ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

65ಕಿಮೀ ರಸ್ತೆ : ಪಶ್ಚಿಮ ಘಟ್ಟದ 30,000 ಮರಗಳಿಗೆ ಕುತ್ತು?

By ಐಸ್ಯಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು ಡಿಸೆಂಬರ್ 10: ಚಿಕ್ಕಮಗಳೂರಿನ ಬೈರಾಪುರ ಹಾಗೂ ದ.ಕ ಜಿಲ್ಲೆಯ ಶಿಶಿಲವನ್ನು ಸಂಪರ್ಕಿಸುವ 65ಕಿಮೀ ರಸ್ತೆಯನ್ನು ನಿರ್ಮಿಸಲು ಸರಕಾರ ನಿರ್ಧರಿಸಿದೆ. ಈ ರಸ್ತೆ ನಿರ್ಮಾಣ ಶೀಘ್ರದಲ್ಲೇ ಶುರುವಾಗಲಿದ್ದು ಇದರ ಪರಿಣಾಮವಾಗಿ ಪಶ್ಚಿಮ ಘಟ್ಟದ ಸುಮಾರು 30000 ಮರಗಳನ್ನು ಕಡಿಯಬೇಕಾಗಿದೆ. ಸ್ಥಳೀಯರು 2010ರಲ್ಲಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸರಕಾರವೇ ಖುದ್ದಾಗಿ ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ.

ಸ್ಥಳೀಯರ ಪ್ರಕಾರ, ಈ ಪ್ರದೇಶವನ್ನು ಹೆಚ್ಚಾಗಿ ಹಲವಾರು ವರ್ಷಗಳಿಂದ ಸಾರಿಗೆಗಾಗಿ ಉಪಯೋಗಿಸುತ್ತಿದ್ದರು. ಆದರೆ 2010ರಲ್ಲಿ ಸರಕಾರವು ಈ ಯೋಜನೆಗೆ ಚಾಲನೆ ನೀಡಿ ಸುಮಾರು 4ಕಿಮೀ ವ್ಯಾಪ್ತಿಯಲ್ಲಿ ಮರಗಳನ್ನು ಕಡಿದಿತ್ತು. ಇದನ್ನು ತಿಳಿದು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಸರಕಾರ ಈ ಯೋಜನೆಯನ್ನು ಕೈಬಿಟ್ಟಿತ್ತು.[ಕೊಡಗಿನ ಕಂಪು ಸೂಸುವ ಶ್ರೀಗಂಧದ ಸಾವಿನ ಕಥೆ!]

Western Ghats to lose 30,000 trees

ಆದರೆ ಆರು ವರ್ಷಗಳ ನಂತರ ಸರ್ಕಾರ ಪುನಃ ಈ ಯೋಜನೆಗೆ ಚಾಲನೆ ನೀಡಿರುವುದು ನಿಜಕ್ಕೂ ದುರದೃಷ್ಟಕರ ಎಂಬುದು ಸ್ಥಳೀಯರ ಅಭಿಪ್ರಾಯ. ಸರ್ಕಾರದ ಪ್ರಕಾರ ಈ ರಸ್ತೆ ನಿರ್ಮಾಣ ಮಾಡುವುದರಿಂದ ಎರಡು ಪ್ರದೇಶಗಳ ಅಂತರವನ್ನು ಕಡಿಮೆ ಮಾಡಿ ಸಂಪರ್ಕ ಸುಗಮವಾಗಲಿದೆ . ಮಾತ್ರವಲ್ಲದೆ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯದಿಂದ 15ಕಿಮೀ ಮತ್ತು ಮೂಡಿಗೆರೆ ಮತ್ತು ಉಜಿರೆಯಿಂದ 29ಕಿಮಿ ಪ್ರಯಾಣದ ಅಂತರವನ್ನು ಕಡಿಮೆ ಮಾಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸರಕಾರ ಮುಂದಾಗಿದೆ.

