ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಕ್ಷಗಾನ ಕಲಾ ಪ್ರಸಂಗವೂ, ಜಾತಿ ವಿವಾದವೂ...

By ಶುಭಾಶಯ ಜೈನ್
|
Google Oneindia Kannada News

ತಮ್ಮ ಕೀಳರಿಮೆಯ ಮನೋಸ್ಥಿತಿಗೆ ಮಣೆ ಹಾಕುವ ಬದಲು, ಕ್ಷಮೆ ಯಾಚಿಸಿ ಬಂದವರನ್ನು ಮನ್ನಿಸಿ ಸಹೋದರತ್ವದ ಭಾವ ಮೆರೆವ ಉದಾರತೆ ತೋರಿದ್ದರೆ ಇಂದು ಅವರೇ ಮತ್ತೆ ದೊಡ್ಡವರಾಗ್ತಾ ಇದ್ರು. ಆದ್ರೆ ಅವರು ಹಾಗ್ಮಾಡ್ಲಿಲ್ಲ. ಜಾತಿನಿಂದಕ ಪದಬಳಕೆಯಿಂದಲೇ ತಮ್ಮ ಪಂಗಡವನ್ನು ದಮನಿಸುವ ಯತ್ನ ಎಂದು ಬಂಡಾಯದ ಕಿಡಿ ಹಚ್ಚಿ ಇಂದು ದ್ವೇಷ ವೈಷಮ್ಯವನ್ನೇ ಕಲಹದ ಪರಮ ಉದ್ದೇಶವನ್ನಾಗಿರಿಸಿಕೊಂಡಿದ್ದಾರೆ. ಅಂದಂತೆ, ಇವ್ರ ವಿರುದ್ಧ ಯಾರೂ ಸಮರ ಸಾರುತ್ತಿಲ್ಲ. ಉಂಟಾದ ಮನಸ್ತಾಪಕ್ಕೆ ಇತಿಶ್ರೀ ಹಾಡೋಣವೆಂದರೂ ಜಪ್ಪಯ್ಯಾಂದ್ರು ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ. ಇದೆಲ್ಲಾ ಯಾವ ಪುರುಷಾರ್ಥಕ್ಕಾಗಿ???

ಪೂರ್ತಿ ಘಟನೆಯ ಬೆಳವಣಿಗೆಯನ್ನು ಗಮನಿಸಿದ್ರೆ ಈ ಗುಂಪಿಗೆ ಬಂಡಾಯದ ಉದ್ದೇಶಕ್ಕಿಂತಲೂ ಪ್ರತೀಕಾರದ ಹಪಾಹಪಿಯೇ ಹೆಚ್ಚಿರುವಂತಿದೆ...

 ಮರಾಠಿಗೂ ಅಡಿಯಿಡಲು ಸಜ್ಜಾಗಿದೆ ನಮ್ಮ ಹೆಮ್ಮೆಯ ಯಕ್ಷಗಾನ ಮರಾಠಿಗೂ ಅಡಿಯಿಡಲು ಸಜ್ಜಾಗಿದೆ ನಮ್ಮ ಹೆಮ್ಮೆಯ ಯಕ್ಷಗಾನ

