• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದೂ ಪೂಜಾ ಪದ್ದತಿಯಲ್ಲಿ ವಿಧವೆಯರು ಅರ್ಚಕರಾಗ ಬಾರದೇ?

|

ನುಡಿದಂತೆ ನಡೆದ ಜನಾರ್ಧನ ಪೂಜಾರಿಯವರು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ವಿಧವೆಯವರಿಂದ ಪೂಜಾ ಕೈಂಕರ್ಯ ನಡೆಸಿದ್ದಾರೆ.

ಶರವನ್ನವರಾತ್ರಿಯ ಎರಡನೆಯ ದಿನವಾದ ಭಾನುವಾರ (ಅ 6) ಭಗವತಿ ಪೂಜೆಯ ಪುಣ್ಯದಿನದಂದು ಪುತ್ತೂರು ತಾಲೂಕು ಬನ್ನೂರಿನ ಇಂದಿರಾ ಶಾಂತಿ ಮತ್ತು ಬಂಟ್ವಾಳ ಮೂಡಾದ ಲಕ್ಷ್ಮಿ ಶಾಂತಿ ಎನ್ನುವವರು ಐತಿಹಾಸಿಕ ದೇವಾಲಯದ ಗರ್ಭಗುಡಿ ಪ್ರವೇಶಿಸಿ ಗೋಕರ್ಣನಾಥೇಶ್ವರನಿಗೆ ಪೂಜೆ ಸಲ್ಲಿಸಿ ವಿಧಿವಿಧಾನ ಪೂರೈಸಿದ್ದಾರೆ.

ಪೂಜೆಗೆ ನಿಯುಕ್ತರಾದ ಇಬ್ಬರು ವಿಧವೆಯವರು ಸುಮಾರು ನಾಲ್ಕು ತಿಂಗಳುಗಳ ಕಾಲ ದೇವಾಯಲಯದ ಪೂಜಾ ಪದ್ದತಿ, ನೀತಿ, ನಿಯಮಗಳ ಬಗ್ಗೆ ಆಮೂಲಾಗ್ರವಾಗಿ ಅರಿತು ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿದ್ದಾರೆ.

ಹಿಂದೂ ಸಮಾಜ ಇದುವರೆಗೆ ನಡೆದುಕೊಂಡ ಬಂದ ರೀತಿ ಮತ್ತು ನಂಬಿಕೊಂಡು ಬಂದಿರುವ ಪೂಜಾ ಪದ್ದತಿಯಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ ಜನಾರ್ಧನ ಪೂಜಾರಿಯವರ ಈ ದಿಟ್ಟ ಹೆಜ್ಜೆ ರಾಷ್ಟ್ರೀಯ ಮಾಧ್ಯಮಗಳೂ ಸೇರಿದಂತೆ ರಾಜ್ಯ ಟಿವಿ ವಾಹಿನಿಗಳಲ್ಲಿ ಈಗಾಗಲೇ ಭಾರೀ ಚರ್ಚೆಗೆ ಪಾತ್ರವಾಗಿದೆ.

ಶಕ್ತಿ ಸ್ವರೂಪಿಣಿ ದುರ್ಗೆಯನ್ನು ವಿಶೇಷವಾಗಿ ಆರಾಧಿಸುವ ಈ ಒಂಬತ್ತು ದಿನಗಳ ನವರಾತ್ರಿ ಉತ್ಸವದಲ್ಲಿ ವಿಧವೆಯರಿಬ್ಬರು ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿದ ಕ್ರಮ ಎಷ್ಟು ಸರಿ ಎಷ್ಟು ತಪ್ಪು ಎನ್ನುವುದನ್ನು ನಾಸ್ತಿಕರು, ಆಸ್ತಿಕರು, ಸಮಾಜ ಸುಧಾರಕರು, ಸಮಾಜ ಚಿಂತಕರು, ಅವರು ಇವರು ಸೇರಿ ಎಲ್ಲಾ ತಮ್ಮದೇ ಆದ ವಿಭಿನ್ನ ನಿಲುವಿನ ಮೂಲಕ ವ್ಯಾಖ್ಯಾನಿಸುತ್ತಿದ್ದಾರೆ.

