ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿನಾಯಕ್ ಬಾಳಿಗ ಕೊಲೆ ಆರೋಪಿ ನರೇಶ್ ಶೆಣೈ ಶರಣು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 24 : ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಕೊಲೆ ಪ್ರಕರಣದ ಆರೋಪಿ ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ಶರಣಾಗಿದ್ದಾರೆ. 2016ರ ಮಾರ್ಚ್ 21ರಂದು ವಿನಾಯಕ್ ಬಾಳಿಗ ಹತ್ಯೆ ನಡೆದಿತ್ತು.

ಮಂಗಳೂರಿನ ಸಿಸಿಬಿ ಪೊಲೀಸರ ಮುಂದೆ ಶುಕ್ರವಾರ ನರೇಶ್ ಶೆಣೈ ಶರಣಾಗಿದ್ದಾರೆ. ಸಿಸಿಬಿ ಕಚೇರಿಯಲ್ಲಿ ಅವರ ವಿಚಾರಣೆ ನಡೆಯುತ್ತಿದೆ. ವಿನಾಯಕ್ ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸರು ಮಂಗಳೂರಿನ 3ನೇ ಜೆಎಂಎಫ್‌ಸಿ ಕೋರ್ಟ್‌ಗೆ ಗುರುವಾರ ಚಾರ್ಜ್‌ ಶೀಟ್ ಸಲ್ಲಿಕೆ ಮಾಡಿದ್ದರು. [RTI ಬಾಳಿಗಾ ಕೊಲೆ ಪ್ರಕರಣ: ಜಿ ಎಸ್ ಬಿ ಸಮಾಜದ ಸ್ಪಷ್ಟನೆ]

naresh shenoy

ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ನರೇಶ್ ಶೆಣೈ ಅವರು ಪ್ರಮುಖ ಆರೋಪಿಯಾಗಿದ್ದು, ಅವರಿಗಾಗಿ ಕಳೆದ ಮೂರು ತಿಂಗಳಿನಿಂದ ಹುಡುಕಾಟ ನಡೆಯುತ್ತಿತ್ತು. [ನರೇಶ್ ಶೆಣೈ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ]

ಜಾಮೀನಿಗೆ ಪ್ರಯತ್ನ ನಡೆಸಿದ್ದರು : ನರೇಶ್ ಶೆಣೈ ಅವರು ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದರು. ಆದರೆ, ಅವರು ಕೋರ್ಟ್‌ಗೆ ಬರುವ ಸುಳಿವು ಸಿಕ್ಕ ಪೊಲೀಸರು ಬಂಧಿಸಲು ಅಗತ್ಯ ತಯಾರಿ ಮಾಡಿಕೊಂಡಿದ್ದರು. ಆದ್ದರಿಂದ, ಅವರು ಪೊಲೀಸರ ಮುಂದೆ ಶರಣಾಗಿದ್ದಾರೆ.

ಪ್ರತಿಭಟನೆ ನಡೆದಿತ್ತು : ನರೇಶ್ ಶೆಣೈ ಬಂಧಿಸಬೇಕು ಎಂದು ಒತ್ತಾಯಿಸಿ ದೇಶಪ್ರೇಮಿಗಳ ಸಂಘಟನೆ ಜೂನ್ 7ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಹತ್ಯೆ ನಡೆದು ಎರಡೂವರೆ ತಿಂಗಳಾದರೂ ಪೊಲೀಸರು ಆರೋಪಿ ನರೇಶ್ ಶೆಣೈಯನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.

English summary
RTI activist Vinayak Baliga murder case main accused Naresh Shenoy surrender to Mangaluru police on Friday, june 24, 2016. Naresh Shenoy convener of Yuva Brigade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X