ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ 3 ಗಂಟೆ ಅವಧಿಯಲ್ಲಿ 108.2 ಮಿಲಿ ಮೀಟರ್ ಮಳೆ

By ಅನಿಲ್ ಆಚಾರ್
|
Google Oneindia Kannada News

ಮುಂಬೈ, ಜುಲೈ 8: ಮುಂಬೈನಲ್ಲಿ ಸೋಮವಾರ ಬೆಳಗ್ಗೆ ಭಾರೀ ಮಳೆ ಆಗುತ್ತಿದೆ. ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಅಂದರೆ ಜುಲೈ 8ರ ಬೆಳಗ್ಗೆ 8.30ರ ತನಕ 30 ಮಿಲಿ ಮೀಟರ್ ಮಳೆ ಆಗಿತ್ತು. ಬೆಳಗ್ಗೆ 8.30ರಿಂದ ಬೆಳಗ್ಗೆ 11.30ರ ಮಧ್ಯೆ ಮುಂಬೈ ಮಹಾನಗರದಲ್ಲಿ 108.2 ಮಿಲಿ ಮೀಟರ್ ಮಳೆ ದಾಖಲಾಗಿದೆ.

ಕೊಲಾಬಾ ಮಳೆ ಪ್ರಮಾಣ ಮಾಪನ ಕೇಂದ್ರದಲ್ಲಿ 12.2 ಮಿ.ಮೀ. ಮಳೆ ಆಗಿದೆ. ಇನ್ನು ಸಾಂತಾಕ್ರೂಜ್ ಮಳೆ ಮಾಪನ ಕೇಂದ್ರದಲ್ಲಿ ನೀಡಿದ ಮಾಹಿತಿಯು ಇಡೀ ಮುಂಬೈಗೆ ಅನ್ವಯಿಸುವಂಥದ್ದಾಗಿದೆ. ಇದೇ ಅವಧಿಯಲ್ಲಿ ಮರೋಲ್ ನಲ್ಲಿ 121 ಮಿ.ಮೀ., ಕುರ್ಲಾದಲ್ಲಿ 120 ಮಿ.ಮೀ., ವಿಖ್ರೋಲಿ 114 ಮಿ.ಮೀ., ವಿಲೇ ಪಾರ್ಲೆಯಲ್ಲಿ 100 ಮಿ.ಮೀ. ಮಳೆ ಆಗಿದೆ.

ಮಹಾರಾಷ್ಟ್ರದ ಭಾರಿ ಮಳೆಗೆ ಮೈದುಂಬಿ ಹರಿದ ಕೃಷ್ಣಾ ನದಿಮಹಾರಾಷ್ಟ್ರದ ಭಾರಿ ಮಳೆಗೆ ಮೈದುಂಬಿ ಹರಿದ ಕೃಷ್ಣಾ ನದಿ

ಗೋವಂಡಿಯಲ್ಲಿ ಸ್ಲ್ಯಾಬ್ ಕುಸಿದು ಎಂಟು ಮಂದಿ ಗಾಯಗೊಂಡಿದ್ದಾರೆ. ಮೂವರಿಗೆ ರಾಜವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ. ಅಂಧೇರಿ ಪೂರ್ವದಲ್ಲಿನ ಕೈಗಾರಿಕೆ ಎಸ್ಟೇಟ್ ನಲ್ಲಿ ಗೋಡೆ ಕುಸಿದಿದೆ. ಯಾವುದೇ ಸಾವು- ನೋವು ಸಂಭವಿಸಿಲ್ಲ ಎಂದು ವರದಿ ಆಗಿದೆ.

108 mm rain in Mumbai city within 3 hours

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಭಾರೀ ಮಳೆಯಿಂದ ಅತಿ ಹೆಚ್ಚು ಮಳೆ ಮುಂದಿನ 24 ಗಂಟೆಯಲ್ಲಿ ಬೀಳುವ ಸಾಧ್ಯತೆ ಇದೆ. ಇನ್ನು ಸಮುದ್ರದಲ್ಲಿ ಎತ್ತರದ ಅಲೆಗಳು ಏಳುವ ಬಗ್ಗೆ ಕೂಡ ಎಚ್ಚರಿಕೆ ನೀಡಲಾಗಿದೆ.

English summary
108 mm rain in Mumbai city within 3 hours. Heavy rain anticipated in next 24 hours. Here is the details of Mumbai rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X