ಹಿಂದೂ ಸಮಾಜದ ಈ ಹೊಸ ಪೂಜಾ ಪದ್ದತಿಯ ಬಗ್ಗೆ ಪರ, ವಿರೋಧ ಚರ್ಚೆಗಳ ನಡುವೆ ನಮ್ಮ ಒನ್ ಇಂಡಿಯಾ ಕನ್ನಡದ ಅಸಂಖ್ಯಾತ ಓದುಗರ ಅಭಿಪ್ರಾಯವನ್ನು ಇಲ್ಲಿ ಆಹ್ವಾನಿಸಲಾಗಿದೆ. ಹಿಂದೂ ಪೂಜಾ ಪದ್ದತಿಯಲ್ಲಿ ವಿಧವೆಯರು ಅರ್ಚಕರಾಗಬಾರದೇ? ಬನ್ನಿ ಈ ಚರ್ಚೆಯಲ್ಲಿ ಭಾಗವಹಿಸಿ...

ಪೂಜಾ ಪದ್ದತಿಗೂ, ಭಕ್ತ ಪ್ರಹ್ಲಾದ ಪ್ರಕರಣಕ್ಕೂ ಹೋಲಿಸಿದ ಜನಾರ್ಧನ ಪೂಜಾರಿ..

ಜನಾರ್ಧನ ಪೂಜಾರಿ

ಜನಾರ್ಧನ ಪೂಜಾರಿ

ಖಾಸಗಿ ಕನ್ನಡ ವಾಹಿನಿಯಲ್ಲಿ ಮಾತನಾಡುತ್ತಾ ಪೂಜಾರಿಯವರು, ದೇವರು ಅಂದರೆ ಅದು ನಮ್ಮ ನಮ್ಮ ನಂಬಿಕೆ, ಒಂದು ಕಲ್ಲಿನಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಅದನ್ನು ಪೂಜಿಸುತ್ತೇವೆ. ಇದು ನಾವು ಪಾಲಿಸಿಕೊಂಡು ಬರುತ್ತಿರುವ ಸಂಪ್ರದಾಯ ಮತ್ತು ನಂಬಿಕೆ. ವೇದ ಪುರಾಣದಲ್ಲಿ ಎಲ್ಲೂ ವಿಧವೆಯವರು ಪೂಜೆ ಮಾಡಬಾರದೆಂದು ಹೇಳಿಲ್ಲವಲ್ಲ. (ಚಿತ್ರ ಕೃಪೆ:ಪಿಟಿಐ)

ಭಕ್ತಪ್ರಹ್ಲಾದ

ಭಕ್ತಪ್ರಹ್ಲಾದ

ಹಿರಣ್ಯಕಶಿಪು ಆ ನಿನ್ನ ದೇವರು ಈ ಕಂಬದಲ್ಲಿ ಇದ್ದಾನೆಯೇ ಎಂದಾಗ ಭಕ್ತಪ್ರಹ್ಲಾದ ಇದ್ದಾನೆ ಅನ್ನುತ್ತಾನೆ. ಭಕ್ತ ಪ್ರಹ್ಲಾದನ ನಂಬಿಕೆಯಂತೆ ಭಗವಂತ ಪ್ರತ್ಯಕ್ಷನಾಗಿ ಹಿರಣ್ಯಕಶಿಪನನ್ನು ಸಂಹರಿಸುತ್ತಾನೆ. ಇದು ನಾವು ಓದಿದ ಪುರಾಣ ಮತ್ತು ನಾವು ನಂಬಿದ ಹಿಂದೂ ಸಂಪ್ರದಾಯ. (ಚಿತ್ರದಲ್ಲಿ: ಭಕ್ತ ಪಹ್ಲಾದ ಚಿತ್ರದಲ್ಲಿ ಡಾ. ರಾಜ್)

