• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ಮುಂಬೈನ 10 ವರ್ಷದ ಬಾಲಕಿ

|
Google Oneindia Kannada News

ಮುಂಬೈ ಮೇ 23: ಮುಂಬೈನ 10 ವರ್ಷದ ಬಾಲಕಿಯೊಬ್ಬಳು ಜಗತ್ತಿನ ಅತಿ ಎತ್ತರದ ಶಿಖಿರ ಮೌಂಟ್‌ ಎವರೆಸ್ಟ್‌ನ ಬೇಸ್ ಕ್ಯಾಂಪ್ ಏರುವ ಮೂಲಕ ಸಾಧನೆ ಮೆರೆದಿದ್ದಾಳೆ. ಈ ಮೂಲಕ ಭಾರತದ ಕಿರಿಯ ಪರ್ವತಾರೋಹಿಗಳಲ್ಲಿ ಒಬ್ಬಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾಳೆ.

ಮುಂಬೈನ ವರ್ಲಿ ನಿವಾಸಿಯಾಗಿರುವ ಹರ್ಷಲ್ ಮತ್ತು ಉರ್ಮಿ ದಂಪತಿಯ ಪುತ್ರಿ ರಿದಮ್ ಮಮೆನಿಯಾ 5,364 ಮೀಟರ್ ಎತ್ತರದ ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್‌ಅನ್ನು 11 ದಿನಗಳಲ್ಲಿ ಏರಿದ್ದಾಳೆ.

"ಮುಂಬೈನ ಬಾಂದ್ರಾದ ಎಂಇಟಿ ರಿಶಿಕುಲ್ ವಿದ್ಯಾಲಯದಲ್ಲಿ 5 ನೇ ತರಗತಿ ಓದುತ್ತಿರುವ ರಿದಮ್, ಮೇ 6 ರಂದು ಮಧ್ಯರಾತ್ರಿ 1 ಗಂಟೆ ಸಮಯಕ್ಕೆ ಎವರೆಸ್ಟ್ ನ ಬೇಸ್ ಕ್ಯಾಂಪ್ ತಲುಪಿದಳು. ರಿದಮ್ ಸ್ಕೇಟಿಂಗ್ ಪಟು ಕೂಡ ಆಗಿದ್ದಾಳೆ'' ಎಂದು ರಿದಮ್ ತಾಯಿ ಉರ್ಮಿ ತಿಳಿಸಿದರು.

ರಿದಮ್‌ನ ಈ ಸಾಹಸಕ್ಕೆ ಅವರ ತಂದೆ, ತಾಯಿ ಕೂಡ ಜತೆಯಾಗಿದ್ದು, ಅವರು ಕೂಡ ಅವಳೊಂದಿಗೆ ಮೌಂಟ್‌ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ್ದಾರೆ. "ದೃಢಸಂಕಲ್ಪವೇ ನಿಮ್ಮನ್ನು ದೂರದ ಹಾದಿಗೆ ಕರೆದೊಯ್ಯುತ್ತದೆ. ಸ್ಕೇಟಿಂಗ್ ಜತೆಗೆ ಟ್ರೆಕ್ಕಿಂಗ್ ನನ್ನ ಹವ್ಯಾಸವಾಗಿದೆ. ಈ ಚಾರಣವು ನನಗೆ ಜವಾಬ್ದಾರಿಯುತ ಚಾರಣಿಗನಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಕಲಿಸಿತು. ಜತಗೆ ಪರ್ವತ ತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನು ಪರಿಹರಿಸುವುದು ಹೇಗೆ ಎಂಬುದನ್ನು ಕಲಿಸಿದೆ'' ಎಂದು ರಿದಮ್ ಹೇಳಿದಳು.

"ರಿದಮ್ ತನ್ನ 5 ನೇ ವಯಸ್ಸಿಗೆ ಪರ್ವತಾರೋಹಣ ಇಷ್ಟಪಟ್ಟಳು. 21 ಕಿ. ಮೀ. ದೂರದ ದೂಧ್ ಸಾಗರ್ ಚಾರಣವು ಅವಳ ಮೊದಲ ಸುದೀರ್ಘ ಚಾರಣವಾಗಿದೆ. ನಂತರ ಮಾಹುಲಿ, ಸೊಂಡೈ, ಕರ್ನಾಲಾ ಮತ್ತು ಲೋಹಗಡ್ ನಂತಹ ಸಹ್ಯಾದ್ರಿ ಶ್ರೇಣಿಗಳಲ್ಲಿ ಕೆಲವು ಶಿಖರಗಳನ್ನು ಅವಳು ಏರಿದ್ದಾಳೆ'' ಎಂದು ಊರ್ಮಿ ತಿಳಿಸಿದರು.

"ಮೌಂಟ್‌ ಎವರೆಸ್ಟ್ ನ ಬೇಸ್ ಕ್ಯಾಂಪ್ ಚಾರಣದ ಸಮಯದಲ್ಲಿ ರಿದಮ್ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ಕಡಿದಾದ ಭೂಪ್ರದೇಶಗಳಲ್ಲಿ 8-9 ಗಂಟೆಗಳ ಕಾಲ ನಡೆದಳು. ಆಲಿಕಲ್ಲು ಮಳೆ, ಹಿಮಪಾತ ಹಾಗೂ ಮೈನಸ್‌ 10 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ತಾಪಮಾನದಲ್ಲೂ ಅವಳು ಚಾರಣ ಮುಂದುವರಿಸಿದಳು'' ಎಂದು ವಿವರಿಸಿದರು.

"ಕಚ್ ಚಾರಣಿಗರ ಗುಂಪಿನೊಂದಿಗೆ ನೇಪಾಳ ಮೂಲದ ಕಂಪನಿಯಾದ 'ಸತೋರಿ ಅಡ್ವೆಂಚರ್ಸ್' ಜತೆಗೆ ನಾವು ಚಾರಣ ಮಾಡಿದೆವು. ಬೇಸ್‌ ಕ್ಯಾಂಪ್‌ ತಲುಪಿದ ನಂತರ ಹೆಲಿಕಾಪ್ಟರ್ ಮೂಲಕ ವಾಪಾಸು ಹಿಂತಿರುಗಲು ಗಂಪಿನ ಕೆಲ ಸದಸ್ಯರು ನಿರ್ಧರಿಸಿದರು. ಆದರೆ ರಿದಮ್ ನಡೆದೇ ಕೆಳಗೆ ಹೋಗಬೇಕೆಂದು ಒತ್ತಾಯಿಸಿದಳು. ಹಾಗಾಗಿ ನಾವು ನಾಲ್ವರು ನಡಿಗೆಯಲ್ಲಿ ಕೆಳಗೆ ಇಳಿದೆವು,'' ಎಂದು ರಿದಮ್ ತಾಯಿ ಊರ್ಮಿ ಮಾಹಿತಿ ನೀಡಿದರು.

English summary
10-year-old skater Rhythm Mamania from Mumbai became one of the youngest Indian mountaineers to climb the Everest base camp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X