• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಬ್ರಹ್ಮಣ್ಯದಲ್ಲಿ ಟ್ರೆಕಿಂಗ್ ಹೋದ ವೇಳೆ ಬೆಂಗಳೂರಿನ ಯುವಕ ನಾಪತ್ತೆ

By ಮಂಗಳೂರು ಪ್ರತಿನಿಧಿ
|

ಸುಬ್ರಹ್ಮಣ್ಯ, ಸೆಪ್ಟೆಂಬರ್ 17: ಪುಷ್ಪಗಿರಿ ವನ್ಯಧಾಮದ ಕುಮಾರ ಪರ್ವತ ಚಾರಣಕ್ಕೆ ಶನಿವಾರ ತಂಡವೊಂದು ತೆರಳಿದ್ದು, ತಂಡದಲ್ಲಿದ್ದ ಬೆಂಗಳೂರಿನ ಗಾಯತ್ರಿ ನಗರ ನಿವಾಸಿ ಸಂತೋಷ್ (24) ನಾಪತ್ತೆಯಾಗಿದ್ದಾರೆ.

ಹೈದರಾಬಾದ್ ಮೂಲದ ಇನ್ಫಿ ಟೆಕ್ಕಿ ಶವ ಲೋನಾವಾಲ ಕಣಿವೆಯಲ್ಲಿ ಪತ್ತೆಹೈದರಾಬಾದ್ ಮೂಲದ ಇನ್ಫಿ ಟೆಕ್ಕಿ ಶವ ಲೋನಾವಾಲ ಕಣಿವೆಯಲ್ಲಿ ಪತ್ತೆ

ಸೆ.14 ರಂದು ಬೆಂಗಳೂರು ಮೂಲದ 12 ಮಂದಿ ಚಾರಣಕ್ಕೆ ಹೋಗಿದ್ದರು. ತಂಡವು ಶನಿವಾರ ಪುಷ್ಪಗಿರಿ ತಪ್ಪಲಿನ ಕುಮಾರ ಪರ್ವತಕ್ಕೆ ಚಾರಣಕ್ಕೆ ತೆರಳಿ, ಭಾನುವಾರ ಗಿರಿಗದ್ದೆಯಿಂದ ವಾಪಸ್ ಆಗುವ ವೇಳೆ ಸಂತೋಷ್ ನಾಪತ್ತೆಯಾಗಿದ್ದಾರೆ. ತಂಡದಲ್ಲಿದ್ದವರು ಹುಡುಕಾಟ ನಡೆಸಿದ್ದಾರೆ. ಆದರೆ ಪತ್ತೆಯಾಗಿಲ್ಲ. ಬೆಂಗಳೂರು ಕಾಳಿಕಾ ನಗರ ನಿವಾಸಿ ದರ್ಶನ್ ಎಂಬುವರು ದೂರು ದಾಖಲಿಸಿದ್ದಾರೆ.

ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಗ್ರಾ.ಪಂಚಾಯತ್ ಅಧಿಕಾರಿಗಳನ್ನು ಒಳಗೊಂಡ ತಂಡದ ಜತೆ ಸುಬ್ರಹ್ಮಣ್ಯ ಸ್ಥಳೀಯ ಹಾಗೂ ದೇವರಗದ್ದೆಯ ನುರಿತ ಯುವಕರ ತಂಡ ಶೋಧಕ್ಕೆ ತೆರಳಿತ್ತು. ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅರಣ್ಯ ಇಲಾಖೆ ಅಧಿಕಾರಿಗಳು ಅಲ್ಲದೆ ಪುತ್ತೂರು, ಬೆಳ್ಳಾರೆ, ಸುಳ್ಯ ಮುಂತಾದ ಕಡೆಗಳಿಂದ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಇಂದು ಬೆಳಗ್ಗೆ ಪೊಲೀಸ್ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳ ಐದು ತಂಡ ಹುಡುಕಾಟ ಮುಂದುವರಿಸಿದೆ.

English summary
Santosh (24), a resident of Gayatrinagar of Bangalore, was missing when a team went to the Kumaraparvatha trek at Pushpagiri Sanctuary on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X