ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಕ್ಷಗಾನಕ್ಕೆ ಧರ್ಮ ಬಂಧನ ಇಲ್ಲ, ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 16: ರಾಜ್ಯದಲ್ಲಿ ಲೌಡ್ ಸ್ಪೀಕರ್ ಲಡಾಯಿ ನಿರ್ಣಾಯಕ ಹಂತ ತಲುಪಿದೆ. ಮುಸ್ಲಿಂ ಮುಖಂಡರು ಬೆಳಗ್ಗೆ ಆರು ಗಂಟೆಯವರೆಗಿನ ಅಝಾನ್ ನ್ನು ಮೈಕ್ ಇಲ್ಲದೇ ಮಾಡಲು ಒಪ್ಪಿದ್ದಾರೆ. ಆದರೆ ಧರ್ಮದ ಲೇಪನ ಇಲ್ಲದ ಬಡ ಕಲಾವಿದರಿಗೆ ಮಾತ್ರ ಸರ್ಕಾರದ ಆದೇಶ ಕುತ್ತು ತಂದಿದೆ. ಕರಾವಳಿ‌ ಜಿಲ್ಲೆಗಳಲ್ಲಿ ರಾತ್ರಿ ಇಡೀ ನಡೆಯುವ ಯಕ್ಷಗಾನದಲ್ಲೂ ಮೈಕ್ ಬಳಕೆ ತಡೆಯುವ ಆತಂಕ ಯಕ್ಷಗಾನ ಕಲಾವಿದರಲ್ಲಿದೆ.

ಈ ಬಗ್ಗೆ ಸರ್ಕಾರಕ್ಕೆ ಯಕ್ಷಗಾನ ಕಲಾವಿದರು, ಲೌಡ್ ಸ್ಪೀಕರ್ ಬಳಕೆ ವಿಚಾರದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ರಿಯಾಯಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಯಕ್ಷಗಾನ ಮೇಳದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ, ಕರಾವಳಿ ಕರ್ನಾಟಕದಲ್ಲಿ ಸರ್ಕಾರ ತನ್ನ ಆದೇಶದ ಬಗ್ಗೆ ಗಮನಹರಿಸಬೇಕು. ಕರಾವಳಿ ಕರ್ನಾಟಕದಲ್ಲಿ ಸಾಕಷ್ಟು ಯಕ್ಷಗಾನ,ನಾಟಕ ತಂಡಗಳಿವೆ. ಆರೇಳು ಜಿಲ್ಲೆಗಳಲ್ಲಿ ರಾತ್ರಿ ಇಡೀ ಕಾರ್ಯಕ್ರಮಗಳು ನಡೆಯುತ್ತದೆ. ಯಕ್ಷಗಾನಕ್ಕೆ ಯಾವುದೇ ಧರ್ಮದ ಬಂಧನ ಇಲ್ಲ. ಎಲ್ಲಾ ಧರ್ಮದವರು ಯಕ್ಷಗಾನವನ್ನು ಆಡಿಸುತ್ತಾರೆ. ಯಕ್ಷಗಾನವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಮಾಡುತ್ತಾರೆ. ಇದಕ್ಕೆ ಧರ್ಮದ ತಡೆ ಇಲ್ಲ. ಸರ್ಕಾರ ಇದನ್ನು ಗಮನಿಸಬೇಕು. ಕೊರೊನಾ ಸಂದರ್ಭದಲ್ಲಿ ಕಲಾವಿದರು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದರು. ಇದನ್ನೇ ನಂಬಿ ನಾಟಕ ಯಕ್ಷಗಾನ ಕಲಾವಿದರಿದ್ದಾರೆ.ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಯಕ್ಷಗಾನ ಕ್ಕೆ ವಿಶೇಷ ಅವಕಾಶ ನೀಡಬೇಕು.

Yakshagana artistes demand Govt to revoke loudspeaker order

ಮೈಕ್ ಡೆಸಿಬಲ್‌ನಿಂದ ಯಕ್ಷಗಾನ ಮಾಡಲು ಸಾಧ್ಯವಿಲ್ಲ. ಕರಾವಳಿ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ಕಟೀಲು ಮಂದಾರ್ತಿ ಸೇರಿದಂತೆ ಹಲವು ಮೇಳಗಳು ರಾತ್ರಿ ಇಡೀ ಕಾರ್ಯಕ್ರಮ ನೀಡುತ್ತದೆ. ಕೆಲವು ಕಾಲಮಿತಿಯ ತಂಡಗಳೂ ಇದೆ. ಯಾವುದಕ್ಕೂ ಇಂತಹ ನಿಯಮ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಈ ಬಗ್ಗೆ ಸರ್ಕಾರ ಪ್ರತ್ಯೇಕ‌ನಿಯಮ ತರಬೇಕು ಅಂತಾ ಮನವಿ ಮಾಡಿದ್ದಾರೆ.

ಇನ್ನೋರ್ವ ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಕೂಡಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಯಕ್ಷಗಾನ ನಡೆಯೋದು ಮೈಕ್ ಮೂಲಕವಾಗಿದೆ. ಮೈಕ್ ಇಲ್ಲದೇ ಯಕ್ಷಗಾನವನ್ನು ನಡೆಸಲು ಸಾಧ್ಯವಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಅಂತಾ ಮನವಿ ಮಾಡಿದ್ದಾರೆ.

Yakshagana artistes demand Govt to revoke loudspeaker order

ಕೊರೊನಾ ಸಂದರ್ಭದಲ್ಲಿ ಭಾರೀ ತೊಂದರೆಗೀಡಾದ ಕಲಾವಿದರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಧರ್ಮ ಸಂಘರ್ಷ ವನ್ನು ಮುಂದಿಟ್ಟು ಕಲಾವಿದರಿಗೆ ತೊಂದರೆ ನೀಡುವುದು ಸರಿಯಲ್ಲ. ಕಲಾವಿದರ ಬದುಕು ಸುಸ್ಥಿತಿಗೆ ಬರುವ ಸಂಧರ್ಭದಲ್ಲಿ ಇಂತಹ ನಿಯಮಗಳು ಜಾರಿಯಾದರೆ ಕಲಾವಿದರ ಜೊತೆಗೆ ಕಲೆಯೂ ಅಳಿಸಿ ಹೋಗುತ್ತದೆ ಎಂಬ ಆತಂಕ ಕಲಾವಿರದ್ದಾಗಿದೆ.

ಒಟ್ಟಿನ್ನಲ್ಲಿ ಧ್ವನಿ ವರ್ಧಕದ ಬಳಕೆಯ ಕುರಿತು ಸರ್ಕಾರ ಸುತ್ತೋಲೆ ಕಲಾವಿದರನ್ನು ಕಂಗೆಡಿಸಿದೆ.ಧರ್ಮದ ಅಮಲು ಹತ್ತದ ಕಲಾ ರಂಗಕ್ಕೆ ಧರ್ಮ ಸಂಘರ್ಷ ಹೊಡೆತ ನೀಡದಿರಲಿ ಅನ್ನೋದು ಕಲಾ ಪ್ರೇಕ್ಷಕರ ಅಭಿಪ್ರಾಯವಾಗಿದೆ.

English summary
Yakshagana artistes demand Govt to revoke loudspeaker order and allow to use it during the night also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X