ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ನೈತಿಕ ಪೊಲೀಸ್‌ಗಿರಿ ತಡೆಗೆ ಕಠಿಣ ಕ್ರಮ

By Kiran B Hegde
|
Google Oneindia Kannada News

ಮಂಗಳೂರು, ನ. 29: ನಗರದಲ್ಲಿ ನೈತಿಕ ಪೊಲೀಸ್‌ಗಿರಿ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ನಗರದಲ್ಲಿ ಎಲ್ಲಿಯೇ ಇಂತಹ ಚಟುವಟಿಕೆ ಕಂಡುಬಂದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

ಮಂಗಳೂರು ನಗರದ ವಿವಿಧೆಡೆ ಪೊಲೀಸರು ಗಸ್ತು ತಿರುಗುತ್ತಾರೆ. ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಆಯುಕ್ತರು ಭರವಸೆ ನೀಡಿದರು. [ಪೊಲೀಸ್ ಆದೇಶ ಮೀರಿ ಕಿಸ್ ಆಫ್ ಲವ್ ಮಾಡ್ತಾರಂತೆ...]

ನಗರದ ಕನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ) ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. [ಕಿಸ್ ಆಫ್ ಲವ್ ನಡೆಯುತ್ತಾ]

ಜನರು ತಮ್ಮ ವಾರ್ಡ್‌ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುವವರ ಕುರಿತು ಎಚ್ಚರದಿಂದಿರಬೇಕು. ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿಗಳನ್ನು ಹಬ್ಬಿಸಿ ಸಮಾಜದಲ್ಲಿ ಗೊಂದಲ ಹಬ್ಬಿಸಲಾಗುತ್ತಿದೆ ಎಂದು ತಿಳಿಸಿದರು.

police

ಶೀಘ್ರ ಸೈಬರ್ ಪೊಲೀಸ್ ಠಾಣೆ: ನಗರದಲ್ಲಿ ಸೀಘ್ರ ಸೈಬರ್ ಪೊಲೀಸ್ ಠಾಣೆ ಆರಂಭಿಸಲಾಗುವುದು. ಅಲ್ಲಿಯವರೆಗೆ ಜನರು ತಮಗೆ ಕಂಡುಬಂದ ಯಾವುದೇ ಸೈಬರ್ ಅಪರಾಧಗಳ ಕುರಿತು ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಸೂಚಿಸಿದರು. [ಪೊಲೀಸ್ ವ್ಯಾನ್‌ನಲ್ಲಿ ಮುತ್ತಿನ ಮಳೆಗರೆದರು]

ಮಂಗಳೂರಿನಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ಯುವಕ, ಯುವತಿಯರು ಜೊತೆಯಲ್ಲಿ ಸಂಚರಿಸದಂತೆ ಬೆದರಿಕೆ ಹಾಕಿರುವ ಹಾಗೂ ಹಲ್ಲೆ ನಡೆಸಿರುವ ಹಲವು ಪ್ರಕರಣಗಳು ವರದಿಯಾಗಿವೆ ಎಂದು ಆರ್. ಹಿತೇಂದ್ರ ತಿಳಿಸಿದ್ದಾರೆ. [ಮುತ್ತಿನ ಮಳೆಗೆ ತಣ್ಣೀರೆರೆಚಿದ್ದು ಯಾರು]

English summary
Police commissioner of Mangaluru city R Sharath told in a program that, the police department is keeping strict vigil on the groups resorting to moral policing. And he told as soon as possible department will start a cyber police station in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X