ನಡೆದದ್ದಿಷ್ಟು- ಯಕ್ಷಗಾನ ಕಲಾವಿದ ಪೂರ್ಣೇಶ್ ಆಚಾರ್ಯ ಮಂಗಳೂರಿನ ಟೌನ್ ಹಾಲ್ ನಲ್ಲಿ ಬ್ರಹ್ಮ ಬಲಾಂಡಿ ಎಂಬ ಯಕ್ಷಗಾನವನ್ನು ಆಯೋಜಿಸುತ್ತಾರೆ. ಯೋಜನೆಯಂತೆ ಕರಪತ್ರವೂ ಬಿಡುಗಡೆಯಾಗ್ತದೆ. ಬಹಳ ವರ್ಷಗಳ ಹಿಂದೆ ಅದ್ದೂರಿ ಪ್ರದರ್ಶನ ಕಂಡಿದ್ದ ಪ್ರಸಂಗದಲ್ಲಿ ದಮನಿತರ ವರ್ಗಕ್ಕೆ ಸೇರಿದ ಪಾತ್ರವೊಂದರ ಚಿತ್ರಣವಿರುತ್ತದೆ... ಅರಿವಿನ ಕೊರತೆಯಿಂದ ಯಕ್ಷಗಾನದ ಕರಪತ್ರದಲ್ಲಿ ನಿಷೇಧಿತ ಜಾತಿಸೂಚಕ ಪದವನ್ನು ಬಳಸಲಾಗಿರುತ್ತದೆ. ಅದು ಪ್ರಜ್ಞಾಪೂರ್ವಕವಾಗಿ ನಡೆದ ತಪ್ಪಲ್ಲ. ಈ ಕುರಿತು ಕಾರ್ಯಕ್ರಮದ ಸಂಯೋಜಕ ಯಕ್ಷಗಾನ ಕಲಾವಿದರೂ ಆಗಿರುವ ಪೂರ್ಣೇಶ್ ಆಚಾರ್ಯ ಕ್ಷಮೆ ಕೇಳಿಯೂ ಆಗಿದೆ. ಅಷ್ಟಕ್ಕೇ ಸುಮ್ಮನಿರದ ಸಂಘಟನೆಗಳು, ಹೋರಾಟದ ಪಟ್ಟು ಸಡಿಲಿಸುತ್ತಿಲ್ಲ. ಅಂದ್ರೆ ಇದೆಲ್ಲದರ ಉದ್ದೇಶ ಕೋಮುವಾದದ ಬೆಂಕಿ ಹಚ್ಚೋದೇ? ಅಥವಾ ಪೂರ್ಣೇಶ್ ಎಂಬ ನಿರುಪದ್ರವಿ ಕಲಾವಿದನ ಮೇಲೆ‌ ವೈಯುಕ್ತಿಕ ದ್ವೇಷವೇ?

ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡು ಪ್ರಸಂಗವನ್ನೇ ಬದಲಾವಣೆ ಮಾಡಿದರೂ ಪೂರ್ಣೇಶ್ ಅವರಿಗೆ ಹೊಡೀತೇವೆ, ಬಡೀತೇವೆ, ತಲೆ ತೆಗೆಯುತ್ತೇವೆ, ಎಂದೆಲ್ಲಾ ಬೆದರಿಕೆ ಕರೆಗಳು ಬರ್ತಿವೆ ಎಂದಾದ್ರೆ ನಾವೇನು ತಾಲಿಬಾನ್ ನಲ್ಲಿದ್ದೇವೆಯೇ ಎಂಬ ಶಂಕೆ ಕಾಡ್ತಿದೆ. ಹಾಗಾದರೆ ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಕಾನೂನು ಎಲ್ಲಿದೆ? ಈ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದರೂ ದಕ್ಷ ಅಧಿಕಾರಿಗಳೆಂದು ಕರೆಸಿಕೊಳ್ಳುವವರು ಯಾಕಿನ್ನೂ ನಿಷ್ಕ್ರಿಯರಾಗಿದ್ದಾರೆ?

yakshagana artist and caste dispute mangaluru

ಪೂರ್ಣೇಶ್ ಅವರನ್ನು ಯಾಕೆ ಬೆಂಬಲಿಸಬೇಕು-
* ಯಕ್ಷಗಾನದ ಕರಪತ್ರದಲ್ಲಿ ನಿಷೇಧಿತ ಜಾತಿಸೂಚಕ ಪದ ಉದ್ದೇಶಪೂರ್ವಕವಾಗಿ ಬಳಸಲಾಗಿಲ್ಲ ಎಂಬ ಕಾರಣಕ್ಕಾಗಿ
* ಅಚಾತುರ್ಯದಿಂದ ನಡೆದ ತಪ್ಪಾದರೂ ಸಾರ್ವಜನಿಕವಾಗಿ ಕ್ಷಮೆ ಕೇಳಿ ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗಿದ್ದಕ್ಕೆ
* ಪೂರ್ಣೇಶ್ ಯಕ್ಷಗಾನದ ಕಾರ್ಯಕ್ರಮ ಆಯೋಜಿಸಿದ್ದರೇ ಹೊರತು, ದುರುದ್ದೇಶ ಪೂರ್ವಕ ಕಾರ್ಯಕ್ರಮ ಇದಲ್ಲ ಎಂಬ ಕಾರಣಕ್ಕಾಗಿ

