ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವ್ಯವಸ್ಥೆಯಿಲ್ಲದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಮಾಡಿದ್ದೇನು?

By ಐಸ್ಯಾಕ್ ರಿಚರ್ಡ್
|
Google Oneindia Kannada News

ಮಂಗಳೂರು ನವೆಂಬರ್ 8: ಇಲ್ಲಿನ ವಿದ್ಯಾರ್ಥಿನಿಯರ ಸರ್ಕಾರಿ ನರ್ಸಿಂಗ್ ಕಾಲೇಜಿಗೆ ಬಾಗಿಲೇ ಇಲ್ಲ. ಫ್ಯಾನ್, ದೀಪದ ವ್ಯವಸ್ಥೆಯಿಲ್ಲದೆ ಪರದಾಡುವ ವಿದ್ಯಾರ್ಥಿಗಳ ವೇದನೆ ಕೇಳುವವರಾರು?

ನಗರದ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಏಕೈಕ ಸರ್ಕಾರಿ ನರ್ಸಿಂಗ್ ಕಾಲೇಜಿನ ಸ್ಥಿತಿಗತಿ ತೀರಾ ಹದಗೆಟ್ಟಿದ್ದು, ಕಾಲೇಜಿನ ವಿದ್ಯಾರ್ಥಿಗಳು ತುಂಬಾ ಸಂಕಷ್ಟಕ್ಕೀಡಾಗಿದ್ದು, ಸಮಸ್ಯೆಯನ್ನು ಖಂಡಿಸಿ ಸೋಮವಾರ ಪ್ರತಿಭಟಿಸಿದ್ದಾರೆ.[ದ್ವಿತೀಯ ಪಿಯುಸಿ ಪರೀಕ್ಷೆ ಮಾರ್ಚ್ 9ರಿಂದ 27ರವರೆಗೆ]

worsened the situation in nursing college

ನರ್ಸಿಂಗ್ ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆ ಜೊತಗೂಡಿ ಬೃಹತ್ ಪ್ರತಿಭಟನೆಯನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸಿ ಮನವಿ ನೀಡಿದರು.

ಸ್ವಚ್ಛತೆಯ ಪಾಠ ಕಲಿಯಬೇಕಾದ ವಿದ್ಯಾರ್ಥಿಗಳು ವೆನ್ಲಾಕ್ ಜಿಲ್ಲಾಸ್ಪತ್ರೆಯ ವಿದ್ಯಾರ್ಥಿನಿಯರ ವಸತಿ ಗೃಹದಲ್ಲಿ ಮೂಲ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ವಸತಿಗೃಹದ ಅವ್ಯವಸ್ಥೆಗೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಅವರು ದೂರಿದ್ದಾರೆ.[ಬಯಲಾಯ್ತು ಹುಬ್ಬಳ್ಳಿ ಪ್ರಿನ್ಸಿಪಾಲರ ವಿಕೃತ ಕಾಮುಕತನ]

worsened the situation in nursing college

ಸಮಸ್ಯೆ ಏನು?
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣವಿಲ್ಲ. 130 ವಿದ್ಯಾರ್ಥಿನಿಯರು ಇರುವ ವಿದ್ಯಾರ್ಥಿ ನಿಲಯದಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಇದರಿಂದ ವಿದ್ಯಾರ್ಥಿನಿಯರು ಭಯದಿಂದಲೇ ವಾಸ್ತವ್ಯ ಮಾಡಬೇಕು. ಹಾಸ್ಟೆಲ್ ನಲ್ಲಿ ವಾರ್ಡನ್ ಕೊರತೆಯೂ ಇದೆ.

ಬಾಗಿಲು, ಫ್ಯಾನ್, ದೀಪದ ವ್ಯವಸ್ಥೆ ಹದಗೆಟ್ಟಿದೆ. ವಿದ್ಯಾರ್ಥಿ ನಿಲಯದಲ್ಲಿ 130 ವಿದ್ಯಾರ್ಥಿಗಳಿದ್ದು, ಹೆಚ್ಚುವರಿಯಾಗಿ 76 ವಿದ್ಯಾರ್ಥಿಗಳು ಊಟಕ್ಕೆ ಬರುತ್ತಾರೆ. ಒಟ್ಟೂ 206 ಜನರಿಗೆ ಅಡುಗೆ ತಯಾರಿಸಬೇಕಾಗಿದೆ. ಆದರೆ, ಕೇವಲ ಮೂವರು ಅಡುಗೆ ಸಿಬ್ಬಂದಿ ಇದ್ದಾರೆ.

worsened the situation in nursing college

ಅವರಲ್ಲಿ ಒಬ್ಬರು ರಜೆ ಹಾಕಿದರೆ ವಿದ್ಯಾರ್ಥಿನಿಯರೇ ಅಡುಗೆ ತಯಾರಿಸುವ ಸಹಾಯಕರಾಗಿ ನಿಂತು ಕೆಲಸ ಮಾಡಬೇಕಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇಲ್ಲದ ವ್ಯವಸ್ಥೆಯಲ್ಲಿ ತಾವೇ ಎಲ್ಲವನ್ನು ನಿರ್ವಹಿಸಿ, ಅಡುಗೆಯನ್ನು ಮಾಡಿಕೊಂಡರೆ ವ್ಯಾಸಂಗದ ಗತಿಯೇನು?

ವಿದ್ಯಾರ್ಥಿ ನಿಲಯದಲ್ಲಿ ಅಗತ್ಯ ಮೂಲ ಸೌಲಭ್ಯ, ಭದ್ರತಾ ಸಿಬ್ಬಂದಿ ನೇಮಕ, ಓದಿಗೆ ಉತ್ತಮ ವಾತಾವರಣ ಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈಗಲಾಗದರೂ ಅಧಿಕಾರಿಗಳು ಎಚ್ಚೆತ್ತು ಜವಾಬ್ದಾರಿ ವಹಿಸಿ ವಸತಿಗೃಹದ ಸಮಸ್ಯೆಗಳಿಗೆ ಸ್ಪಂದಿಸಿ, ಶಾಶ್ವತ ಪರಿಹಾರ ಕಲ್ಪಿಸಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

English summary
Government Wenlock Hospital College of Nursing is the only government in the city is extremely worsened the situation, and his hostel also. Want anInfrastructure that's way student are protests with ABVP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X