ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೇಸುಕ್ರಿಸ್ತರ ಜೀವನಚರಿತ್ರೆಗೆ ಯಕ್ಷಗಾನದ ಟಚ್ ನೀಡಿದ ಕೇಶವಯ್ಯಾ

ಈವರೆಗೆ ಬೈಬಲ್‍ನಿಂದ ಹಿಡಿದು ನಾಟಕ, ಚಲನಚಿತ್ರ, ಹಾಡುಗಳು ಹೀಗೆ ವಿವಿಧ ಕಲಾ ಪ್ರಕಾರಗಳಿಗೆ ಸೀಮಿತವಾಗಿದ್ದ ಯೇಸುಕ್ರಿಸ್ತನ ಜೀವನಚರಿತ್ರೆಗೆ ಯಕ್ಷಗಾನದ ಟಚ್ ದೊರೆತಿದೆ. ಮುಳಿಯ ಕೇಶವಯ್ಯ ಈ ಯಕ್ಷಗಾನ ಪ್ರಸಂಗ ಬರೆದಿದ್ದಾರೆ.

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ಮೇ 19: ದಕ್ಷಿಣ ಕನ್ನಡದ ಗಂಡುಕಲೆ ಎಂದರೆ ಯಕ್ಷಗಾನ. ಇದರ ಮೂಲಕ ಹಲವಾರು ಪವರಾಣಿಕ ಕಥೆಗಳನ್ನು ಯಕ್ಷ ಪ್ರಿಯರಿಗೆ ತಲುಪಿದೆ. ಆದರೆ ಈಗ ಇದೇ ಕಲೆ ಹೊಸತನವೊಂದಕ್ಕೆ ಕೈ ಹಾಕಿ ಯಶಸ್ವಿಯಾಗಿದೆ.

ಈವರೆಗೆ ಬೈಬಲ್‍ನಿಂದ ಹಿಡಿದು ನಾಟಕ, ಚಲನಚಿತ್ರ, ಹಾಡುಗಳು ಹೀಗೆ ವಿವಿಧ ಕಲಾ ಪ್ರಕಾರಗಳಿಗೆ ಸೀಮಿತವಾಗಿದ್ದ ಯೇಸುಕ್ರಿಸ್ತನ ಜೀವನಚರಿತ್ರೆಗೆ ಯಕ್ಷಗಾನದ ಟಚ್ ದೊರೆತಿದೆ. ಮುಳಿಯ ಕೇಶವಯ್ಯ ಎಂಬುವವರು ಮಹಾನ್ ಚೇತನ ಯೇಸು ಕ್ರಿಸ್ತ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗ ಬರೆದಿದ್ದಾರೆ.[ಅಂಧರ ಭವಿಷ್ಯ ಕಟ್ಟುತ್ತಿರುವ 'ಅಮೃತ ಬಿಂದು']

Yakshagana Talamaddale to bring on stage Life of Jesus on May 27 at dob bosco in mangaluru

ಸುಮಾರು ನಾಲ್ಕು ದಶಕಗಳ ಹಿಂದೆಯೇ ಈ ಬಗ್ಗೆ ಪುಸ್ತಕ ರಚಿಸಿದ್ದರು. ಸದ್ಯ ಅದನ್ನು ಪರಿಷ್ಕರಿಸಿ ಅದಕ್ಕೆ ಸಂಭಾಷಣೆಗಳನ್ನು ಸೇರಿಸಿದ್ದಾರೆ. ಇದೀಗ ಯಕ್ಷಪ್ರಿಯರಿಗೆ ಯಕ್ಷಗಾನದ ಮೂಲಕ ಯೇಸುಕ್ರಿಸ್ತರ ಜೀವನ ಚರಿತ್ರೆಯನ್ನು ಉಣಬಡಿಸುವ ಕೆಲಸವನ್ನು ಮೇ 27 ಸಂಜೆ 3 ಗಂಟೆಗೆ ಮಂಗಳೂರಿನ ಡಾನ್‍ಬೋಸ್ಕೋ ಹಾಲ್‍ನಲ್ಲಿ ಏರ್ಪಡಿಸಿದ್ದಾರೆ.

