ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲ ಬೇಗೆಯಿಂದ ಹೊರಬರಲು ಮಂಗಳೂರಿಗರ ಬಗೆ ಬಗೆ ತಂತ್ರ

ಹೇಳಿ ಕೇಳಿ ಮಂಗಳೂರು ಸಮುದ್ರಕ್ಕೆ ಅಂಟಿಕೊಂಡ ನಗರ. ಇದರಿಂದ ಸಮುದ್ರದಲ್ಲಿ ಬೀಸುವ ಬಿಸಿ ಗಾಳಿ, ಜತೆಗೆ ನಗರ ಪ್ರದೇಶವಾದ್ದರಿಂದ ಮಾಲಿನ್ಯದ ಬಿಸಿ ನಗರವಾಸಿಗಳನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ.

By ಐಸಾಕ್ ರಿಚರ್ಡ್
|
Google Oneindia Kannada News

ಮಂಗಳೂರು, ಏಪ್ರಿಲ್ 29: ಕರ್ನಾಟಕದ ಉಳಿದ ನಗರಗಳಿಗೆ ಹೋಲಿಸಿದರೆ ಮಂಗಳೂರಿಗೆ ಬೇಸಿಗೆಯ ಬಿಸಿ ತಟ್ಟುವುದು ತುಸು ಜಾಸ್ತಿ. ಈಗ ಇಡೀ ಮಂಗಳೂರು ನಗರ ಬೆಂಕಿಯುಂಡೆಯಂತೆ ಸುಡುತ್ತಿದೆ.

ಇದೀಗ ಇಲ್ಲಿನ ಜನರು ಈ ಬಿಸಿಲ ಬೇಗೆಯಿಂದ ಹೊರ ಬರಲು ನಗರದಿಂದ ಹೊರ ಹೋಗುತ್ತಿದ್ದಾರೆ. ಆ ಮೂಲಕ ಸೂರ್ಯನ ಕಿರಣಗಳ ಬಿಸಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.[ಡಿಜಿಟಲ್ ಇಂಡಿಯಾ: ಕರಾವಳಿಯ ಆಟೋ ರಿಕ್ಷಾಗಳಿಗೆ ಬಂತು ಟ್ಯಾಬ್‌!]

ಎಂಥಾ ಹೀಟ್ ಮಾರಾಯರೇ ..
ಹೇಳಿ ಕೇಳಿ ಮಂಗಳೂರು ಸಮುದ್ರಕ್ಕೆ ಅಂಟಿಕೊಂಡ ನಗರ. ಇದರಿಂದ ಸಮುದ್ರದಲ್ಲಿ ಬೀಸುವ ಬಿಸಿ ಗಾಳಿ, ಜತೆಗೆ ನಗರ ಪ್ರದೇಶವಾದ್ದರಿಂದ ಮಾಲಿನ್ಯದ ಬಿಸಿ ನಗರವಾಸಿಗಳನ್ನು ಬೆಂಬಿಡದ ಭೂತದಂತೆ ಕಾಡುತ್ತಿದೆ.

ಮಂಗಳೂರು ನಗರದ ಈಗಿನ ಸರಾಸರಿ ಉಷ್ಣಾಂಶವು 30 ರಿಂದ 35ಡಿಗ್ರಿವರಗೆ ತಲುಪುತ್ತಿದೆ. ಇದರಿಂದ ನಗರದ ಹೊರವಲಯದ ಜನರೂ ಸಹ ನಗರದ ಕಡೆ ಕಾಲಿಡಲು ಮನಸ್ಸು ಮಾಡುತ್ತಿಲ್ಲ.

ಐಸ್‍ಕ್ರೀಮ್ ಸವಿಯುವ ಜನ

ಐಸ್‍ಕ್ರೀಮ್ ಸವಿಯುವ ಜನ

ಪ್ರತೀ ವರ್ಷ ಬೇಸಿಗೆ ಬಂತೆಂದರೆ ನಗರದ ಐಸ್‍ಕ್ರೀಮ್ ಪಾರ್ಲರ್‍ಗಳಿಗೆ ಹಬ್ಬವೋ ಹಬ್ಬ. ಆದರೆ ಈ ವರ್ಷ ಈ ಹಬ್ಬ ಪಾರ್ಲರ್ ಮಾಲೀಕರಿಗೆ ಹೆಚ್ಚು ಖುಷಿ ತಂದಿದೆ. ನಗರದ ಪ್ರತಿಷ್ಠಿತ ಐಸ್‍ಕ್ರೀಮ್ ಪಾರ್ಲರ್‍ಗಳಾದ ಐಡಿಯಲ್ ಹಾಗೂ ಪಬ್ಬಾಸ್‍ನಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ.

ಅದರಲ್ಲೂ ವೀಕೆಂಡ್ ಬಂತೆಂದರೆ ಐಸ್‍ಕ್ರೀಮ್ ಪಾರ್ಲರ್‍ನಲ್ಲಿ ಗ್ರಾಹಕರು ನಿಂತುಕೊಂಡೇ ಐಸ್‍ಕ್ರೀಮ್‍ನ ಸವಿ ರುಚಿಯುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ.

