• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಾರ್ನ್ ಕಿರಿಕಿರಿ ತಪ್ಪಿಸೋಕೆ 11ರ ಹುಡುಗಿ ನೀಡಿದ ಐಡಿಯಾಕ್ಕೆ ಮಹೀಂದ್ರಾ ಮೆಚ್ಚುಗೆ

|
Google Oneindia Kannada News

ಮುಂಬೈ, ಏಪ್ರಿಲ್ 05: ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡರೆ ಅತೀ ಹೆಚ್ಚು ಕಿರಿಕಿರಿಯಾಗೋದು ಈ ಹಾರ್ನ ಗಳ ಸದ್ದಿನಿಂದ. ಈ ಸಮಸ್ಯೆಗೆ ಪರಿಹಾರ ಹುಡುಕೋದು ಹೇಗೆ ಎಂದು ಆಟೋಮೋಟಿವ್ RnD ಮಾಡುವವರೂ ತಲೆಕೆರೆದುಕೊಳ್ಳುತ್ತಿರುವಾಗ 11ವರ್ಷ ವಯಸ್ಸಿನ ಬಾಲಕಿಯೊಬ್ಬಳು ಇದಕ್ಕೆ ಪರಿಹಾರ ಸೂಚಿಸಿದ್ದಾಳೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಬಗ್ಗೆ ಆಕೆ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ, ಉದ್ಯಮಿ ಆನಂದ್ ಮಹೀಂದ್ರಾ ಅವರಿಗೆ ಮುಂಬೈನ ಮಾಹಿಕಾ ಎಂಬ ಹುಡುಗಿ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಹಾರ್ನ್ ಸಮಸ್ಯೆಯಿಂದ ಆಗುವ ಕಿರಿಕಿರಿ, ಶಬ್ದಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾಳೆ. ಜೊತೆಗೆ ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾಳೆ.

ಬದುಕಿನೊಂದಿಗೆ ಬಡಿದಾಡಿದ ಶಿಲ್ಪಾಗೆ ಮಹಿಂದ್ರಾ ಉಡುಗೊರೆಬದುಕಿನೊಂದಿಗೆ ಬಡಿದಾಡಿದ ಶಿಲ್ಪಾಗೆ ಮಹಿಂದ್ರಾ ಉಡುಗೊರೆ

ಈಕೆಯ ಕಳಕಳಿ ಮತ್ತು ಬುದ್ಧಿವಂತಿಕೆಯನ್ನು ಕಂಡು ಸ್ವತಃ ಆನಂದ್ ಮಹೀಂದ್ರಾ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಕೆ ಬರೆದ ಪತ್ರದ ಪ್ರತಿಯನ್ನೂ ಟ್ವೀಟ್ಟರ್ ನಲ್ಲಿ ಲಗತ್ತಿಸಿದ್ದಾರೆ.

ಹಾರ್ನ್ ಕಿರಿಕಿರಿ ತಪ್ಪಿಸಲು ಆಕೆ ನೀಡಿದ ಐಡಿಯಾವನ್ನು ಟ್ವಿಟ್ಟರ್ ನಲ್ಲಿ ಹಲವರು ಮೆಚ್ಚಿಕೊಂಡಿದ್ದಾರೆ, ಜೊತೆಗೆ ತಾವೂ ಹಲವು ಸಲಹೆಗಳನ್ನು ನೀದಿದ್ದಾರೆ.

ಆ ಹುಡುಗಿಯ ಪತ್ರದಲ್ಲೇನಿದೆ?

