ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರೋದ್ ಮಾಂತ್ರಿಕ ಉಸ್ತಾದ್ ಅಮ್ಜದ್ ಅಲಿಖಾನ್‌ಗೆ ವಿರಾಸತ್ ಪ್ರಶಸ್ತಿ

By Mahesh
|
Google Oneindia Kannada News

ಮಂಗಳೂರು, ಜ.6: 'ಆಳ್ವಾಸ್ ವಿರಾಸತ್- 2015' ಪ್ರಶಸ್ತಿಗೆ ಆಯ್ಕೆಯಾಗಿರುವ ಸರೋದ್ ಮಾಂತ್ರಿಕ ಪದ್ಮಭೂಷಣ ಉಸ್ತಾದ್ ಅಮ್ಜದ್ ಅಲಿಖಾನ್‌ ಅವರನ್ನು ಆಳ್ವಾಸ್ ವಿರಾಸತ್ ಉದ್ಘಾಟನೆ ದಿನದಂದು ಆತ್ಮೀಯವಾಗಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಅವರು ಹೇಳಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಯೋಜನೆಯ ಸಂಗೀತ ಸಾಂಸ್ಕೃತಿಕ ಉತ್ಸವ,'ಆಳ್ವಾಸ್ ವಿರಾಸತ್- 2015' ಜನವರಿ 8ರಿಂದ 11ರವರೆಗೆ ನಡೆಯಲಿದೆ. 21ನೇವರ್ಷದ ಆಳ್ವಾಸ್ ವಿರಾಸತ್ ಜ.8ರಂದು ಉದ್ಘಾಟನೆಯಾಗಲಿದೆ. ಇದೇ ಸಂದರ್ಭದಲ್ಲಿ ಉಸ್ತಾದ್ ಅಮ್ಜದ್ ಖಾನ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ. ಜ.8ರಂದು ಸಂಜೆ 5:15ಕ್ಕೆ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. [ಶೇಖರ ಭಂಡಾರಿ ಪ್ರಾಸ ಭಂಡಾರದಲ್ಲಿ ಒಂದು ಸುತ್ತು]

ಕಾರ್ಯಕ್ರಮ ವಿವರ: ಸಂಜೆ 5:30ಕ್ಕೆ ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾ ಟಿಸುವರು. ನಿಟ್ಟೆ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.

Amjad Ali Khan to receive Alva's Virasat award

ಉಪಸ್ಥಿತಿ: ಸಚಿವ ಬಿ.ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮತ್ತಿತರ ಗಣ್ಯರು.

ಜನಪದ- ಶಾಸ್ತ್ರೀಯ ಸಂಗೀಯ ಕಲರವ: ನಾಲ್ಕು ದಿನಗಳ ನಡೆಯಲಿರುವ ಆಳ್ವಾಸ್ ವಿರಾಸತ್‌ನಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ, ಜನಪದ ಸಂಗೀತ, ನೃತ್ಯಗಳು ಕಣ್ಮನ ಸೆಳೆಯಲಿವೆ. [ವನಸುಮವೇ ಆದ ವನೌಷಧಿ ತಜ್ಞ ಕುಂಜಿರ]

ರಾಜಸ್ಥಾನದ ಶಾಸ್ತ್ರೀಯ ಹಾಗೂ ಜನಪದ ಕಲಾತಂಡದ ಡೆಸರ್ಟ್ ಸ್ಟೋರ್ಮ್, ಶ್ರೀರಾಮ ನಾಟಕ ನಿಕೇತನ, ಆಂಧ್ರಪ್ರದೇಶದ 25 ವಿದ್ಯಾರ್ಥಿಗಳ ವಿಶೇಷ ನೃತ್ಯ ಪ್ರದರ್ಶನ, ಪಂಜಾಬಿ ನೃತ್ಯ ವೈವಿಧ್ಯ, ಗುಜರಾತಿ ನೃತ್ಯ ವೈವಿಧ್ಯ, ಸ್ಟ್ರಿಂಗ್ ಸ್ಟ್ರಕ್ ಪೂರ್ವ ಪಶ್ಚಿಮ ಅಪೂರ್ವ ವಾದನ ಸಂಗಮ, ಕಲೈಮಾಮಣಿ ಶಿವಮಣಿ ಮೊದಲಾದ ಕಲಾವಿದರ ವಾದನ ಸಂಗಮ ಮಹಾಲೀಲ, ಮೈಸೂರು ಮಂಜುನಾಥ್ ತಂಡದ ನಾದಲೋಕ, ಕರ್ನಾಟಕದ ಆಯ್ದ 30 ಯುವ ಪುರುಷ ಕಲಾವಿದರಿಂದ ಪ್ರಥಮ ಬಾರಿಗೆ ನೃತ್ಯ ಪುರುಷ ಸಂಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ 4 ದಿನಗಳು ಪಂಜಾಬಿನ ಫತೇ ಆರ್ಮಿ ಬ್ಯಾಂಡ್ ಕಲೆಯ ವಿಶೇಷ ಪ್ರದರ್ಶನ ನಡೆಯಲಿವೆ ಎಂದು ಡಾ.ಮೋಹನ್ ಆಳ್ವ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

English summary
Alva's Virasat-2015', the most awaited cultural Music extravaganza of Alva's Education Foundation will be held from January 8 to 11 at Alva's palace ground at Vidyagiri, said Dr Mohan Alva, chairman of Alva's Education Foundation. Amjad Ali Khan to receive Alva's Virasat award
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X