ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಪುತ್ತೂರಿನಲ್ಲಿ ಮಾಸ್ಕ್ ಧರಿಸಿ ಪೇಟೆಗೆ ಬಂದ ನಾಯಿ!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 29; ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಂತಾ ಸರ್ಕಾರ ಕಠಿಣ ನಿಯಮಗಳನ್ನು ಮಾಡಿದೆ. ಜನ ಮಾತ್ರ ಕೊರೊನಾ ಬಂದು ವರ್ಷ ಕಳೆದರೂ ಇನ್ನೂ ಮಾಸ್ಕ್ ಧರಿಸುತ್ತಿಲ್ಲ. ಮಾಸ್ಕ್ ಬಳಕೆಯ ಗಂಭೀರತೆಯೂ ಜನರಿಗೆ ಅರ್ಥವಾಗಿಲ್ಲ. ಹೀಗಾಗಿ ಪ್ರತಿದಿನ ಮಾಸ್ಕ್ ಧರಿಸದೇ ದಂಡವನ್ನು ಕಟ್ಟುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶ್ವಾನದ ಮಾಲಿಕರೊಬ್ಬರು ತನ್ನ ಪ್ರೀತಿಯ ಶ್ವಾನಕ್ಕೆ ಮಾಸ್ಕ್ ಹಾಕಿಸಿ ಕರೆದುಕೊಂಡು ಬಂದಿದ್ದರು. ಗುರುವಾರ ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಪಟ್ಟಣದಲ್ಲಿ ನಾಯಿ ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು.

ಮಂಗಳೂರು; ಗಿಡವಾಗುವ ಪರಿಸರ ಸ್ನೇಹಿ ಮಾಸ್ಕ್ ತಯಾರಿ ಮಂಗಳೂರು; ಗಿಡವಾಗುವ ಪರಿಸರ ಸ್ನೇಹಿ ಮಾಸ್ಕ್ ತಯಾರಿ

ಪುತ್ತೂರು ಪೇಟೆಯ ದರ್ಬೆ ನಿವಾಸಿ, ಪ್ರವೀಣ್ ಡ್ರೈವಿಂಗ್ ಸ್ಕೂಲ್‌ನ ಮಾಲೀಕ ಪ್ರವೀಣ್ ಡಿಸೋಜಾ ತಮ್ಮ ನಾಯಿಗೆ ಮಾಸ್ಕ್ ಹಾಕಿಸಿ ಕರೆದುಕೊಂಡು ಬಂದಿದ್ದರು. ಜನತಾ ಕರ್ಫ್ಯೂ ವೇಳೆ ಬೆಳಗ್ಗಿನ 10 ಗಂಟೆಯವರೆಗಿನ ಸಮಯಾಕಾಶದಲ್ಲಿ ತನ್ನ ಪ್ರೀತಿಯ ನಾಯಿಯನ್ನು ಪ್ರವೀಣ್ ತನ್ನ ದ್ವಿಚಕ್ರದಲ್ಲಿ ಕೂರಿಸಿಕೊಂಡು ಬಂದಿದ್ದು, ಎಲ್ಲರ ಕುತೂಹಲ ಕೇಂದ್ರವಾಗಿದ್ದಾರೆ. ನಾಯಿಗೂ ಕೊರೊನಾ ತಗುಲಬಾರದು ಎನ್ನುವ ದೃಷ್ಠಿಯಿಂದ ಮಾಸ್ಕ್ ಹಾಕಿಸಿ ಪ್ರವೀಣ್ ಪೇಟೆಗೆ ಕರೆದುಕೊಂಡು ಬಂದಿದ್ದಾರೆ.

ಮಾಸ್ಕ್ ಹಾಕೋದು ಬೇಡ ಅಂದ ಸರ್ಕಾರ! ಯಾವ ದೇಶದಲ್ಲಿ ಗೊತ್ತಾ? ಮಾಸ್ಕ್ ಹಾಕೋದು ಬೇಡ ಅಂದ ಸರ್ಕಾರ! ಯಾವ ದೇಶದಲ್ಲಿ ಗೊತ್ತಾ?

 Viral Video A Dog Wearing A Mask Found In Mangaluru

ಎರಡು ವರ್ಷದ ಹಗ್ ತಳಿಯ ನಾಯಿಯೂ ಯಾವುದೇ ಅಡ್ಡಿಯಿಲ್ಲದೆ, ಕಿರಿ-ಕಿರಿ ಯಿಲ್ಲದೆ ಮಾಸ್ಕ್ ಹಾಕಿಕೊಂಡಿದೆ. ಮಾಸ್ಕ್ ಹಾಕಿದರೆ ಕಿರಿ-ಕಿರಿಯಾಗುತ್ತದೆ, ಉಸಿರಾಟಕ್ಕೆ ತೊಂದೆಯಾಗುತ್ತದೆ ಅನ್ನುವ ಜನರಿಗೆ ನಾಯಿ ಮಾದರಿಯಾಗಿದೆ.

ಪ್ರವೀಣ್ ಕೊರೊನಾ ಆರಂಭ ಕಾಲದಿಂದಲೂ ತಾನೂ ಮಾಸ್ಕ್ ಧರಿಸಿ ನಾಯಿಗೂ ಮಾಸ್ಕ್ ಹಾಕಿ ಪೇಟೆಗೆ ಕರೆದುಕೊಂಡು ಬರೋದನ್ನು ರೂಢಿ ಮಾಡಿಕೊಂಡಿದ್ದಾರೆ. ಹೀಗಾಗಿ ನಾಯಿ ಬಹಳ ಪ್ರೀತಿಯಿಂದ ಮಾಸ್ಕ್ ಧರಿಸಲು ಒಪ್ಪುತ್ತದೆ.

ಮನೆಗಳಲ್ಲೂ ಮಾಸ್ಕ್ ಕಡ್ಡಾಯ; ಅತಿಥಿಗಳ ರೂಪದಲ್ಲಿ ಬರುತ್ತಾ ಕೊರೊನಾ!? ಮನೆಗಳಲ್ಲೂ ಮಾಸ್ಕ್ ಕಡ್ಡಾಯ; ಅತಿಥಿಗಳ ರೂಪದಲ್ಲಿ ಬರುತ್ತಾ ಕೊರೊನಾ!?

"ಕೊರೊನಾ ಮನುಷ್ಯರಿಗೆ ಬಾಧಿಸುವ ಜೊತೆಗೆ ಪ್ರಾಣಿಗಳಿಗೆ ಅಪಾಯವಾಗದಿರಲಿ ಅಂತಾ ಮಾಸ್ಕ್ ಧರಿಸುತ್ತಿದ್ದೇನೆ" ಅಂತಾ ಪ್ರವೀಣ್ ಡಿಸೋಜಾ ಹೇಳಿದ್ದಾರೆ.

English summary
Due to COVID wearing a mask mandatory. A dog in Mangaluru caught the attention after wearing a mask. Video of the dog went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X