ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೀರೆಯುಟ್ಟು ವಾಕಿಂಗ್ ಮಾಡಿದ ಮಂಗಳೂರಿನ ಮಹಿಳಾಮಣಿಗಳು

|
Google Oneindia Kannada News

ಮಂಗಳೂರು, ಆಗಸ್ಟ್ 12: ಸೀರೆಯುಟ್ಟು ವಾಕಿಂಗ್ ಹೋಗೋಕೆ ಕಂಫರ್ಟಬಲ್ ಅನಿಸಲ್ಲ ಅನ್ನುವ ಕಾರಣಕ್ಕೆ ಮಹಿಳೆಯರು ಜಾಗ್ ಹೋಗೋಕೆ ದೂರ ಸರಿಯುತ್ತಾರೆ. ಇಂತಹ ಮಹಿಳೆಯರನ್ನು ನಡಿಗೆಗೆ ಪ್ರೋತ್ಸಾಹಿಸಲು ಮಂಗಳೂರಿನಲ್ಲೊಂದು ಪ್ರಯತ್ನ ನಡೆಸಲಾಗಿದೆ.

ಹೌದು, "ಸಾರಿ ಉಟ್ಟರೆ ನಡೆದಾಡಲು ಅಷ್ಟು ಹಿತಕರ ಅನಿಸುವುದಿಲ್ಲ" ಎಂದು ಬಹಳಷ್ಟು ಮಹಿಳೆಯರ ದೂರುತ್ತಿರುವ ಕಾರಣಕ್ಕೋ ಏನೋ ಇದಕ್ಕೆ ಅಪವಾದ ಎಂಬಂತೆ ಮಂಗಳೂರಿನ ಮಹಿಳೆಯರು ಸೀರೆಯಲ್ಲೇ ವಾಕಿಂಗ್ ಮಾಡಿದ್ದಾರೆ.

Womens walking with wearing sarees in Mangalore

ಮಂಗಳೂರಿನಲ್ಲಿ ನೀರೆಯರಿಗಾಗಿ ಸೀರೆಯಲ್ಲೇ ಓಡುವ ಸ್ಪರ್ಧೆ!ಮಂಗಳೂರಿನಲ್ಲಿ ನೀರೆಯರಿಗಾಗಿ ಸೀರೆಯಲ್ಲೇ ಓಡುವ ಸ್ಪರ್ಧೆ!

ಮಂಗಳೂರಿನ "ಮೆಡಿಮೈಡ್ ಸೊಲ್ಯುಷನ್ ಅಸೋಸಿಯೇಷನ್ ಕ್ಲಬ್" ವತಿಯಿಂದ ಸೀರೆ ನಡಿಗೆ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ನೂರಾರು ಮಹಿಳೆಯರು ಬೆಳ್ಳಂಬೆಳಗ್ಗೆ ಸೀರೆಯುಟ್ಟು ಹಾಜರಾಗಿದ್ದಾರೆ.

Womens walking with wearing sarees in Mangalore

ಜಡಿ ಮಳೆಯ ನಡುವೆಯೂ ನಗರದ ಮಣ್ಣಗುಡ್ಡೆಯಿಂದ ಸೀರೆಯಲ್ಲೇ ವಾಕಿಂಗ್ ಆರಂಭಿಸಿದ ಸುಮಾರು 600ಕ್ಕಿಂತ ಹೆಚ್ಚು ಮಹಿಳೆಯರು ಮಂಗಳಾ ಕ್ರೀಡಾಂಗಣ ಮೂಲಕ ಮತ್ತೆ ಮಣ್ಣಗುಡ್ಡ ತಲುಪಿ ಎರಡು ಕಿ.ಮೀ. ವಾಕಿಂಗ್ ಪೂರ್ತಿಗೊಳಿಸಿದರು.

Womens walking with wearing sarees in Mangalore

ಶೂ, ಟ್ರಾಕ್ ಸೂಟ್, ಟೀ ಶರ್ಟ್ ಅಲ್ಲದೆ ಸೀರೆಯಲ್ಲೂ ವಾಕಿಂಗ್ ಮಾಡಬಹುದು ಅನ್ನೋದನ್ನು ಮಹಿಳೆಯರು ಸಾಬೀತುಪಡಿಸಿದರು.

English summary
In Mangalore, women's walking with wearing sarees. A special program called the Saree Walking was organized by the Madimaid Solution Association Club.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X