ಅಷ್ಟಕ್ಕೂ ಈ ಹಾರ್ನ್ ಸಮಸ್ಯೆಯನ್ನು ತಡೆಗಟ್ಟಲು ಆಕೆ ನೀಡಿದ ಪರಿಹಾರವೇನು? "ನಾನು ಎಷ್ಟೋ ಡ್ರೈವರ್ ಗಳನ್ನು ನೋಡಿದ್ದೇನೆ. ಎಲ್ಲರೂ ಟ್ರಾಫಿಕ್ ಗಳಲ್ಲಿ ಕಿರಿಕಿರಿಯಾಗುವಷ್ಟು ಹಾರನ್ ಮಾಡುತ್ತಾರೆ. ಅವರು ಹಾರ್ನ್ ಮಾಡಿದ ಮಾತ್ರಕ್ಕೆ ಮುಂದಿರುವ ವಾಹನಗಳು ಮುಂದೆ ಚಲಿಸುವುದಕ್ಕೆ ಆಗುವುದಿಲ್ಲ, ಟ್ರಾಫಿಕ್ ಸಮಸ್ಯೆಯೂ ಪರಿಹಾರವಾಗುವುದಿಲ್ಲ ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ನೀವು ತಯಾರಿಸುವ ವಾಹನಗಳಲ್ಲಿ ಹಾರ್ನ್ ಗಳು ಪ್ರತಿ ಹತ್ತು ನಿಮಿಷಕ್ಕೆ ಕೇವಲ ಐದು ಬಾರಿ ಮಾತ್ರವೇ ಸದ್ದು ಮಾಡುವಂತೆ ವಿನ್ಯಾಸಗೊಳಿಸಿ. ಪ್ರತಿ ಸಾರಿ ಸದ್ದು ಮಾಡಿದಾಗಲೂ ಆ ಸದ್ದು, ಕೇವಲ ಮೂರು ಸೆಕೆಂಡ್ ಮಾತ್ರವೇ ಇರಬೇಕು" ಎಂದು ಆ ಬಾಲಕಿ ಪರಿಹಾರ ಸೂಚಿಸಿದ್ದಾಳೆ.

ಆನಂದ್ ಮಹೀಂದ್ರಾ ಪ್ರತಿಕ್ರಿಯೆ ಏನು?

ಈ ಕುರಿತು ಪ್ರತಿಕ್ರಿಯೆ ನೀಡಿದ ಆನಂದ್ ಮಹೀಂದ್ರಾ, "ಕೆಲಸದಿಂದಾಗಿ ಸುಸ್ತಾದ ಸಂಜೆ ಇಂಥದೊಂದು ಮೇಲ್ ನೋಡಿದರೆ ನನಗೆ ನೆಮ್ಮದಿ ಎನ್ನಿಸುತ್ತದೆ, ಮತ್ತೆ ಉತ್ಸಾಹ ಬರುತ್ತದೆ. ನಾನು ಇಂಥ ಜನರಿಗಾಗಿಯೇ ಕೆಲಸ ಮಾಡುತ್ತಿದ್ದೇನೆ. ಈ ಜಗತ್ತು ಉತ್ತಮ ಮತ್ತು ಶಾಂತಿಯುತವಾಗಿರಬೇಕು ಎಂದು ಬಯಸುವವರಿಗಾಗಿ" ಎಂದು ಟ್ವೀಟ್ ಮಾಡಿ, ಮಾಹಿಕಾ ಅವರ ಪತ್ರವನ್ನೂ ಲಗತ್ತಿಸಿದ್ದಾರೆ.

ಪ್ರಿಪೇಯ್ಡ್ ಹಾರ್ನ್!

ಉತ್ತಮ ಯೋಚನೆ. ನಾವು ಪ್ರಿಪೇಯ್ಡ್ ಹಾರ್ನ್ ವ್ಯವಸ್ಥೆ ತಂದರೂ ಇದಕ್ಕೆ ಕೊಂಚ ಪರಿಹಾರ ಹುಡುಕಬಹುದು. ಏಕೆಂದರೆ ಜನರು ಪದೇ ಪದೇ ಚಾರ್ಜ್ ಮಾಡಲು ಒಪ್ಪುವುದಿಲ್ಲ. ಆಗ ಹಾರ್ನ್ ಮಾಡುವುದು ಕಡಿಮೆಯಾಗುತ್ತದೆ.

ಹೀಗೂ ಒಂದು ಪರಿಹಾರ ಹುಡುಕಬಹುದು!

ಈ ಹಾರ್ನ್ ಕಿರಿಕಿರಿಯನ್ನು ತಪ್ಪಿಸಲು ಡ್ರೈವರ್ ಸೀಟಿನ ಸೀಟ್ ಬೆಲ್ಟ್ ಪಿಲ್ಲರ್ ಬಳಿ ಹಾರ್ನ್ ಶಬ್ದ ಕೇಳುವಂಥ ಸ್ಪೀಕರ್ ಅಳವಡಿಸಬೇಕು. ಆಗ ಆ ಹಾರ್ನ್ ಕಿರಿಕಿರಿಯ ಕಷ್ಟ ಚಾಲಕನಿಗೂ ಅರ್ಥವಾಗುತ್ತದೆ. ಆಗ ಆತ ಹೆಚ್ಚು ಹಾರ್ನ್ ಮಾಡಲಾರ- ಕುನಾಲ್ ಧಾಬುವಾಲಾ

English summary
A 11 year old girl from Mumbai, Mahika, gives a solution to reduce honking in traffic. Her letter to Anand Mahindra breaks the internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X