ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ ಇನ್ನಿಲ್ಲ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 26 : ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತ, ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ (86) ಅವರು ಸೋಮವಾರ ಸಂಜೆ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೀತಾರಾಮ ಭಟ್, ಮೂಡುಬಿದಿರೆಯ ಪಳಕಳದ ತಮ್ಮ ಸ್ವಗೃಹದಲ್ಲಿ ನಿನ್ನೆ ಸಂಜೆ ಕೊನೆಯುಸಿರೆಳೆದರು. ಮಕ್ಕಳ ಸಾಹಿತಿ' ಪಳಕಳ‌ ಸೀತಾರಾಮ ಭಟ್ ಅವರು ನಾಡಿನ ಅನೇಕ ದೈನಿಕಗಳೂ ಸೇರಿದಂತೆ ಅನೇಕ ನಿಯತಕಾಲಿಕೆಗಳಲ್ಲಿ ಅವರ ಚುಟುಕುಗಳು, ಬರೆಹಗಳು ಮಕ್ಕಳ ಅಂಕಣದಲ್ಲಿ ಪ್ರಕಟವಾಗಿ ಗಮನ ಸೆಳೆದಿವೆ.

Writer of children’s books Palakala Seetharam Bhat passed away in Mangaluru

ಕಿನ್ನಿಗೋಳಿಯ 'ಯುಗಪುರುಷ' ಮೂಲಕ ಅವರ ನೂರಕ್ಕೂ ಅಧಿಕ ಕೃತಿಗಳು ಪ್ರಕಟಗೊಂಡಿರುವುದು ಅಪರೂಪದ ದಾಖಲೆ ಎಂದೇ ಹೇಳಲಾಗುತ್ತದೆ.

ತಮ್ಮ ಇಳಿವಯಸ್ಸಿನಲ್ಲೂ ನಿರಂತರ ಎಂಬಂತೆ 'ಯುಗಪುರುಷ' ಪತ್ರಿಕೆಗೆ ಚುಟುಕುಗಳನ್ನು ನೀಡಿ ಅಂಕಣಕಾರರಾಗಿಯೂ ಅವರು ಮಕ್ಕಳ ಮನೋವಿಜ್ಞಾನಿಯಾಗಿ ಗಮನಸೆಳೆದಿದ್ದರು.

1980ರಲ್ಲಿ ರಾಜ್ಯ ಸರ್ಕಾರದ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದ ಅವರು, ನಂತರ ಅನೇಕ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕವಿಗೋಷ್ಠಿಗಳಲ್ಲಿ ಸಕ್ರಿಯರಾಗಿ 1996ರ ಹಾಸನ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

2004ರಲ್ಲಿ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇನ್ನು 1998ರಲ್ಲಿ ಕಸಾಪದ ಮಕ್ಕಳ ಸಾಹಿತ್ಯ ಸಂಚಿಕೆಯ ಸಂಪಾದಕರಾಗಿದ್ದರು.

ಸೀತಾರಾಮ ಭಟ್ ರಿಗೆ ಸಂದ ಪ್ರಶಸ್ತಿಗಳು:
ಮಕ್ಕಳ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ(2012) ಸೇರಿದಂತೆ ಮದ್ರಾಸ್ ಸರ್ಕಾರದ ಮಕ್ಕಳ ಸಾಹಿತ್ಯ ಗೌರವ(1955), ಕಸಾಪದ ಜಿ.ಪಿ.ರಾಜರತ್ನಂ ದತ್ತಿ ಬಹುಮಾನ(1983), ಹೊಸದಿಲ್ಲಿಯ ಬಾಲ ಶಿಕ್ಷಕ ಪರಿಷತ್ ಪ್ರಶಸ್ತಿ (1987), ರಾಜ್ಯ ಸಾಹಿತ್ಯ ಅಕಾಡಮಿಯ ಮಕ್ಕಳ ಸಾಹಿತ್ಯ ಪುರಸ್ಕಾರ (1999), ಕೊ.ಅ.ಉಡುಪ ಪ್ರಶಸ್ತಿ, ಶಿವರಾಮ ಕಾರಂತ ಪ್ರತಿಷ್ಠಾನದ ಗೌರವ (2002), ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ(2003), ಕರ್ನಾಟಕ ಸಂಘ ಶಿವಮೊಗ್ಗದ ಮಕ್ಕಳ ಸಾಹಿತ್ಯ ಪ್ರಶಸ್ತಿ (2004), ಆಳ್ವಾಸ್ ನುಡಿಸಿರಿ ಪ್ರಶಸ್ತಿ(2005), 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಅಮೃತ ಮಹೋತ್ಸವ ಸಮ್ಮೇಳನದಲ್ಲಿ ಸಮ್ಮಾನ(2009), ಕರ್ನಾಟಕ ಬಾಲ ವಿಕಾಸ ಅಕಾಡಮಿ ಗೌರವ ಪ್ರಶಸ್ತಿ (2010), ರಾಜ್ಯ ಮಟ್ಟದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ 'ಕರ್ನಾಟಕ ಮಕ್ಕಳ ಸಾಹಿತ್ಯ ರತ್ನ' ಗೌರವಗಳು ಪಳಕಳ‌ ಸೀತಾರಾಮ ಭಟ್ ರಿಗೆ ದೊರೆತಿವೆ.

English summary
Writer of children’s books Palakala Seetharam Bhat died at his residence in Palakala, Puttige near Moodbidri on Monday. He was 86. He is survived by his wife, five sons and a daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X