ಭರ್ಜರಿ ಐಸ್ ಕ್ರೀಂ ವ್ಯಾಪಾರ

ಭರ್ಜರಿ ಐಸ್ ಕ್ರೀಂ ವ್ಯಾಪಾರ

"ಪ್ರತೀ ವರ್ಷ ಬೇಸಿಗೆಯಲ್ಲಿ ವ್ಯಾಪಾರ ಸ್ವಲ್ಪ ಜಾಸ್ತಿ ಇರುತ್ತದೆ. ಆದರೆ ಈ ವರ್ಷ ಇದರ ಪ್ರಮಾಣ ಜಾಸ್ತಿಯಾಗಿದೆ. ಪ್ರತೀ ವರ್ಷ ದಿನಕ್ಕೆ 2ರಿಂದ 5 ಸಾವಿರ ವ್ಯವಹಾರವಾಗುತಿತ್ತು ಅದು ಈ ವರ್ಷ ಜಾಸ್ತಿಯಾಗಿದೆ" ಎಂದು ಸಂತೋಷ ಹಂಚಿಕೊಳ್ಳುತ್ತಾರೆ ಐಸ್‍ಕ್ರೀಮ್ ವ್ಯಾಪಾರಿಯೊಬ್ಬರು.[ಕಡಲತಡಿಯಲ್ಲಿ ಶ್ರೀಕೃಷ್ಣ ಪ್ರಿಯ ನೇರಳೆ ಹಣ್ಣಿನ ದರ್ಬಾರ್]

 ಜ್ಯೂಸ್ ಅಂಗಡಿಗಳಲ್ಲೂ ಫುಲ್ ರಷ್

ಜ್ಯೂಸ್ ಅಂಗಡಿಗಳಲ್ಲೂ ಫುಲ್ ರಷ್

ಐಸ್‍ಕ್ರೀಮ್ ಪಾರ್ಲರ್‍ಗಳಿಗೆ ತಾವೇನೂ ಕಮ್ಮಿ ಇಲ್ಲ ಎನ್ನುತ್ತಿವೆ ಬೀದಿ ಬದಿಯ ಜ್ಯೂಸ್ ಅಂಗಡಿಗಳು. ನಗರದ ಪ್ರಮುಖ ಬೀದಿಗಳಾದ ಕಂಕನಾಡಿ, ಕದ್ರಿ, ಉರ್ವಾಸ್ಟೋರ್, ಸ್ಟೇಟ್‍ಬ್ಯಾಂಕ್‍ಗಳಲ್ಲಿ ಬೀಡು ಬಿಟ್ಟಿರುವ ಕಬ್ಬಿನ ಜ್ಯೂಸ್ ಹಾಗೂ ಇತರ ಜ್ಯೂಸ್ ಸೆಂಟರ್‍ಗಳಿಗೆ ಜನರು ಧಾವಿಸುತ್ತಿದ್ದಾರೆ.

ಬೇಸಿಗೆಯ ಧಗೆಯಿಂದ ಜ್ಯೂಸ್ ಸೆಂಟರ್‍ಗಳ ಸುತ್ತ ಜನರು ದಿನವಿಡೀ ಗಿಜಿಗಿಡುವಂತೆ ಮಾಡಿದೆ. ಮತ್ತೊಂದು ವಿಶೇಷ ಎಂದರೆ ಈ ಬಿಸಿಲ ಬೇಗೆಯನ್ನು ತಪ್ಪಿಸಿಕೊಳ್ಳಲು ನಗರದ ಪ್ರತಿಷ್ಠಿತ ಮಾಲ್‍ಗಳಿಗೆ ಜನ ಎ.ಸಿ ಸವಿಯಲು ತೆರಳುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.

 ಮಡಿಕೇರಿ, ಆಗುಂಬೆಯತ್ತ ಮುಖ ಮಾಡಿದ ಜನರು

ಮಡಿಕೇರಿ, ಆಗುಂಬೆಯತ್ತ ಮುಖ ಮಾಡಿದ ಜನರು

ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳಲು ಜನರು ಶೀತಮಯ ಪ್ರದೇಶಗಳಾದ ಮಡಿಕೇರಿ, ಆಗುಂಬೆಯತ್ತ ಮುಖ ಮಾಡುತ್ತಿದ್ದಾರೆ. ಇದರ ಜೊತೆಗೆ ಮಕ್ಕಳಿಗೆ ಬೇಸಿಗೆ ರಜಾ ಇರುವುದರಿಂದ ಕುಟುಂಬ ಸಮೇತ ರಾಜ್ಯ ಮತ್ತು ಅಂತಾರಾಜ್ಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.[ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಹಂತಕರ ಬಂಧನ]

