ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಂಗ್ರೆಸ್ ಅಧಿಕಾರಕ್ಕೇರಿದರೆ ರಾಜ್ಯದಲ್ಲಿ ಜಿಹಾದಿ, ಗೂಂಡಾ ಕೇಂದ್ರ': ಯೋಗಿ

|
Google Oneindia Kannada News

ಮಂಗಳೂರು, ಮೇ 9: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಮತ್ತೆ ಜಿಹಾದಿ, ಗೂಂಡಾ ಹಾಗೂ ಮಾಫಿಯಾಗಳ ಕೇಂದ್ರವನ್ನಾಗಿ ಮಾಡಲಿದ್ದಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಪರ ಮಂಗಳವಾರ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಕರ್ನಾಟಕಕ್ಕೆ ಬಂದರೆ ಸಿದ್ದರಾಮಯ್ಯಗೇಕೆ ಸಂಕಟ?ನಾನು ಕರ್ನಾಟಕಕ್ಕೆ ಬಂದರೆ ಸಿದ್ದರಾಮಯ್ಯಗೇಕೆ ಸಂಕಟ?

"ಸಿದ್ಧರಾಮಯ್ಯರಿಗೆ ನಾನು ರಾಜ್ಯಕ್ಕೆ ಬರುವುದು ಇಷ್ಟವಿಲ್ಲ. ನನ್ನ ಪ್ರಚಾರ ಕಾರ್ಯವನ್ನು ವಿರೋಧಿಸುತ್ತಾರೆ. ಸಿದ್ಧರಾಮಯ್ಯ ಜಾತಿ-ಜಾತಿಗಳನ್ನು , ಧರ್ಮಗಳನ್ನು ಒಡೆಯುವ ಕೆಲಸ ಮಾಡುವ ಬದಲು ರಾಜ್ಯದ ಜನತೆಯನ್ನು ಒಗ್ಗೂಡಿಸುವ ಕೆಲಸವನ್ನು ಮಾಡಬೇಕಿತ್ತು. ನಾನೊಬ್ಬ ಗೋ ಪ್ರೇಮಿ ಹಾಗೂ ಗೋ ರಕ್ಷಕನಾಗಿರುವ ಕಾರಣ ರಾಜ್ಯಕ್ಕೆ ನಾನು ಬರುವುದು ಸಿದ್ಧರಾಮಯ್ಯರಿಗೆ ಪಥ್ಯವಾಗುತ್ತಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.

Yogi Adityanath hit out Siddaramaiah in Sullia

ರಾಜ್ಯದಲ್ಲಿ ಸಿದ್ದರಾಮಯ್ಯ , "ಅಕ್ರಮ ಗೋ ಹತ್ಯೆ, ಗೋವಧೆ ಕೇಂದ್ರಗಳನ್ನು ಮುಚ್ಚುವ ಬದಲು, ಇವುಗಳಿಗೆ ಉತ್ತೇಜನ ನೀಡುವ ಕಾರ್ಯ ನಡೆಸುತ್ತಿದ್ದಾರೆ. ತಾನು ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ರಾಜ್ಯದಲ್ಲಿ ಗೂಂಡಾಗಳ, ಜಿಹಾದಿಗಳ ಕೇಂದ್ರವಾಗಿ ಮಾರ್ಪಟ್ಟಿತು. ಆದರೆ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುವುದಕ್ಕೆ ಮೊದಲೇ ಈ ಎಲ್ಲಾ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಮಾಡಿದ್ದೇನೆ," ಎಂದು ಹೇಳಿದರು.

ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಅಕ್ರಮ ಗೋ ವಧಾ ಕೇಂದ್ರಗಳನ್ನು ಉತ್ತರ ಪ್ರದೇಶದಲ್ಲಿ ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಿದ್ದರಾಮಯ್ಯ ಸಂಬಂಧ ಭಾರತಕ್ಕಿಂತ ಇಟಲಿ ಜೊತೆ ಚೆನ್ನಾಗಿದೆ : ಯೋಗಿ ವ್ಯಂಗ್ಯಸಿದ್ದರಾಮಯ್ಯ ಸಂಬಂಧ ಭಾರತಕ್ಕಿಂತ ಇಟಲಿ ಜೊತೆ ಚೆನ್ನಾಗಿದೆ : ಯೋಗಿ ವ್ಯಂಗ್ಯ

ಉತ್ತರಪ್ರದೇಶದ 86 ಲಕ್ಷ ಕೃಷಿಕರ ಸಾಲಮನ್ನಾ ಮಾಡಿದ್ದೇನೆ. ಆದರೆ ಕಾಂಗ್ರೆಸ್ ಸರಕಾರ ಅಡಿಕೆ ಕೃಷಿಯನ್ನೇ ನಾಶ ಮಾಡುವಂತಹ ಪ್ರಕ್ರಿಯೆಗೆ ಮುಂದಾಗಿತ್ತು ಎಂದು ಆರೋಪಿಸಿದರು. ಲೋಕಸಭೆಯಲ್ಲಿ ಅಡಿಕೆಯನ್ನು ಹಾನಿಕಾರಕ ಎಂದು ಬಿಂಬಿಸಿ ಅಡಿಕೆ ಕೃಷಿಯನ್ನೇ ನಾಶ ಮಾಡುವ ಪ್ರಯತ್ನ ಕಾಂಗ್ರೆಸ್ ನಡೆಸಿತ್ತು ಎಂದು ಅವರು ದೂರಿದರು.

English summary
Karnataka assembly elections 2018: Uttara Pradesh Chief Minister Yogi Adityanath visited Sullia assembly constituency. He campaigned for BJP candidate S Angara at Sullia. During his campaign speech he slams Karnataka government and Chief Minister Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X