ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನಾಪತ್ತೆ

|
Google Oneindia Kannada News

ಮಂಗಳೂರು, ನವೆಂಬರ್. 15:ನದಿಗೆ ಮೀನು ಹಿಡಿಯಲು ಹೋದ ಯುವಕರಿಬ್ಬರು ಕಣ್ಮರೆಯಾದ ಘಟನೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಮೀಪದ ದೇವಚಳ್ಳ ಗ್ರಾಮದಲ್ಲಿ ಸಂಭವಿಸಿದೆ. ನಿನ್ನೆ ರಾತ್ರಿ (ನ.14) ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಯುವಕರ ತಂಡ ತೆರಳಿತ್ತು. ಈ ಪೈಕಿ ಇಬ್ಬರು ಯುವಕರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮಾಜಿ ಪಿಎಸ್ಐ ಮದನ್ ಜೊತೆಗಿದ್ದ ಯುವಕ ನಿಗೂಢವಾಗಿ ಕಣ್ಮರೆ!ಮಾಜಿ ಪಿಎಸ್ಐ ಮದನ್ ಜೊತೆಗಿದ್ದ ಯುವಕ ನಿಗೂಢವಾಗಿ ಕಣ್ಮರೆ!

ನಾಪತ್ತೆಯಾಗಿರುವ ಯುವಕರನ್ನು ದೇವಚಳ್ಳ ಗ್ರಾಮದ ದೇವ ಕಾಡು ಹೊನ್ನಪ್ಪರ ಪುತ್ರ ಲತೀಶ್ ಮತ್ತು ಎಲ್ಯಣ್ಣ ಎಂಬುವವರ ಪುತ್ರ ಲಕ್ಷಿತ್ ಎಂದು ಗುರುತಿಸಲಾಗಿದೆ.

 ಆರು ವರ್ಷದ ಹಿಂದೆ ಮದುವೇಲಿ ಕಳೆದಿದ್ದ ವ್ಯಕ್ತಿ ವಾಟ್ಸಪ್ ಮೂಲಕ ಪತ್ತೆ ಆರು ವರ್ಷದ ಹಿಂದೆ ಮದುವೇಲಿ ಕಳೆದಿದ್ದ ವ್ಯಕ್ತಿ ವಾಟ್ಸಪ್ ಮೂಲಕ ಪತ್ತೆ

Youth drowned while fishing near Sullia

ಒಟ್ಟು 5 ಮಂದಿ ಯುವಕರ ತಂಡ ಮೀನು ಹಿಡಿಯಲು ರಾತ್ರಿ ನದಿ ತೀರಕ್ಕೆ ತೆರಳಿತ್ತು. ಅದರಲ್ಲಿ ಉಳಿದ ಮೂವರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದ್ದು, ಘಟನೆಯ ಸ್ಪಷ್ಟ ಚಿತ್ರಣ ಇನ್ನಷ್ಟೇ ದೊರಕಬೇಕಿದೆ. ನಾಪತ್ತೆಯಾದ ಯುವಕರು ನೀರು ಪಾಲಾಗಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.

 ಮಿಸ್ಸಿಂಗ್ ಕರ್ನಾಟಕ: 3 ವರ್ಷದಲ್ಲಿ 50 ಸಾವಿರ ಮಂದಿ ಕಾಣೆ ಮಿಸ್ಸಿಂಗ್ ಕರ್ನಾಟಕ: 3 ವರ್ಷದಲ್ಲಿ 50 ಸಾವಿರ ಮಂದಿ ಕಾಣೆ

Youth drowned while fishing near Sullia

ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಂದು ಬೆಳಗ್ಗೆ 9 ಗಂಟೆಯಿಂದ ನದಿಯಲ್ಲಿ ಶೋಧ ಕಾರ್ಯ ಆರಂಭವಾಗಿದೆ. ಸ್ಥಳೀಯ ಈಜುಗಾರರರು ಕೂಡ ನದಿಯಲ್ಲಿ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

English summary
Youth from Devachalla village near Sullia drowned while fishing in Kumaradhara river
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X