ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ಪೊಲೀಸ್ ಮೇಲೆ ಕೊರೊನಾ ಅಟ್ಟಹಾಸ, 1000 ಸಿಬ್ಬಂದಿಗೆ ಸೋಂಕು

|
Google Oneindia Kannada News

ಮುಂಬೈ, ಮೇ 14: ಕೊರೊನಾ ವೈರಸ್‌ ಹರಡುವುದನ್ನು ನಿಯಂತ್ರಿಸುವ ಕಾರ್ಯದಲ್ಲಿ ಇಡೀ ದೇಶದಲ್ಲಿ ಪೊಲೀಸ್ ಇಲಾಖೆ ತೊಡಗಿಕೊಂಡಿದೆ. ಅಯಾ ರಾಜ್ಯದ ಪೊಲೀಸ್ ಸಿಬ್ಬಂದಿ ಮನೆ ಮಠ ಬಿಟ್ಟು, ರಾತ್ರಿ-ಹಗಲು ಶ್ರಮಿಸುತ್ತಿದ್ದಾರೆ.

ಆದರೆ, ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎನ್ನುವುದು ಬೇಸರದ ಸಂಗತಿ. ಅದರಲ್ಲೂ ಮಹಾರಾಷ್ಟ್ರದಲ್ಲಿ 1000 ಜನ ಪೊಲೀಸರಿಗೆ ಕೊವಿಡ್ ಸೋಂಕು ತಗುಲಿದೆ.

ಮುಂಬೈ ಅರ್ತುರ್ ಕಾರಾಗೃಹದಲ್ಲೇ 184 ಮಂದಿಗೆ ಕೊರೊನಾ ವೈರಸ್!ಮುಂಬೈ ಅರ್ತುರ್ ಕಾರಾಗೃಹದಲ್ಲೇ 184 ಮಂದಿಗೆ ಕೊರೊನಾ ವೈರಸ್!

ಮಹಾರಾಷ್ಟ್ರದಲ್ಲಿ ಈವರೆಗೂ ಒಟ್ಟು ಸೋಂಕಿತರ ಸಂಖ್ಯೆ 25 ಸಾವಿರ ಗಡಿ ದಾಟಿದೆ. ಅದರಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯವರೇ ಸಾವಿರ ಮಂದಿ ಇದ್ದಾರೆ. ಈ ಕುರಿತು ಮಹಾರಾಷ್ಟ್ರ ಪೊಲೀಸ್ ಇಲಾಖೆ ಅಂಕಿ-ಅಂಶಗಳನ್ನು ಪ್ರಕಟಿಸಿದೆ. ಮುಂದೆ ಓದಿ....

1001 ಪೊಲೀಸರಿಗೆ ಸೋಂಕು, 851 ಆಕ್ಟಿವ್

1001 ಪೊಲೀಸರಿಗೆ ಸೋಂಕು, 851 ಆಕ್ಟಿವ್

ಮಹಾರಾಷ್ಟ್ರದಲ್ಲಿ ಈವರೆಗೂ 1001 ಜನ ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ ಪ್ರಸ್ತುತ 851 ಕೇಸ್ ಸಕ್ರಿಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ 107 ಅಧಿಕಾರಿಗಳು ಹಾಗೂ 894 ಸಿಬ್ಬಂದಿ ಒಳಗೊಂಡಿದ್ದಾರೆ. 142 ಜನ ಪೊಲೀಸರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. 8 ಜನ ಪೊಲೀಸರು ಮೃತಪಟ್ಟಿದ್ದಾರೆ.

218 ಪೊಲೀಸರ ಮೇಲೆ ಹಲ್ಲೆ

218 ಪೊಲೀಸರ ಮೇಲೆ ಹಲ್ಲೆ

ಲಾಕ್‌ಡೌನ್‌ ವೇಳೆ ಹಲವು ಕಡೆ ಪೊಲೀಸರ ಮೇಲೆ ಹಲ್ಲೆ ಆಗಿದೆ. ಈವರೆಗೂ ಮಹಾರಾಷ್ಟ್ರದಲ್ಲಿ 218 ಜನ ಪೊಲೀಸರು ಹಲ್ಲೆಗೊಳಗಾಗಿದ್ದಾರೆ. 770 ಜನರನ್ನು ಪೊಲೀಸರ ಮೇಲೆ ಹಲ್ಲೆ ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಬಹುತೇಕ ಎಲ್ಲರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಇಲ್ಲಿಯವರೆಗೂ ಐಪಿಸಿ 188 ಸೆಕ್ಸನ್ ಅಡಿಯಲ್ಲಿ 1,06,569 ಕೇಸ್ ದಾಖಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಖಾಸಗಿ ವೈದ್ಯರನ್ನೇ ಬೆಚ್ಚಿ ಬೀಳಿಸುತ್ತೆ ಮಹಾರಾಷ್ಟ್ರದ ಹೊಸ ರೂಲ್ಸ್!ಖಾಸಗಿ ವೈದ್ಯರನ್ನೇ ಬೆಚ್ಚಿ ಬೀಳಿಸುತ್ತೆ ಮಹಾರಾಷ್ಟ್ರದ ಹೊಸ ರೂಲ್ಸ್!

4 ಕೋಟಿ ದಂಡ ಸಂಗ್ರಹ

4 ಕೋಟಿ ದಂಡ ಸಂಗ್ರಹ

ಲಾಕ್‌ಡೌನ್‌ ನಿಯಮಗಳ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಅನೇಕ ವಾಹನಗಳನ್ನು ಜಪ್ತಿ ಮಾಡಲಾಗಿತ್ತು. ನಂತರ ದಂಡ ವಸೂಲಿ ಮಾಡಿ ಬಿಡುಗಡೆಯೂ ಮಾಡಲಾಗಿದೆ. ಒಟ್ಟಾರೆ ಲಾಕ್‌ಡೌನ್‌ ಸಮಯದಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆ 4 ಕೋಟಿ (4,09,69,094) ದಂಡವನ್ನು ವಸೂಲಿ ಮಾಡಿದೆ.

ಇತರೆ ಪ್ರಕರಣಗಳು ವಿವರ

ಇತರೆ ಪ್ರಕರಣಗಳು ವಿವರ

ಇನ್ನುಳಿದಂತೆ ಅಕ್ರಮ ಸಂಚಾರ ಮತ್ತು ಸಾಗಣಿಕೆ ಅಡಿ 1296 ಕೇಸ್‌ಗಳು ಬುಕ್ ಆಗಿದೆ. ಒಟ್ಟು 20,195 ಮಂದಿಯನ್ನು ಬಂಧನ ಮಾಡಲಾಗಿದೆ. 57,479 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈವರೆಗೂ 83 ಪೊಲೀಸ್ ಸಿಬ್ಬಂದಿ ಮತ್ತು 1 ಹೋಮ್ ಗಾರ್ಡ್ ಸಿಬ್ಬಂದಿ ಗಾಯಗೊಂಡಿದ್ದಾರೆ. 34 ಜನ ಆರೋಗ್ಯ ಅಧಿಕಾರಿಗಳ ಮೇಲೆ ಹಲ್ಲೆಯಾಗಿದೆ.

English summary
1001 police personnel have tested positive for COVID19 in the state, of which 851 are active cases - Maharashtra Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X