• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

123 ನಕಲಿ ವೆಬ್‌ಸೈಟ್, 10,000 ಜನರಿಗೆ ವಂಚಿಸಿದ್ದ ಜಾಲ ಪತ್ತೆ: ಓರ್ವ ಮಹಿಳೆ ಸೇರಿ 6 ಜನರ ಬಂಧನ

|

ಮುಂಬೈ, ಜನವರಿ 07: ನಕಲಿ ವೆಬ್‌ಸೈಟ್‌ಗಳ ಮೂಲಕ ಸಾವಿರಾರು ಜನರಿಗೆ ವಂಚಿಸಿದ್ದ ಜಾಲವನ್ನು ಪತ್ತೆ ಹಚ್ಚಿರುವ ಮುಂಬೈ ಪೊಲೀಸರು ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಲಾಭದಾಯಕ ಜಾಹೀರಾತುಗಳ ಮೂಲಕ 10,000 ಜನರನ್ನು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಡಿಸೆಂಬರ್ 15 ರಂದು ವ್ಯಕ್ತಿಯೊಬ್ಬರ ದೂರಿನ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ದೂರುದಾರನಿಗೆ 3.6 ಲಕ್ಷ ರೂ. ಮೋಸ ಮಾಡಿದ್ದು, ಖೋಟಾ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರು ಜನರನ್ನು ಬಂಧಿಸಿದ ಮುಂಬೈ ಪೊಲೀಸರು

ಆರು ಜನರನ್ನು ಬಂಧಿಸಿದ ಮುಂಬೈ ಪೊಲೀಸರು

ಪ್ರಕರಣದ ತನಿಖೆ ನಡೆಸಿದಾಗ ವಂಚಕರುಪಾಟ್ನಾದಿಂದ ಮತ್ತು ಕೆಲವರು ಪಶ್ಚಿಮ ಬಂಗಾಳದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪೊಲೀಸರು ಪತ್ತೆ ಹೆಚ್ಚಿದ್ದಾರೆ. ಈ ಪ್ರಕರಣದಲ್ಲಿ ಆರು ಜನರನ್ನು ಒಳಗೊಂಡಂತೆ ಮಹಿಳೆಯನ್ನು ಸಹ ಬಂಧಿಸಲಾಗಿದೆ. ಜೊತೆಗೆ ಅಪರಾಧ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋನ್ ಇಲ್ಲದೆ ಕಾರು ಸಿಗಲಿದೆ: ಮಾರುತಿ ಸುಜುಕಿ ಕಾರುಗಳಿಗೆ ಆಫರ್!

ನಕಲಿ ವೆಬ್‌ಸೈಟ್ ರಚಿಸುವುದೇ ಇವರ ಕೆಲಸ!

ನಕಲಿ ವೆಬ್‌ಸೈಟ್ ರಚಿಸುವುದೇ ಇವರ ಕೆಲಸ!

ಈ ಜಾಲವು ಹೆಚ್ಚಿನ ಸಂಖ್ಯೆಯಲ್ಲಿ ಇಂಟರ್ನೆಟ್ ಬಳಕೆದಾರರು ಭೇಟಿ ನೀಡಿದ ಜನಪ್ರಿಯ ವೆಬ್‌ಸೈಟ್‌ಗಳನ್ನು ಗಮನಿಸುವುದು ಮತ್ತು ಆ ವೆಬ್‌ಸೈಟ್‌ಗಳನ್ನು ಮರುಸೃಷ್ಟಿಸುವ ಮೂಲಕ ಜನರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿದ್ದರು. ನಂತರ ಅವರು ಸಾಮಾಜಿಕ ಮಾಧ್ಯಮ, ವಾಟ್ಸಾಪ್‌ನಲ್ಲಿನ ಜಾಹೀರಾತುಗಳ ಮೂಲಕ ಮತ್ತು ವೈಯಕ್ತಿಕವಾಗಿ ಅವರನ್ನು ಸಂಪರ್ಕಿಸುವ ಮೂಲಕ ಜನರನ್ನು ತಲುಪುತ್ತಾರೆ, ಇದಕ್ಕಾಗಿ ಅವರು ಪಾಟ್ನಾದಲ್ಲಿ ಕಾಲ್ ಸೆಂಟರ್ ಅನ್ನು ಸಹ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಸಲಿಗೂ ನಕಲಿಗೂ ಇಲ್ಲ ವ್ಯತ್ಯಾಸ!

ಅಸಲಿಗೂ ನಕಲಿಗೂ ಇಲ್ಲ ವ್ಯತ್ಯಾಸ!

ಮೋಸ ಹೋದ ಇಂಟರ್ನೆಟ್ ಬಳಕೆದಾರರಿಗೆ ಲಿಂಕ್ ನೀಡಿ ನಕಲಿ ವೆಬ್‌ಸೈಟ್‌ಗೆ ಕರೆತರುತ್ತಿದ್ದರು. ಜನರಿಗೆ ಸಾಮಾನ್ಯವಾಗಿ ಅಸಲಿ ಮತ್ತು ನಕಲಿ ವೆಬ್‌ಸೈಟ್‌ಗಳ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ. ಹೀಗಾಗಿ ಆರೋಪಿಗಳು ಜನರನ್ನು ಸುಲಭವಾಗಿ ತಮ್ಮ ಮೋಸದ ಜಾಲಕ್ಕೆ ಕೆಡವಿ ಅವರಿಂದ ಹಣವನ್ನು ತೆಗೆದುಕೊಂಡು ನಾಪತ್ತೆಯಾಗುತ್ತಿದ್ದರು.

ಹಲವು ಖ್ಯಾತ ಕಂಪನಿಗಳ ವೆಬ್‌ಸೈಟ್ ಕೂಡ ನಕಲಿ

ಹಲವು ಖ್ಯಾತ ಕಂಪನಿಗಳ ವೆಬ್‌ಸೈಟ್ ಕೂಡ ನಕಲಿ

ಈ ನಕಲಿ ವೆಬ್‌ಸೈಟ್‌ ಜಾಲವು ಇದುವರೆಗೆ ಪೆಟ್ರೋಲ್ ಪಂಪ್‌ಗಳು ಅಥವಾ ಎಲ್‌ಪಿಜಿ ಮಾರಾಟಗಾರರ ಏಜೆನ್ಸಿಗಳು, ಸಾಲ ಒದಗಿಸುವವರು, ರಿಲಯನ್ಸ್ ಟವರ್‌ಗಳು, ಸ್ನ್ಯಾಪ್‌ಡೀಲ್ ಮತ್ತು ನಾಪ್ಟೋಲ್ ಮುಂತಾದ ವೆಬ್‌ಸೈಟ್‌ಗಳ ನಕಲಿ ವೆಬ್‌ಸೈಟ್ ಹೊಂದಿದೆ. ಜುಲೈ 2018 ರಿಂದ ಈ ಜಾಲವು ಕಾರ್ಯಾಚರಣೆ ನಡೆಸುತ್ತಿದ್ದು, ಇದರ ಮಾಸ್ಟರ್ ಮೈಂಡ್ ಬಿಹಾರ ಮೂಲದ ಬಿಕಾಂ ಪದವೀಧರರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
The Cyber Cell of the Mumbai Police's Crime Branch arrested six persons for using fake websites to dupe people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X