ದುಬೈನಲ್ಲಿ ನೂತನ ಮಕ್ಕಳ ಯಕ್ಷಗಾನ ತಂಡದ ಉದ್ಘಾಟನೆದುಬೈನಲ್ಲಿ ನೂತನ ಮಕ್ಕಳ ಯಕ್ಷಗಾನ ತಂಡದ ಉದ್ಘಾಟನೆ

* ಪೂರ್ಣೇಶ್ ಒಬ್ಬ ಕ್ರಿಯಾಶೀಲ ಉತ್ಸಾಹಿ ಪ್ರಾಮಾಣಿಕ ಕಲಾವಿದ ಎಂಬ ಕಾರಣಕ್ಕಾಗಿ...

ಪೂರ್ಣೇಶ್ ಅವರಿಗಿರುವ ದೊಡ್ಡ ಬಲವೆಂದರೆ ನೈತಿಕ ಬೆಂಬಲ ನೀಡಿದ ಸ್ನೇಹಿತರು, ಯಕ್ಷಗಾನ ಕಲಾವಿದರ ಬಳಗ...

yakshagana artist and caste dispute mangaluru

ಇನ್ನುಳಿದಿರುವುದು ಕೇವಲ ಎರಡು ದಿನಗಳು. ಜುಲೈ 20ರಂದು ಟೌನ್ ಹಾಲ್ ನಲ್ಲಿ ಪೂರ್ಣೇಶ್ ಅವರ ಸಂಯೋಜನೆಯಲ್ಲೇ ಯಕ್ಷಗಾನ‌ ಪ್ರದರ್ಶನ ನಡೆಯಲಿದೆ. ಆದರೆ ಆ ವಿವಾದಿತ ಪ್ರಸಂಗವಲ್ಲ. ಬದಲಿಗೆ ತುಳುನಾಡ ವೀರಪುರುಷರಾದ ಕೋಟಿ ಚೆನ್ನಯರ ಪ್ರಸಂಗ ನಡೆಯಲಿದೆ. ಈ ಕಲಿಗಳೂ ಸಮಾಜದ ವರ್ಗ ತಾರತಮ್ಯದ ವಿರುದ್ಧ ಬಂಡಾಯವೆದ್ದವರೇ. ಆದರೆ ಸಮಾಜದ ಶಾಂತಿ ಸಾಮರಸ್ಯವನ್ನು ಹಾಳುಗೆಡವುದನ್ನು ಬಯಸಲಿಲ್ಲ.

ಒಟ್ಟಿನಲ್ಲಿ ಆತಂಕದ ನಡುವೆಯೇ ಕೋಟಿ ಚನ್ನಯ್ಯ ಯಕ್ಷಗಾನ ಪ್ರದರ್ಶನ ನಡೆಸುವಂತಾಗಿದೆ. ಜೀವ ಬೆದರಿಕೆಯ ನಡುವೆಯೂ ಯಶಸ್ವಿಯಾಗಿ ಯಕ್ಷಗಾನ ಪ್ರದರ್ಶನ‌ ನಡೆಸಿಕೊಡಲು ಶ್ರಮಿಸುತ್ತಿರುವ ಕಲಾವಿದನಿಗೆ ಯಾವುದೇ ವಿಘ್ನಗಳು ಎದುರಾಗದಿರಲಿ.

English summary
yakshagana artist poornesh used caste related word unintentionally in invitation and he apologised for this. still he is threatening by some organisations not to show yakshagana show on july 20th in mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X