ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೂಟ್ಯುಬ್ ನೋಡಿ ಕಳ್ಳತನ ಕಲಿತ ಬೈಕ್ ಚೋರರ ಬಂಧನ

|
Google Oneindia Kannada News

ಮಂಗಳೂರು ಮೇ 28: ಮಾಹಿತಿ ತಂತ್ರಜ್ಞಾನ ಹೇಗೆಲ್ಲಾ ದುರ್ಬಳಕೆಯಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಮಂಗಳೂರಿನಲ್ಲಿ ನಡೆದ ಪ್ರಕರಣವೊಂದರಿಂದ ಬೆಳಕಿಗೆ ಬಂದಿದೆ.

ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನವನ್ನು ಕಳ್ಳತನಕ್ಕೆ ಬಳಕೆ ಮಾಡಿರುವ ಕುತೂಹಲಕಾರಿ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿಭಂಗಕ್ಕೆ ಯತ್ನ, ಇಬ್ಬರ ಬಂಧನಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿಭಂಗಕ್ಕೆ ಯತ್ನ, ಇಬ್ಬರ ಬಂಧನ

ಯೂಟ್ಯುಬ್ ಸಹಾಯ ಪಡೆದು ಬೈಕ್ ಕಳವು ಮಾಡುತ್ತಿದ್ದ 8 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಹಲವಾರು ದಿನಗಳಿಂದ ನಗರದಲ್ಲಿ ಬೈಕ್ ಕಳ್ಳತನ ಹೆಚ್ಚಾಗುತ್ತಿದ್ದಂತೆ ನಗರದ ಬಂದರು ಠಾಣೆಯ ಪೊಲೀಸರು ಈ ಬೈಕ್ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.

You tube bike thieves arrested by mangaluru police

ಈ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಎಲ್ಲಾ ಬೈಕ್ ಕಳ್ಳತನ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಕೇರಳ ಮೂಲದ 5 ವಿದ್ಯಾರ್ಥಿಗಳು ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ.

ಬಂಧಿತರ ವಿಚಾರಣೆ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳು ಶೋಕಿ ಜೀವನಕ್ಕಾಗಿ ಬೈಕ್ ಕಳ್ಳತನ ಮಾಡುವ ವಿಚಾರ ಬೆಳಕಿಗೆ ಬಂದಿದೆ. ಯೂಟ್ಯುಬ್ ನಲ್ಲಿ ಲಾಕ್ ಮಾಡಿದ ಬೈಕ್ ಅನ್ನು ಅನ್ ಲಾಕ್ ಮಾಡುವ ವಿಧಾನದ ಬಗ್ಗೆ ಮಾಹಿತಿ ಸಂಗ್ರಹಿಸಿ ಉಪಾಯದಿಂದ ಹೊಸ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದರು.

ಕಳ್ಳತನ ಮಾಡಿದ ಬೈಕ್ ಗಳನ್ನು ಈ ವಿದ್ಯಾರ್ಥಿಗಳು ಕೇರಳದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಬಂಧಿತರಿಂದ ಒಂದು ಕಾರು ಮತ್ತು 3 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ವಿದ್ಯಾರ್ಥಿಗಳು ಕೇರಳದ ಪಯ್ಯನ್ನೂರು ನವರಾಗಿದ್ದು, ಅಲ್ಲೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಹಿಂದೆ ಒಂದೆರಡು ಬಾರಿ ಪಯ್ಯನ್ನೂರಿನಲ್ಲೇ ಬೈಕ್ ಕಳ್ಳತನ ಮಾಡಿದ್ದ ಈ ತಂಡ ನಂತರ ತಮ್ಮ ಕೃತ್ಯವನ್ನು ಮಂಗಳೂರಿಗೆ ವಿಸ್ತರಿಸಿದ್ದರು. ಪಯ್ಯನ್ನೂರಿನಲ್ಲಿ ರಾತ್ರಿ ಬಾಡಿಗೆ ಕಾರನ್ನು ಪಡೆದು ತಡರಾತ್ರಿ ಮಂಗಳೂರಿಗೆ ತಲುಪುತ್ತಿದ್ದರು.

ಈ ತಂಡ ಮಂಗಳೂರಿನ ಕಾಲ್ ಸೆಂಟರ್ ಕೆಳಗೆ, ಮನೆಗಳ ಹೊರಗೆ , ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ಬೈಕ್ ಗಳನ್ನು ಗುರುತಿಸಿ, ಕಳ್ಳತನ ಮಾಡಿ ಬೈಕ್ ಗಳನ್ನು ಚಲಾಯಿಸಿಕೊಂಡು ತೆರಳುತ್ತಿದ್ದ ಈ ಚೋರರು ಮುಂಜಾನೆ ಪಯ್ಯನ್ನೂರು ತಲಪುತ್ತಿದ್ದರು.

ಹೆಚ್ಚಾಗಿ ಬುಲೆಟ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಲಾಗುತ್ತಿತ್ತು. ಹೆಚ್ಚಾಗಿ ಹೊಸಬೈಕ್ ಗಳನ್ನೆ ಕಳವು ಮಾಡುತ್ತಿದ್ದ ಈ ತಂಡ ಕಳೆದ 3 ತಿಂಗಳಲ್ಲಿ 25 ಕ್ಕೂ ಹೆಚ್ಚು ಬೈಕ್ ಗಳನ್ನು ಕಳ್ಳತನ ಮಾಡಿದೆ ಎಂದು ಹೇಳಲಾಗಿದೆ.

English summary
Mangaluru Bandar station Police team succeeded in arresting student gang of Kerala in Connection with bike theft case. Police arrested 8 persons including 5 students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X