• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕನ್ನಡಿಗರ ಮೇಲೆ ಮಲಯಾಳಂ ಹೇರಿದರೆ ಸುಮ್ಮನಿರಲ್ಲ - ಭೀಮಾಶಂಕರ ಪಾಟೀಲ

By ಐಸಾಕ್ ರಿಚರ್ಡ್
|

ಮಂಗಳೂರು, ಮೇ 23: ಜೂನ್ 1ರಿಂದ ಕೇರಳ ರಾಜ್ಯದಲ್ಲಿ ಮಲಯಾಳಂ ಭಾಷೆ ಕಡ್ಡಾಯ ಎಂಬ ಆದೇಶ ಗಡಿನಾಡ ಕನ್ನಡಿಗರ ಮೇಲೆ ಬರೆ ಎಳೆದಂತಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಕಾಸರಗೋಡು ಜಿಲ್ಲಾಧಿಕಾರಿ ಕಛೇರಿ ಮುಂದೆ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಪ್ರತಿಭಟನೆ ನಡೆಯಿತು.

ಈ ಬಗ್ಗೆ ಪ್ರತಿಭಟನೆಯ ನೇತೃತ್ವ ವಹಿಸಿದ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಜತೆ 'ಒನ್ ಇಂಡಿಯಾ' ಸಂದರ್ಶನ ನಡೆಸಿದೆ. ಅದರ ಪೂರ್ಣ ಭಾಗ ಇಲ್ಲಿದೆ.

ಕೇರಳದಲ್ಲಿ ಮಲಯಾಳಂ ಕಡ್ಡಾಯ ಆದೇಶದ ಬಗ್ಗೆ ನಿಮ್ಮ ಮೊದಲ ಪ್ರತಿಕ್ರಿಯೆ?

ಮೊದಲನೆಯದಾಗಿ ಕೇರಳದಲ್ಲಿ ಮಲಯಾಳಂ ಹೇರಿಕೆ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಗಡಿನಾಡ ಜಿಲ್ಲೆಯಾದ ಕಾಸರಗೋಡಿನ ಬಗ್ಗೆ ಭಾಷಾವಾರು ಪ್ರಾಂತ್ಯದ ವಿಚಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ತಕರಾರು ಇರುವುದರಿಂದ ತೀರ್ಪು ಬರುವವರೆಗೆ ಈ ಆದೇಶದಿಂದ ಕಾಸರಗೋಡು ಜಿಲ್ಲೆಯನ್ನು ಹೊರಗಿಡಬೇಕೆಂಬ ಹಕ್ಕೊತ್ತಾಯ ಮಾಡುತ್ತಿದ್ದೇವೆ.

ಇಂದಿನ ಹೋರಾಟದಲ್ಲಿ ನಿಮ್ಮ ಹಕ್ಕೊತ್ತಾಯ ಏನು?

ನಮ್ಮ ಈ ಹೋರಾಟದ ಉದ್ದೇಶ ನಮ್ಮ ಕನ್ನಡದ ಅಣ್ಣ, ತಮ್ಮಂದಿರಾದ ಕಾಸರಗೋಡು ಕನ್ನಡಿಗರನ್ನು ಕಾಪಾಡುವುದು. ಇಂದಿನ ಹಕ್ಕೊತ್ತಾಯ ಅಂದರೆ ಈ ಆದೇಶವನ್ನು ಕಾಸರಗೋಡು ಜಿಲ್ಲೆಯಿಂದ ಹಿಂಪಡೆಯಬೇಕೆಂಬುವುದು. ಇಂದು ನಾವು ಈ ಹೋರಾಟದಲ್ಲಿ ಕಾಸರಗೋಡಿನ 5 ವಿಧಾನಸಭಾ ಕ್ಷೇತ್ರದ ಕನ್ನಡಿಗರು ಇಲ್ಲಿ ಸೇರಿದ್ದೇವೆ.

ಈ ಬಗ್ಗೆ ಕೇರಳ ಸರಕಾರಕ್ಕೆ ನಿಮ್ಮ ಮನವಿ ಸಲ್ಲಿಸಿದ್ದೀರಾ?