ಇನ್ನು ಮಂಗಳೂರಿಗೆ ತಾಗಿಕೊಂಡಂತಿರುವ ಕೇರಳದ ವಯನಾಡು, ಮುನ್ನಾರ್, ಅದಾಚೆಗಿರುವ ಊಟಿ, ಕೊಡೈಕನಲ್‍ಗೆ ಸಾರಿಗೆ ವ್ಯವಸ್ಥೆ ಉತ್ತಮವಾಗಿರುವುದರಿಂದ ಪ್ರವಾಸಿ ತಾಣಗಳತ್ತ ಜನರು ಪ್ರಯಾಣ ಹೊರಟಿದ್ದಾರೆ.
"ಮಂಗಳೂರಿನಲ್ಲಿ ಬಿಸಿಲ ಧಗೆ ತುಂಬಾ ಹೆಚ್ಚಾದ್ದರಿಂದ ಇಲ್ಲಿ ನಿಲ್ಲಲು ಆಗುತ್ತಿಲ್ಲ. ಇದನ್ನು ತಪ್ಪಿಸಿಕೊಳ್ಳಲು ಜತೆಗೆ ಮಕ್ಕಳಿಗೆ ಶಾಲಾ ರಜೆ ಇರುವುದರಿಂದ ಕುಟುಂಬ ಸಮೇತ ತಂಪು ಪ್ರದೇಶದ ಪ್ರವಾಸಿ ತಾಣಗಳಿಗೆ ಹೋಗಲು ನಿರ್ಧರಿಸಿದ್ದೇವೆ" ಎನ್ನುತ್ತಾರೆ ಕುಟುಂಬ ಸಮೇತ ಪ್ರವಾಸ ಹೊರಟಿರುವ ಮಹಿಳೆಯೊಬ್ಬರು.

 ಪಿಲಿಕುಳ, ಅಡ್ಯಾರ್ ಫಾಲ್ಸ್ ಗೆ ಹೆಚ್ಚಿದ ಬೇಡಿಕೆ

ಪಿಲಿಕುಳ, ಅಡ್ಯಾರ್ ಫಾಲ್ಸ್ ಗೆ ಹೆಚ್ಚಿದ ಬೇಡಿಕೆ

ಇನ್ನು ದೂರದ ಊರುಗಳಿಗೆ ತೆರಳಲು ಸಾಧ್ಯವಾಗದ ಜನರು ನಗರದ ಹೊರವಲಯದಲ್ಲಿರುವ ಅಡ್ಯಾರ್ ಫಾಲ್ಸ್, ನಡುಮನೆ ಮತ್ತಿತರ ಕಡೆ ಕುಟುಂಬ, ಸ್ನೇಹಿತರ ಸಮೇತ ಪ್ರವಾಸಿ ತಾಣಗಳನ್ನು ಸವಿಯಲು ತೆರಳುತ್ತಿದ್ದಾರೆ.

ಜತೆಗೆ ಜಿಲ್ಲೆಯ ನಿಸರ್ಗಧಾಮವಾದ ಪಿಲಿಕುಳದತ್ತ ಜನರು ಮುಖ ಮಾಡುತ್ತಿದ್ದಾರೆ. ಹಾಗೂ ಅಲ್ಲಿನ ಉದ್ಯಾನವನದಲ್ಲಿ ಗಂಟೆಗಟ್ಟಲೆ ಕಳೆಯುವ ಮೂಲಕ ನಗರದ ಬಿಸಿಲ ಬೇಗೆಗೆ ಟಾಟಾ ಅನ್ನುತ್ತಿದ್ದಾರೆ.

 ಬಿಕೋ ಎನ್ನುತ್ತಿರುವ ಬೀಚ್‍ಗಳು

ಬಿಕೋ ಎನ್ನುತ್ತಿರುವ ಬೀಚ್‍ಗಳು

ಮಂಗಳೂರು ಬೀಚ್‍ಗಳಿಗೇ ಫೇಮಸ್. ಪಣಂಬೂರು, ಸುಲ್ತಾನ್ ಬತ್ತೇರಿ, ಸೋಮೇಶ್ವರ, ತಣ್ಣಿರುಬಾವಿ ಮುಂತಾದ ಬೀಚ್‍ಗಳಿಗೆ ರಾಜ್ಯ ಹಾಗೂ ಅಂತರಾಜ್ಯಗಳಿಂದ ಜನರು ಬರುತ್ತಿದ್ದರು. ಆದರೆ ಉರಿಬಿಸಿಲಿಗೆ ಹೆದರಿದ ಜನ ಬೀಚ್‍ಗಳತ್ತ ಬರುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ.

ಪ್ರೇಮಿಗಳ ನೆಚ್ಚಿನ ತಾಣ ಈ ಬೀಚ್‍ಗಳು. ಆದರೆ ಈಗ ಅವರುಗಳೂ ಬೇರೆಡೆಯತ್ತ ಮುಖ ಮಾಡಿದರಿಂದ ಬೀಚ್‍ಗಳು ತಮ್ಮಷ್ಟಕ್ಕೆ ತಾವೇ ಸುಮ್ಮನೇ ಭೋರ್ಗರೆಯುತ್ತಿವೆ.

English summary
Mangaluru the coastal belt of Karnataka has now suppressed people with extreme heat. Ice cream parlous, Juice junctions are damn packed. To avoid this extreme heat people are now moving to different cool destinations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X