ಈ ಮೂಲಕ ಕ್ರೈಸ್ತ ಸಮುದಾಯದ ಜನರನ್ನು ಯಕ್ಷಗಾನ ಕಲೆಯ ಕಡೆಗೆ ಕರೆದೊಯ್ಯುವುದು ಇದರ ಉದ್ದೇಶ. ಈ ಮೂಲಕ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆಯಲು ಮುಳಿಯ ಕೇಶವಯ್ಯಾ ಮುಂದಾಗಿದ್ದಾರೆ.

ಇಂಗ್ಲೀಷ್‍ಗೆ ಭಾಷಾಂತರ
ಯೇಸುಕ್ರಿಸ್ತನ ಜೀವನಚರಿತ್ರೆಯನ್ನು ಯಕ್ಷಗಾನವೆಂಬ ಕಲಾರೂಪಕ್ಕೆ ತರುವುದು ಕಷ್ಟದ ಕೆಲಸವೇ. ಅದನ್ನು ಕೇಶವಯ್ಯ ಮಾಡಿ ತೋರಿಸಿದ್ದಾರೆ. ಇದಕ್ಕೆ ಅವರು ಬೈಬಲ್ ಹಾಗೂ ಇತರ ಪುಸ್ತಕಗಳನ್ನು ಅಧ್ಯಯನ ನಡೆಸಿದ್ದಾರೆ.

Yakshagana Talamaddale to bring on stage Life of Jesus on May 27 at dob bosco in mangaluru

ಸುಮಾರು 123 ಪುಟಗಳಿರುವ "ಮಹಾನ್ ಚೇತನ ಯೇಸು ಕ್ರಿಸ್ತ ಮಹಾತ್ಮೆ" ಪುಸ್ತಕವು ಇಂಗ್ಲೀಷ್ ಭಾಷೆಗೆ ಡಾ.ಮುಳಿಯಾಲ್ ಎಂಬವರು ಭಾಷಾಂತರಿಸಿದ್ದಾರೆ.

ಈ ಬಗ್ಗೆ ಖ್ಯಾತ ಸಾಹಿತಿ ಡಾ.ಆನಂದರಾಮ್ ಉಪಾಧ್ಯಾಯ ಹೇಳುವುದು ಹೀಗೆ, "ಮುಳಿಯ ಕೇಶವಯ್ಯ ತಮ್ಮ 80ರ ಇಳಿವಯಸ್ಸಿನಲ್ಲೂ ಯೇಸುಕ್ರಿಸ್ತರ ಬಗ್ಗೆ ಯಕ್ಷಗಾನ ಪ್ರಸಂಗ ಸಿದ್ದಪಡಿಸಿರುವುದು ಸಾಧನೆಯೇ ಸರಿ. ಇದು ಅತ್ಯಂತ ತ್ರಾಸದಾಯಕ ಕೆಲಸ. ಇದು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯದ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿ'ಸೋಜ ಅವರು ಉದ್ಘಾಟಿಸಲಿದ್ದಾರೆ. ಈ ವೇಳೆ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹನಿ ಕಾಬ್ರಲ್, ಆಲಂಗಾರು ಚರ್ಚ್‍ನ ಧರ್ಮಗುರುಗಳಾದ ಫಾ.ಮಾರ್ಕ್ ವಾಲ್ಡರ್ ಹಾಗೂ ಮಂಗಳೂರು ವಿವಿಯ ಕನ್ನಡ ಉಪನ್ಯಾಸಕ ಪ್ರೊ. ಕೆ. ಚಿನ್ನಪ್ಪ ಗೌಡ ಉಪಸ್ಥಿತರಿರುವರು.

{promotion-urls}

English summary
Yakshagana has largely been the medium bringing alive Hindu mythology on stage, but here in a rare and undoubtedly unique effort, life of Messenger of Peace- Jesus Christ is being assayed through the colourful art of Yakshagana by veteran writer Muliya Keshavaiah. The program is organized on 27th May at Donbosco Hall in Mangaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X