ಈ ಹಿಂದಿನಿಂದಲೂ ಈ ಬಗ್ಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಪತ್ರ ಬರೆಯುತ್ತಾರೆಂದು ಆಶ್ವಾಸನೆ ಕೊಟ್ಟಿದ್ದಾರೆ. ಬರೆದಿದ್ದಾರೋ ಗೊತ್ತಿಲ್ಲ. ಆದರೆ ನಮ್ಮ ಹೋರಾಟ ಮುಂದುವರೆಯುತ್ತದೆ.

ಇಂದು ನೀವು ಜಿಲ್ಲಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಲಿದ್ದೀರಾ?

ಇಂದು ಯಾವುದೇ ಕಾರಣಕ್ಕೂ ಯಾವುದೇ ಮನವಿ ಸಲ್ಲಿಸುವುದಿಲ್ಲ. ಇಂದು ನಾವು ಬಂದಿರುವ ಉದ್ದೇಶ ನಮ್ಮ ಹಕ್ಕೊತ್ತಾಯ ನಡೆಸಲು ಹಾಗೂ ಕನ್ನಡಿಗರ ಶಕ್ತಿ ಪ್ರದರ್ಶನಕ್ಕೆ ಬಂದಿದ್ದೇವೆ.

ಭಾಷಾವಾರು ಪ್ರಾಂತ್ಯದ ಬಗೆಗಿನ ಮಹಾಜನ್ ವರದಿ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮಹಾಜನ್ ಅವರು ಭಾಷಾವಾರು ಪ್ರಾಂತ್ಯದ ವರದಿಯಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಶಿಫಾರಸ್ಸು ಮಾಡಿದ್ದಾರೆ. ಈಗ ಆ ವರದಿಯ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ವ್ಯಾಜ್ಯ ಇರುವುದರಿಂದ ಸುಪ್ರೀಂ ವರದಿ ಬರುವವರೆಗೂ ಈ ಆದೇಶ ಕಾಯ್ದಿಡಬೇಕೆಂಬ ಹಕ್ಕೊತ್ತಾಯವನ್ನು ಕೇರಳ ಸರಕಾರಕ್ಕೆ ಮಾಡುತ್ತಿದ್ದೇವೆ.

ನಿಮ್ಮ ಹೋರಾಟಕ್ಕೆ ಎಷ್ಟು ಜನ ಕೈಜೋಡಿಸಿದ್ದಾರೆ?

ಇಂದು ಬೆಳಿಗ್ಗೆ 8ರಿಂದ ಶುರುವಾದ ಹೋರಾಟಕ್ಕೆ ಕಾಸರಗೋಡಿನ 138 ಪಂಚಾಯತ್‍ನ ಸದಸ್ಯರು ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಜೊತೆಗೆ ಸುಮಾರು 120 ಕನ್ನಡಪರ ಸಂಘಟನೆಗಳ ಸುಮಾರು 10ಸಾವಿರ ಕನ್ನಡಿಗರು ಸೇರಿದ್ದಾರೆ.

ಸರಕಾರ ಪ್ರತಿಕ್ರಿಯಿಸದಿದ್ದರೆ ಮುಂದೇನು ಮಾಡುತ್ತೀರಾ?

ನಮ್ಮ ಹಕ್ಕೊತ್ತಾಯಕ್ಕೆ ಕೇರಳ ಸರಕಾರ ಮಣಿಯದಿದ್ದರೆ ಈ ಆದೇಶ ಜಾರಿಯಾಗುವಂದು ಅಂದರೆ ಜೂನ್ ಒಂದರಂದು ಕೇರಳದ ತಿರುವನಂತಪುರಂನಲ್ಲಿ ಕೇರಳ ರಾಜ್ಯಸಚಿವಾಲಯಕ್ಕೆ ಮುತ್ತಿಗೆ ಹಾಕುತ್ತೇವೆ. ಅದಕ್ಕೂ ಮಣಿಯದಿದ್ದರೇ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಾಂತ ಇರುವ ಮಲಯಾಳಿಗರನ್ನು ಹೊರಹಾಕುವ ಕೆಲಸಕ್ಕೆ ಕೈ ಹಾಕಬೇಕಾಗುತ್ತದೆಂಬ ಎಚ್ಚರಿಕೆ ನೀಡುತ್ತಿದ್ದೇವೆ.

English summary
Here is the exclusive interview of Bhima Shankara Patil, president of ‘Karnataka Nava Nirmana Sene’. Pro Kannada people organized a protest on May 23 against the Kerala government’s ordinance on April 11, making Malayalam compulsory in all the schools up to Class 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X