ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PUBG ಮೊಬೈಲ್ ಗೇಮ್ ನಿಷೇಧಕ್ಕೆ 11ರ ಬಾಲಕನಿಂದ PIL

|
Google Oneindia Kannada News

ಮುಂಬೈ, ಜನವರಿ 31: ಹನ್ನೊಂದು ವರ್ಷದ ಬಾಲಕನೊಬ್ಬ ಗುರುವಾರ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿದ್ದು, ಹೆಸರಾಂತ ಮೊಬೈಲ್ ಗೇಮ್ 'PUBG' ನಿಷೇಧಿಸುವಂತೆ ಕೇಳಿಕೊಂಡಿದ್ದಾನೆ. ಅಹಾದ್ ನಿಜಾಮ್ ಎಂಬ ಬಾಲಕ ತನ್ನ ತಾಯಿ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಕೊಂಡಿದ್ದಾನೆ.

ಈ ಆಟವು ಹಿಂಸಾಚಾರ, ಆಕ್ರಮಣಕಾರಿ ಧೋರಣೆ ಪ್ರೊತ್ಸಾಹಿಸುತ್ತದೆ ಮತ್ತು ಆನ್ ಲೈನ್ ಬೆದರಿಕೆ ಒಡ್ಡುತ್ತದೆ. ಆದ್ದರಿಂದ ಈ ಆಟವನ್ನು ನಿಷೇಧಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೇಳಲಾಗಿದೆ.

ಗೂಗಲ್ ಪ್ಲೇ ವರ್ಷದ ಗೇಮ್ ಪ್ರಶಸ್ತಿ ಗೆದ್ದ ಪಬ್‍ಜಿ ಮೊಬೈಲ್, ಸೀಸನ್ 5 ಅಪ್ಡೇಟ್ಗೂಗಲ್ ಪ್ಲೇ ವರ್ಷದ ಗೇಮ್ ಪ್ರಶಸ್ತಿ ಗೆದ್ದ ಪಬ್‍ಜಿ ಮೊಬೈಲ್, ಸೀಸನ್ 5 ಅಪ್ಡೇಟ್

ಇಂಥ ಹಿಂಸಾಪ್ರಚೋದಿತ ಆನ್ ಲೈನ್ ವಿಚಾರಗಳನ್ನು ನಿಯಮಿತವಾಗಿ ಪರಿಶೀಲಿಸಲು ಆನ್ ಲೈನ್ ನೈತಿಕ ಪರಿಶೀಲನಾ ಸಮಿತಿ ರಚಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ಮಾಡಬೇಕು ಎಂದು ಕೇಳಿಕೊಂಡಿರುವುದಾಗಿ ಅರ್ಜಿದಾರರ ಪರ ವಕೀಲ ತನ್ವೀರ್ ನಿಜಾಮ್ ಹೇಳಿದ್ದಾರೆ.

11 year boy moves Bombay High court, seeks ban on PUBG mobile game

ಮುಖ್ಯ ನ್ಯಾಯಮೂರ್ತಿ ಎನ್.ಎಚ್.ಪಾಟೀಲ್ ನೇತೃತ್ವದ ವಿಭಾಗೀಯ ಪೀಠದ ಎದುರು ಅರ್ಜಿ ವಿಚಾರಣೆ ಬರುವ ಸಾಧ್ಯತೆ ಇದೆ. PUBG ಅಥವಾ ಪ್ಲೇಯರ್ ಅನೌನ್ಸ್ ಬ್ಯಾಟಲ್ ಗ್ರೌಂಡ್ಸ್ ಒಂದು ಆನ್ ಲೈನ್ ಆಟ. ಅಲ್ಲಿ ಇಬ್ಬರು ಅಥವಾ ಹೆಚ್ಚು ಮಂದಿ ಆನ್ ಲೈನ್ ಪಾರ್ಟ್ ನರ್ ಗಳು ಯುದ್ಧಭೂಮಿ ಹಿನ್ನೆಲೆಯಲ್ಲಿ ಆಟವಾಡುತ್ತಾರೆ.

ಪಬ್‍ಜೀ ಮೊಬೈಲ್ ಇಂಡಿಯಾ ಸೀರೀಸ್ ಘೋಷಣೆ, 1 ಕೋಟಿ ರು ಬಹುಮಾನಪಬ್‍ಜೀ ಮೊಬೈಲ್ ಇಂಡಿಯಾ ಸೀರೀಸ್ ಘೋಷಣೆ, 1 ಕೋಟಿ ರು ಬಹುಮಾನ

ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರ ಜತೆಗೆ ಸಂವಾದ ನಡೆಸುವ ವೇಳೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಆಟದ ಬಗ್ಗೆ ಪ್ರಸ್ತಾವ ಮಾಡಿದ್ದರು.

English summary
11 year old boy moved the Bombay High Court Thursday seeking a ban on popular mobile game ‘PUBG’. Ahad Nizam, who filed the public interest litigation through his mother, said the game promotes violence, aggression and cyber-bullying.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X