ಸರ್ಕಾರ ಈ ರಸ್ತೆ ನಿರ್ಮಾಣ ಮಾಡುವುದರಿಂದ ಶಿರಾಡಿ ಮತ್ತು ಚಾರ್ಮಾಡಿ ಘಾಟ್ ಹೆದ್ದಾರಿಗೆ ಪರ್ಯಾಯ ಮಾರ್ಗವನ್ನು ನಿರ್ಮಾಣ ಮಾಡಿದಂತಾಗುತ್ತದೆ ಎಂದು ಮೂಲಗಳು ತಿಳಿಸಿವೆ.[ಹಾಸನ- ಮಾರನಹಳ್ಳಿ ರಸ್ತೆ ವಿಸ್ತರಣೆಗೆ 3 ಸಾವಿರ ಮರಕ್ಕೆ ಕೊಡಲಿ]

Western Ghats to lose 30,000 trees

ಈ ಕುರಿತು ಮಾಹಿತಿ ನೀಡಿದ ಲೋಕೋಪಯೋಗಿ ಸಚಿವ ಹೆಚ್. ಸಿ. ಮಹಾದೇವಪ್ಪ, ಪ್ರಸ್ತುತವಾಗಿ ಈ ಯೋಜನೆಯ ವೆಚ್ಚ ಸುಮಾರು ರು 56ಕೋಟಿ ಎಂದು ಅಂದಾಜಿಸಲಾಗಿದೆ. ಈ ರಸ್ತೆ ಯೋಜನೆಯನ್ನು ಕಾರ್ಯಗತಗೊಳಿಸಲು ಈಗಾಗಲೇ ಸಮೀಕ್ಷೆ ನಡೆಯುತ್ತಿದೆ ಎಂದರು.[ಗೋವಾಕ್ಕೆ ಹೆದ್ದಾರಿ, 37 ಸಾವಿರ ಮರ ಕಾಪಾಡೋರು ಯಾರ್ರಿ?]

ಈಗಾಗಲೇ ಸರ್ಕಾರವು ಯೋಜನೆಯ ಜವಾಬ್ದಾರಿಯನ್ನು ಹಾಗೂ ಯೋಜನೆಯ ಕುರಿತು ಸಂಕ್ಷಿಪ್ತ ವರದಿ ನೀಡುವಂತೆ ಬೆಂಗಳೂರು ಮೂಲದ ಪ್ರೀತಿ ಸಿಎಡಿ ಕನ್ಸಲ್ಟಿಂಗ್ ಎಂಜಿನಿಯರ್ಸ್ ತಿಳಿಸಿದ್ದು, ಪ್ರಸ್ತುತವಾಗಿ ಈ ಸಂಸ್ಥೆಯು ಯೋಜನೆಯ ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ ಯೋಜನೆ ಪ್ರಗತಿಯಲ್ಲಿದೆ ಎಂದು ಈ ಎಂಜಿನಿಯರ್ಸ್ ತಿಳಿಸಿದ್ದಾರೆ.[800 ಮರ ಕತ್ತರಿಸಿದರೆ 81 ಸಾವಿರ ಗಿಡ ನೆಡುತ್ತೇವೆ : ಜಾರ್ಜ್]

Western Ghats to lose 30,000 trees

ಆದರೆ ಪರಿಸರ ತಜ್ಞರು ಈ ಯೋಜನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಹೌದು ಈ ಯೋಜನೆಯನ್ನು ಕೈಗೊಳ್ಳುವುದರಿಂದ ಆಗುವ ಅನನುಕೂಲದ ಬಗ್ಗೆ ತಿಳಿಸಿದ ಪರಿಸರ ತಜ್ಞರು, ಈ ಯೋಜನೆಯ ಪ್ರಕಾರ ನಿರ್ಮಾಣ ಮಾಡಲಿರುವ ರಸ್ತೆ ಸುಮಾರು 24 ಕಿಮೀ ನಷ್ಟು ಪಶ್ಚಿಮಘಟ್ಟ ಮತ್ತು ದಟ್ಟ ಕಾಡುಗಳನ್ನು ಹಾದುಹೋಗುತ್ತದೆ. ಈ ಕಾರಣದಿಂದ ಸುಮಾರು 50000 ಸಾವಿರ ಮರಗಳನ್ನು ಕಡಿಯಬೇಕಾಗುವ ಪರಿಸ್ಥಿತಿ ಎದುರಾಗಬಹುದು ಎಂದು ತಿಳಿಸಿದ್ದಾರೆ.

English summary
The government has decided to lay a 65 km road connecting Byrapura in Chikkamagaluru and Shishila in Dakshina Kannada district. However, this road will soon be laid axing over 30,000 trees in the pristine Western Ghats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X