂಥದೊಂದು ಕಂಪನಿ ಆರಂಭಿಸುವ ಅಭಿಲಾಷೆ ಹೊಂದಿದ್ದರು. ಪ್ರತಿಷ್ಠಿತ ನ್ಯೂಸ್ ಪಬ್ಲಿಕೇಷನ್ ಗೆ ನೀಡಿರುವ ಸಂದರ್ಶನದಲ್ಲಿ ಸ್ವತಃ ತಿಲಕ್ ಮೆಹ್ತಾ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಒಂದು ದಿನ ಸಂಜೆ ತಿಲಕ್ ಮೆಹ್ತಾ ಮುಂಬೈನ ಒಂದು ತುದಿಯಲ್ಲಿ ಇರುವ ತಮ್ಮ ಚಿಕ್ಕಪ್ಪನ ಮನೆಯಲ್ಲಿ ಪುಸ್ತಕವೊಂದನ್ನು ಮರೆತು ಬಂದಿದ್ದರು. ಮರುದಿನವೇ ಪರೀಕ್ಷೆಯಿದ್ದ ಹಿನ್ನೆಲೆ ಅಗತ್ಯವಾಗಿ ಆ ಪುಸ್ತಕವನ್ನು ತರಬೇಕಿತ್ತು. ದಿನವಿಡೀ ದುಡಿದು ಬರುವ ತಂದೆಗೆ ಆ ಪುಸ್ತಕವನ್ನು ತಂದು ಕೊಡುವಂತೆ ಕೇಳುವುದು ಅಸಾಧ್ಯವಾಗಿತ್ತು. ಇಂಥದೊಂದು ಸಂದಿಗ್ಥ ಸ್ಥಿತಿಯು ಒಂದೇ ದಿನದಲ್ಲಿ ಪೇಪರ್ ಮತ್ತು ಸಣ್ಣ ವಸ್ತುಗಳನ್ನು ಸಾಗಿಸುವ ಒಂದು ರೀತಿಯ ಸೇವೆಯನ್ನು ಏಕೆ ಆರಂಭಿಸಬಾರದು ಎಂಬ ಆಲೋಚನೆ ತಿಲಕ್ ಮೆಹ್ತಾ ಅವರ ತೆಲೆಯಲ್ಲಿ ಹೊಳೆಯಿತು.

ಪೇಪರ್ಸ್ ಮತ್ತು ಪಾರ್ಸಲ್ ಸೇವೆಗಾಗಿ ಮೊಬೈಲ್ ಅಪ್ಲಿಕೇಷನ್ ಆರಂಭಿಸಿದರು. 200 ಉದ್ಯೋಗಿಗಳು ಮತ್ತು 300 ಡಬ್ಬಾವಾಲಾಗಳನ್ನು ಬಳಸಿಕೊಂಡು ಇಂದು ಪ್ರತಿನಿತ್ಯ ಮುಂಬೈನಲ್ಲಿ 1200 ಪಾರ್ಸಲ್ ಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತಲುಪಿಸಲಾಗುತ್ತಿದೆ.

ಮುಂಬೈ ನಗರದಲ್ಲಿ ಒಂದು ದಿನದೊಳಗೆ ಕಾಗದ ಪತ್ರಗಳು ಮತ್ತು ಟಿಫನ್ ಬಾಕ್ಸ್ ಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವ ಕಾರ್ಯವನ್ನು ಪೇಪರ್ಸ್ ಆಂಡ್ ಪಾರ್ಸಲ್ಸ್ ಕಂಪನಿಯು ಮಾಡುತ್ತಾ ಬಂದಿದೆ. ಮುಂಬೈನಲ್ಲಿರುವ ರೈಲ್ವೆ ಸೇವೆಯನ್ನು ಬಳಸಿಕೊಂಡು 3 ಕೆಜಿ ಒಳಗಿನ ಕಾಗದ-ಪತ್ರ ಮತ್ತು ಟಿಫನ್ ಬಾಕ್ಸ್ ಗಳನ್ನು ತಲುಪಿಸಲಾಗುತ್ತಿದೆ. ಅದಕ್ಕಾಗಿ ತೂಕದ ಆಧಾರದಲ್ಲಿ 40 ರಿಂಗ 180 ರೂಪಾಯಿವರೆಗೂ ದರ ನಿಗದಿಗೊಳಿಸಲಾಗಿದೆ. ಮೊದಮೊದಲು ದಿನಕ್ಕೆ 1000 ಆರ್ಡರ್ ಗಳನ್ನು ಪಡೆದುಕೊಳ್ಳುವ ಗುರಿಯನ್ನು ಹೊಂದಲಾಗಿತ್ತು. ಇದೀಗ 2020 ವರ್ಷದಲ್ಲಿ ಒಟ್ಟು 100 ಕೋಟಿ ರೂಪಾಯಿ ಆದಾಯವನ್ನು ಗಳಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

ಸಮಯ ಪ್ರಜ್ಞೆ, ಶಾಲೆ, ಕ್ರೀಡೆ ಮತ್ತು ವ್ಯಾಪಾರದ ನಡುವೆ ಸಮಯವನ್ನು ಹೇಗೆ ನಿಭಾಯಿಸಬೇಕು ಎನ್ನುವಲ್ಲಿ ನನ್ನ ತಾಯಿ ನನಗೆ ಸದಾ ಮಾರ್ಗದರ್ಶಕರಾಗಿ ಸಹಾಯ ಮಾಡುತ್ತಿದ್ದಾರೆ ಎಂದು ತಿಲಕ್ ಮೆಹ್ತಾ ಹೇಳಿದ್ದಾರೆ. ಪೇಪರ್ಸ್ ಆಂಡ್ ಪಾರ್ಸಲ್ಸ್ ಕಂಪನಿಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ನಿಟ್ಟಿನಲ್ಲಿ ನಿರಂತರ ಮತ್ತು ಕಠಿಣ ಪರಿಶ್ರಮವನ್ನು ಹಾಕುತ್ತೇನೆ ಎಂದು ತಿಲಕ್ ಮೆಹ್ತಾ ಹೇಳಿದ್ದಾರೆ.

English summary
Here Is The Inspiring Story Of 13 Year Old Boy Tilak Mehta Who Launches His Own Startup In Mumbai Papers N Parcels. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X