ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1ರೂ. ನೋಟಿಗೆ ನೂರರ ಸಂಭ್ರಮ! ಶತಮಾನದ ಇತಿಹಾಸದತ್ತ ಒಂದು ನೋಟ

|
Google Oneindia Kannada News

ಮುಂಬೈ, ನವೆಂಬರ್ 30: ಈ ತಲೆಮಾರಿನ ಮಕ್ಕಳಿಗೆ ಒಂದರ್ಥದಲ್ಲಿ ಅಪರೂಪದ ವಸ್ತುವೇ ಆಗಿರುವ ಒಂದು ರೂಪಾಯಿಯ ನೋಟು ಚಲಾವಣೆಗೆ ಬಂದು ಇಂದಿಗೆ(ನ.30, 1917) ಸರಿಯಾಗಿ ನೂರು ವರ್ಷ ಸಂದಿದೆ. ಕಿಂಗ್ ಐದನೇ ಜಾರ್ಜ್ ಚಿತ್ರದೊಂದಿಗೆ ಹೊರಬಂದ ಈ ನೋಟಿನ ವಿಶೇಷತೆ ಎಂದರೆ ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸುವುದಿಲ್ಲ. ಬದಲಾಗಿ ಭಾರತೀಯ ಸರ್ಕಾರ ಮುದ್ರಿಸುತ್ತದೆ.

ಭಾರತದ 2 ಸಾವಿರ ರು. ನೋಟು ಪಾಕಿಸ್ತಾನದಿಂದ 30 ರುಪಾಯಿಗೆ ಮಾರಾಟ

ಒಂದು ರೂ.ನೋಟಿನ ಕೆಲವು ವಿಶೇಷತೆಗಳು ಇಲ್ಲಿವೆ

* 1917 ರ ಸಮಯದಲ್ಲಿ ನಾಣ್ಯಗಳನ್ನು ಟಂಕಿಸುವುದಕ್ಕೆ ಸಾಧ್ಯವಿಲ್ಲದ ಸಮಯದಲ್ಲಿ ನೋಟುಗಳ ಮುದ್ರಣಕ್ಕೆ ಆಗಿನ ಬ್ರಿಟೀಷ್ ಸರ್ಕಾರ ತೊಡಗಿತ್ತು.

100 years for 1 rupee note

* ಒಂದು ರೂ. ನೋಟಿನ ಮೇಲೆ ಆಯಾ ವರ್ಷ ಬಿಡುಗಡೆಯಾದ ಒಂದು ರೂ. ನಾಣ್ಯವನ್ನೂ ಮುದ್ರಿಸಲಾಗುತ್ತಿತ್ತು.
* 1926 ರಲ್ಲಿ ವೆಚ್ಚ ಕಡಿತದ ದೃಷ್ಟಿಯಿಂದ ಇದರ ಮುದ್ರಣವನ್ನು ನಿಲ್ಲಿಸಲಾಯ್ತು. ನಂತರ ಮತ್ತೆ 1940 ಯಲ್ಲಿ ಮುದ್ರಣ ಆರಂಭಿಸಿ, 1994 ರಲ್ಲಿ ನಿಲ್ಲಿಸಲಾಯ್ತು. 2015 ರಲ್ಲಿ ಈ ಪುಟ್ಟ ನೋಟು ಮತ್ತೆ ಮುದ್ರಣಕ್ಕೆ ಬಂತು.

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ 1 ಸಾವಿರ ರು. ನೋಟುಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ 1 ಸಾವಿರ ರು. ನೋಟು

* ಎಲ್ಲಾ ನೋಟುಗಳಂತೆ ಈ ನೋಟಿನಲ್ಲಿ ಆರ್ ಬಿಐ ಗವರ್ನರ್ ಸಹಿ ಇರುವುದಿಲ್ಲ. ಬದಲಾಗಿ ಹಣಕಾಸು ಕಾರ್ಯದರ್ಶಿಯ ಸಹಿ ಇರುತ್ತದೆ.
* ಒಂದು ರೂಪಾಯಿಯ ಮೊದಲ ನೋಟಿನ ಮೇಲೆ ಬ್ರಿಟೀಶ್ ಹಣಕಾಸು ಕಾರ್ಯದರ್ಶಿಗಳಾದ ಎಂಎಂಎಸ್ ಗುಬ್ಬೇ, ಎಸಿ ಮ್ಯಾಕ್ ವಾಟರ್ಸ್ ಮತ್ತು ಎಚ್ ಡೆನ್ನಿಂಗ್ ರ ಸಹಿಗಳಿದ್ದವು.

English summary
The one rupee note was introduced on November 30th 1917. It has completed 100 years now. Here is a brief history of the note.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X