ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಕುಡಿಯುವ ನೀರಿನ ರೇಷನಿಂಗ್‌ ಜಾರಿ

|
Google Oneindia Kannada News

ಮಂಗಳೂರು, ಮೇ 06: ಕರಾವಳಿ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ರೇಷನಿಂಗ್‌ ಆರಂಭವಾಗಿದ್ದು, 2 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ತಿಂಗಳ ಅಂತ್ಯದವರೆಗೂ ಈ ರೇಷನಿಂಗ್ ವ್ಯವಸ್ಥೆ ಮುಂದುವರೆಯಲಿದೆ.

ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಕಾರಣ ನಗರದಲ್ಲಿ ನೀರಿನ ರೇಷನಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.

ತುಂಬೆ ಅಣೆಕಟ್ಟಿನಲ್ಲಿ ಉಳಿದಿರುವುದು ಕೇವಲ 4.90 ಮೀಟರ್ ನೀರು!ತುಂಬೆ ಅಣೆಕಟ್ಟಿನಲ್ಲಿ ಉಳಿದಿರುವುದು ಕೇವಲ 4.90 ಮೀಟರ್ ನೀರು!

ಈ ನಡುವೆ ನಗರದ ಕೆಲವು ಭಾಗಗಳಿಗೆ ನೀರು ಪೂರೈಕೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದ್ದು, ಜನರು ಮತ್ತೆ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಸ್ಥಗಿತ ಗೊಂಡಿದ್ದು, ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಈ ಮೊದಲು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ನೀರು ರೇಷನಿಂಗ್‌ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಲಾಗಿದೆ.

Water rationing continued in Mangaluru

ಈ ನಿಟ್ಟಿನಲ್ಲಿ ವೇಳಾಪಟ್ಟಿ ತಯಾರಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ನಗರದಲ್ಲಿ ನೀರಿನ ಪೂರೈಕೆ ಮಾಡಲಾಗುತ್ತಿದ್ದು, ಮೇ 7ರಂದು ಬೆಳಗ್ಗೆ 6ರಿಂದ ಮೇ 9ರಂದು ಬೆಳಗ್ಗೆ 6ರ ತನಕ 48 ಗಂಟೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.

ಮೇ 9ರಂದು ಬೆಳಗ್ಗೆ 6ರಿಂದ ಮೇ 13ರಂದು ಬೆಳಗ್ಗೆ 6ರ ತನಕ 96 ಗಂಟೆ ಕಾಲ ನೀರು ಪೂರೈಕೆ ನಡೆಯಲಿದೆ. ಮೇ 13ರಂದು ಬೆಳಗ್ಗೆ 6ರಿಂದ ಮೇ 15ರಂದು ಬೆಳಗ್ಗೆ 6ರ ತನಕ 48 ಗಂಟೆ ಕಾಲ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

 ಬರಿದಾದ ತುಂಬೆ ಡ್ಯಾಮ್ ಒಡಲು:ಕ್ರಮ ಕೈಗೊಳ್ಳಲು ಡಿಸಿಗೆ ಆಗ್ರಹ ಬರಿದಾದ ತುಂಬೆ ಡ್ಯಾಮ್ ಒಡಲು:ಕ್ರಮ ಕೈಗೊಳ್ಳಲು ಡಿಸಿಗೆ ಆಗ್ರಹ

ಮೇ 15ರಂದು ಬೆಳಗ್ಗೆ 6ರಿಂದ ಮೇ 19ರಂದು ಬೆಳಗ್ಗೆ 6ರಿಂದ 96 ಗಂಟೆ ನೀರು ಪೂರೈಕೆಯಾಗಲಿದೆ. ಮೇ 19ರಂದು ಬೆಳಗ್ಗೆ 6ರಿಂದ ಮೇ 21ರಂದು ಬೆಳಗ್ಗೆ 6ರವರೆಗೆ ನೀರು ಪೂರೈಕೆ ಮತ್ತೆ ಸ್ಥಗಿತಗೊಳ್ಳಲಿದೆ. ತುಂಬೆ ವೆಂಟೆಡ್‌ ಡ್ಯಾಂನ ನೀರಿನ ಮಟ್ಟ 4.54 ಮೀಟರ್‌ ಇದೆ.

ಈ ನಡುವೆ ನಗರದ ಕೆಲವು ಎತ್ತರ ಪ್ರದೇಶಗಳಿಗೆ ನೀರು ಪೂರೈಕೆ ಯಾಗದೆ ಸಮಸ್ಯೆ ಎದುರಾಗಿದೆ. ನೀರು ರೇಷನಿಂಗ್‌ ಆರಂಭವಾಗುವ ಮುನ್ನವೇ ನೀರಿನ ಸಮಸ್ಯೆ ಎದುರಿಸುತ್ತಿದ್ದ ಕೆಲವು ಭಾಗಗಳ ಜನರು ಇದೀಗ ಮತ್ತೆ ಕಷ್ಟ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

English summary
Water rationing and water supply woes are continued in Mangaluru and Dakshina kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X