ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚ ಪಡೆಯುತ್ತಿದ್ದಾಗ ಗ್ರಾಮ ಕರಣಿಕ ಎಸಿಬಿ ಬಲೆಗೆ

|
Google Oneindia Kannada News

ಮಂಗಳೂರು ಮೇ 04: ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಕರಣಿಕ ಮತ್ತು ಆತನ ಸಹಾಯಕ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕು ಕಚೇರಿಯಲ್ಲೇ ಲಂಚ ಪಡೆಯುತ್ತಿದ್ದ ಕಡಿರುದ್ಯಾವರ- ಮಿತ್ತಬಾಗಿಲು ಗ್ರಾಮ ಕರಣಿಕ ಮತ್ತು ಸಹಾಯಕ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು: ಭಾರಿ ಹಗರಣ ಗುಮಾನಿ ಐದು ಕಡೆ ಎಸಿಬಿ ದಾಳಿ ಬೆಂಗಳೂರು: ಭಾರಿ ಹಗರಣ ಗುಮಾನಿ ಐದು ಕಡೆ ಎಸಿಬಿ ದಾಳಿ

ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಗ್ರಾಮ ಕರಣಿಕ ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಆರ್.ಟಿ.ಸಿ ಯೊಂದರ ಹೆಸರು ಬದಲಾವಣೆಗಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇವರಿಬ್ಬರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

Village accountant held for taking bribe in Mangaluru

ಮಿತ್ತಬಾಗಿಲು ನಿವಾಸಿ ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಗೌಡ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಆರ್.ಟಿ.ಸಿ. ಹೆಸರು ಬದಲಾವಣೆಗೆ ವಿ ಎ ಮಂಜುನಾಥ್ ಮತ್ತು ಸಹಾಯಕ ರಮೇಶ್ ನಾಯ್ಕ್ 5 ಸಾವಿರ ರಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.

ರಾಜ್ಯದ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ರಾಜ್ಯದ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಅದರಂತೆ ಈ ಹಿಂದ ಪ್ರದೀಪ್‌ ಅವರಿಂದ ರಮೇಶ್ ನಾಯ್ಕ್ ಎರಡು ಸಾವಿರ ರೂಪಾಯಿ ಪಡೆದಿದ್ದ ಎಂದು ಹೇಳಲಾಗಿದೆ. ಇಂದು ಎಸಿಬಿ ಅಧಿಕಾರಿಗಳ ಸೂಚನೆಯಂತೆ ಇಂದು ಬೆಳಗ್ಗೆ ಮತ್ತೆ3000 ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಈ ಇಬ್ಬರನ್ನು ಬಂಧಿಸಿದ್ದಾರೆ.

English summary
ACB police officials arrested Kadirudyawara and Mithabagilu village accountant while he was accepting a bribe for changing name in RTC
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X