ಉಡುಪಿ ಕೃಷ್ಣ

ಉಡುಪಿ ಕೃಷ್ಣ

ಮೇಲ್ದರ್ಜೆಯವರು ಭಕ್ತ ಕನಕದಾಸನಿಗೆ ನಮ್ಮ ಉಡುಪಿಯ ಕೃಷ್ಣನ ದರ್ಶನ ಮಾಡಲು ಬಿಡುವುದಿಲ್ಲ. ಆವಾಗ ಕೃಷ್ಣನೇ ತನ್ನನ್ನು ಪ್ರತಿಷ್ಠಾಪಿಸಿದ ದಿಕ್ಕಿನಿಂದ ತಿರುಗಿ ತನ್ನ ಭಕ್ತನಾದ ಕನಕದಾಸನಿಗೆ ದರ್ಶನ ನೀಡುತ್ತಾನೆ. ಪೂಜಾ ಪದ್ದತಿಯನ್ನು ನಮ್ಮ ಅನುಕೂಲಕ್ಕಾಗಿ ನಾವು ಮಾಡಿಕೊಂಡಿದ್ದೇವೆ. ದೊಡ್ಡ ದೊಡ್ಡ ಭಟ್ರು (ಅರ್ಚಕರು, ವೇದಜ್ಞಾನಿಗಳನ್ನು ಕುರಿತು) ಇದನ್ನು ಮೊದಲು ಅರಿತು ಚರ್ಚೆಗೆ ಬರಲಿ.

ನಮ್ಮಲ್ಲಿ ಆ ಪದ್ದತಿ ಇಲ್ಲ

ನಮ್ಮಲ್ಲಿ ಆ ಪದ್ದತಿ ಇಲ್ಲ

ಖಾಸಾಗಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡುತ್ತಿದ್ದ ದೈವಜ್ಞ ಸೋಮಯಾಜಿಯವರು, ನಾವು ಮಹಿಳೆಯರಿಗೆ ಅಥವಾ ವಿಧವೆಯವರಿಗೆ ವಿರೋಧಿಗಳಲ್ಲ. ವಿಧವೆಯರು ಪೂಜೆ ಮಾಡಬಾರದೆಂದು ನಾವು ಹೇಳುತ್ತಿಲ್ಲ, ಆದರೆ ಅರ್ಚಕರಾಗಬಾರದು ಎನ್ನುತ್ತದೆ ನಮ್ಮ ಹಿಂದೂ ಸಂಪ್ರದಾಯ. ಕೇವಲ ಜನಪ್ರಿಯತೆಗಳಿಸಲು ನಮ್ಮ ಸಂಪ್ರದಾಯಕ್ಕೆ ವಿರೋಧವಾಗಿ ನಡೆದು ಕೊಳ್ಳಬಾರದು.

ಪೂಜಾ ಪದ್ದತಿ

ಪೂಜಾ ಪದ್ದತಿ

ಅರ್ಚಕರಾಗಲು ಕೆಲವೊಂದು ನೇಮ ನಿಯಮಗಳಿವೆ. ಅದಕ್ಕೆ ಪರಿಶ್ರಮ ಬೇಕಾಗುತ್ತದೆ, ವೇದ ಪಠಣ, ಮಂತ್ರಿ ಇತ್ಯಾದಿಗಳಲ್ಲಿ ಪಾಂಡಿತ್ಯ ಸಾಧಿಸ ಬೇಕಾಗುತ್ತದೆ. ಮಹಿಳೆಯರು ಪೂಜೆ ಮಾಡುವುದಕ್ಕೂ ಮತ್ತು ಅರ್ಚಕರಾಗುವುದಕ್ಕೂ ತುಂಬಾ ವ್ಯತ್ಯಾಸವಿದೆ. ಇದನ್ನು ದಯವಿಟ್ಟು ಜನಾರ್ಧನ ಪೂಜಾರಿಯವರು ಅರಿತು ಕೊಳ್ಳಬೇಕು - ಬೆಂಗಳೂರು ಗವಿಗಂಗಾದೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ದೀಕ್ಷಿತರು. (ಚಿತ್ರ ಕೃಪೆ : ತನುಜಾ ಆರ್ ವೈ)

ದಕ್ಷಿಣ ಕನ್ನಡ ರಣಕಣ
Po.no Candidate's Name Votes Party
1 Nalin Kumar Kateel 774285 BJP
2 Mithun M Rai 499664 INC

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
For the first time in the history, two widows performs pooja at Kudroli Gokarnatheshwara Temple in Mangalore, Karnataka. A debate 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more