• search
 • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಸ್ಟಾಡಾಮ್ ಕೋಚ್‌ ರೈಲು ಸಂಚಾರ; 73 ಸೀಟುಗಳು ಬುಕ್

|
Google Oneindia Kannada News

ಬೆಂಗಳೂರು, ಜುಲೈ 09; ನೈಋತ್ಯ ರೈಲ್ವೆ ಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್ ರೈಲು ಸಂಚಾರ ಆರಂಭಿಸಲು ಸಿದ್ಧತೆ ನಡೆಸಿದೆ. ಯಶವಂತಪುರ-ಮಂಗಳೂರು ರೈಲಿನಲ್ಲಿ ವಿಸ್ಟಾಡಾಮ್‌ ಕೋಚ್‌ನಲ್ಲಿ ಸಂಚಾರ ನಡೆಸಲು 73 ಜನರು ಟಿಕೆಟ್ ಬುಕ್ ಮಾಡಿದ್ದಾರೆ.

ರಾಜಧಾನಿ ಬೆಂಗಳೂರು ಮತ್ತು ಕರಾವಳಿಯನ್ನು ಸಂಪರ್ಕಿಸುವ 3 ರೈಲುಗಳಿಗೆ ದ್ವಿತೀಯ ದರ್ಜೆಯ ಒಂದು ಸಾಮಾನ್ಯ ಬೋಗಿ ತೆಗೆದು ತಲಾ 2 ವಿಸ್ಟಾಡಾಮ್ ಕೋಚ್ ಬೋಗಿ ಅಳವಡಿಕೆ ಮಾಡಲಾಗುತ್ತದೆ.

ಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್ ರೈಲು; ದರ ಪಟ್ಟಿಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್ ರೈಲು; ದರ ಪಟ್ಟಿ

ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಹಗಲು ರೈಲಿಗೆ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗಿದೆ. ಮಂಗಳೂರು ಜಂಕ್ಷನ್-ಯಶವಂತಪುರ ವಿಶೇಷ ರೈಲಿಗೂ ಕೋಚ್ ಅಳವಡಿಕೆ ಮಾಡಲಾಗಿದೆ.

ವಿಸ್ಟಾಡಾಮ್ ಕೋಚ್ ರೈಲಿನಲ್ಲಿ ಸಾಗುತ್ತಾ ಪಶ್ಚಿಮ ಘಟ್ಟದ ಸೌಂದರ್ಯ ಸವಿಯಿರಿವಿಸ್ಟಾಡಾಮ್ ಕೋಚ್ ರೈಲಿನಲ್ಲಿ ಸಾಗುತ್ತಾ ಪಶ್ಚಿಮ ಘಟ್ಟದ ಸೌಂದರ್ಯ ಸವಿಯಿರಿ

ಒಂದು ವಿಸ್ಟಾಡಾಮ್ ಕೋಚ್ ರೈಲು ಬೋಗಿಯಲ್ಲಿ 44 ಪ್ರಯಾಣಿಕರು ಪ್ರಯಾಣಿಸಬಹುದು. ಬುಧವಾರ ಟಿಕೆಟ್ ಬುಕ್ಕಿಂಗ್ ಆರಂಭವಾದ ಗುರುವಾರ ಸಂಜೆಯ ತನಕ 73 ಸೀಟುಗಳು ಬುಕ್ ಆಗಿವೆ.

ವಿಸ್ಟಾಡಾಮ್ ಕೋಚ್ ಇರುವ ಕರ್ನಾಟಕದ ರೈಲುಗಳ ಪಟ್ಟಿವಿಸ್ಟಾಡಾಮ್ ಕೋಚ್ ಇರುವ ಕರ್ನಾಟಕದ ರೈಲುಗಳ ಪಟ್ಟಿ

ವಾರಕ್ಕೆ ಮೂರು ಬಾರಿ ಸಂಚಾರ ನಡೆಸುವ ಯಶವಂತಪುರ-ಕಾರವಾರ (06211/ 06212) ರೈಲಿಗೆ ಸಹ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಲಾಗುತ್ತದೆ. ಈ ರೈಲಿನಲ್ಲಿ ಸಂಚಾರ ನಡೆಸಲು 31 ಸೀಟುಗಳು ಬುಕ್ ಆಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಯಶವಂತಪು-ಮಂಗಳೂರು ರೈಲಿನ ವಿಸ್ಟಾಡಾಮ್ ಕೋಚ್‌ನಲ್ಲಿ ಸಂಚಾರ ನಡೆಸಲು ಯಶವಂತಪುರ-ಮಂಗಳೂರು ಜಂಕ್ಷನ್ - 1395 ರೂ., ಹಾಸನ-ಮಂಗಳೂರು ಜಂಕ್ಷನ್ - 960 ರೂ., ಹಾಸನ-ಸುಬ್ರಮಣ್ಯ ರಸ್ತೆ - 725 ರೂ., ಸಕಲೇಶಪುರ - ಸುಬ್ರಮಣ್ಯ ರಸ್ತೆ - 625 ರೂ., ಯಶವಂತಪುರ - ಸುಬ್ರಮಣ್ಯ ರಸ್ತೆ - 1175 ರೂ. ದರವನ್ನು ನಿಗದಿ ಮಾಡಲಾಗಿದೆ.

ವಿಸ್ಟಾಡಾಮ್ ಕೋಚ್‌ನ ಸೀಟುಗಳು 180 ಡಿಗ್ರಿ ತಿರುಗಲಿದ್ದು, ರೈಲಿನಲ್ಲಿ ಕುಳಿತು ಜನರು ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ. ಬೆಂಗಳೂರು-ಮಂಗಳೂರು ರೈಲು ಸಾಗುವ ಮಾರ್ಗದಲ್ಲಿ ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ನಡುವೆ ಪಶ್ಚಿಮ ಘಟ್ಟದ ಹಸಿರು ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

   Sumalatha Vs HD Kumarswamy | ಅಂಬರೀಶ್ ಸ್ಮಾರಕಕ್ಕೆ ಅನುದಾನ ಕೊಟ್ಟಿದ್ದು ಯಾರು? | Oneindia Kannada

   ದಟ್ಟವಾದ ಅರಣ್ಯ, ಅಲ್ಲಲ್ಲಿ ಕಾಣುವ ಜಲಪಾತ, ರೈಲು ಸುರಂಗ ಮಾರ್ಗ, ಶಿರಾಡಿ ಘಾಟ್‌ನ ಸೌಂದರ್ಯವನ್ನು ಜನರು ಸವಿಯಬಹುದಾಗಿದೆ. ಇನ್ನು ರೈಲು ಸಾಗುವಾಗ ಮಳೆ ಸುರಿಯುತ್ತಿದ್ದರೆ ಪಶ್ಚಿಮ ಘಟ್ಟದ ಸೌಂದರ್ಯ ಇಮ್ಮಡಿಯಾಗಿರುತ್ತದೆ.

   English summary
   73 seats booked by passengers in Yeshwantpur-Mangaluru Junction-Yeshwantpur day train which attached Vistadome coaches. This is the maiden Vistadome coach service in karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X