ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಗೆ ಝಿಕಾ ವೈರಸ್ ಆತಂಕ: ಕೇರಳ ಗಡಿಭಾಗದಲ್ಲಿ ಭಾರೀ ಕಟ್ಟೆಚ್ಚರ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 13: ಕೊರೊನಾ ಮಹಾಮಾರಿಯ ನಡುವೆ ಇದೀಗ ಝಿಕಾ ವೈರಸ್ ಆತಂಕ ಶುರುವಾಗಿದೆ. ಕೇರಳದಲ್ಲಿ ಈ ವೈರಸ್‌ನ ಅಟ್ಟಹಾಸ ಶುರುವಾಗಿರುವುದರಿಂದ ಕೇರಳದ ಜೊತೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ಕೇರಳದ ರೋಗಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.

ಕೊರೊನಾ ಮಹಾಮಾರಿ ಸ್ವಲ್ಪ ಕಡಿಮೆಯಾಯಿತು ಎನ್ನುವಷ್ಟರಲ್ಲಿ ಇದೀಗ ಕೇರಳದಲ್ಲಿ ಝಿಕಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಸದ್ಯ ಕೇರಳದಲ್ಲಿ ಝಿಕಾ ವೈರಸ್ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ಅಲರ್ಟ್ ಘೋಷಿಸಿದೆ.

 ದಕ್ಷಿಣ ಕನ್ನಡದಲ್ಲಿ ಹಿಂದೂ ಯುವತಿಯ ಮದುವೆಗೆ ನೆರವಾದ ಮುಸ್ಲಿಂ ಕುಟುಂಬ! ದಕ್ಷಿಣ ಕನ್ನಡದಲ್ಲಿ ಹಿಂದೂ ಯುವತಿಯ ಮದುವೆಗೆ ನೆರವಾದ ಮುಸ್ಲಿಂ ಕುಟುಂಬ!

ಪ್ರತಿನಿತ್ಯ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ನೂರಾರು ರೋಗಿಗಳು ಬರುತ್ತಾರೆ. ಈ ಕಾರಣದಿಂದ ಜಿಲ್ಲೆಯ 8 ಮೆಡಿಕಲ್ ಕಾಲೇಜು, 66 ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದೆ. ಕೇರಳದಿಂದ ಬರುವ ಗರ್ಭಿಣಿಯರನ್ನು ಟೆಸ್ಟ್‌ಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ.

Mangaluru: Zika Virus Worries In Dakshina Kannada District; High Alert In The Kerala Border

ಝಿಕಾ ಸೋಂಕಿನ ಲಕ್ಷಣಗಳು

ಝಿಕಾ ವೈರಸ್ ಸೊಳ್ಳೆಯ ಮೂಲಕ ಹರಡುತ್ತದೆ. ಸೋಂಕು ತಗುಲಿದವರಲ್ಲಿ ಜ್ವರ, ಸ್ನಾಯು ಸೆಳೆತ, ಕೀಲು ನೋವು, ದೇಹದಲ್ಲಿ ತುರಿಕೆ ಮತ್ತು ಉರಿ, ಬಳಲಿಕೆ, ತಲೆ ನೋವಿನ ಲಕ್ಷಣಗಳು ಕಂಡುಬರುತ್ತವೆ. ಇದರಲ್ಲಿ ಗರ್ಭಿಣಿಯರಿಗೆ ಸೋಂಕು ತಗುಲಿದರೆ ಹೆಚ್ಚು ಅಪಾಯಕಾರಿಯಾಗಿದ್ದು, ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣ ಹಾಗೂ ನವಜಾತ ಶಿಶುಗಳಲ್ಲಿ ಅಸಹಜ ಬೆಳವಣಿಗೆ ಮತ್ತು ತಲೆ ಕಿರಿದಾಗುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಎಸ್.ಎಂ. ಕೃಷ್ಣ ಫೋಟೋನೇ ಟಾರ್ಗೆಟ್!ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಎಸ್.ಎಂ. ಕೃಷ್ಣ ಫೋಟೋನೇ ಟಾರ್ಗೆಟ್!

ಹೀಗಾಗಿ ಕೇರಳದ ರೋಗಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಜಿಲ್ಲೆಯ ಆಸ್ಪತ್ರೆಗಳಿಗೆ ಟೆಸ್ಟ್‌ ಮಾಡಿಸಲು ಬರುವ ಗರ್ಭಿಣಿಯರ ಟ್ರಾವೆಲ್ ಹಿಸ್ಟರಿ ಸಂಗ್ರಹಿಸುವುದರ ಜೊತೆಗೆ ಜ್ವರದಿಂದ ಬಳಲುತ್ತಿರುವ ಗರ್ಭಿಣಿಯನ್ನು ಟೆಸ್ಟ್‌ಗೆ ಒಳಪಡಿಸಬೇಕೆಂದು ತಿಳಿಸಲಾಗಿದೆ.

Mangaluru: Zika Virus Worries In Dakshina Kannada District; High Alert In The Kerala Border

ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ 10 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ವಿಟ್ಲದ ಮೂರು, ಪುತ್ತೂರು ಗ್ರಾಮಾಂತರದ ಮೂರು ಮತ್ತು ಸುಳ್ಯದ ನಾಲ್ಕು ಭಾಗದಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ.

ಝಿಕಾ ವೈರಸ್ ತೀವ್ರತೆಯ ಬಗ್ಗೆ ಅಧ್ಯಯನ ನಡೆಸಲು ಈಗಾಗಲೇ ಕೇಂದ್ರ ಸರ್ಕಾರ ಕೇರಳಕ್ಕೆ ತಜ್ಞರ ತಂಡ ಕಳುಹಿಸಿದೆ. ಸದ್ಯ ಜಿಲ್ಲೆಯಲ್ಲಿ ಸೋಂಕು ಹರಡದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿಗಾ ಇರಿಸಿದ್ದು, ಸಾರ್ವಜನಿಕರು ಸಹ ಮುನ್ನೆಚರಿಕೆಯನ್ನು ವಹಿಸಬೇಕಾದ ಅಗತ್ಯವಿದೆ.

English summary
Zika Virus in Kerala: High alert has been announced in the Dakshina Kannada district that shares the border with Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X