ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಟ್ವಾಳದಲ್ಲಿ ಪತ್ತೆಯಾಯಿತು ಅತಿ ಅಪರೂಪದ ಬಿಳಿ ಹೆಬ್ಬಾವು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 05: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮನೆಯೊಂದರಲ್ಲಿ ಬಿಳಿ ಬಣ್ಣದ, ಅತಿ ಅಪರೂಪದ "ವೈಟ್ ಆಲ್ಬಿನೊ" ಹೆಬ್ಬಾವು ಕಾಣಿಸಿಕೊಂಡಿದೆ. ಬಂಟ್ವಾಳದ ಕಾವಳಕಟ್ಟೆ ನಿವಾಸಿ ನೌಶದ್ ಎಂಬುವರ ಮನೆಯಲ್ಲಿ ಈ ಬಿಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ.

ಮನೆಯಲ್ಲಿ ಈ ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಅವರು ಸ್ನೇಕ್ ಕಿರಣ್ ಎಂಬುವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅವರು, ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ನಂತರ ಕಾಡಿಗೆ ಬಿಡಲಾಗಿದೆ. ಈ ಬಿಳಿ ಹೆಬ್ಬಾವು ಅತಿ ಅಪರೂಪದ್ದು ಎನ್ನಲಾಗಿದ್ದು, ಬಂಟ್ವಾಳದಲ್ಲಿ ಕಂಡುಬಂದ ಈ ಹಾವಿನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬೆದ್ರಕಾಡು ಪ್ರದೇಶಕ್ಕೆ ಬಂದ ವಿಚಿತ್ರ ಬಣ್ಣದ ಹಾವು ಕಂಡು ಬೆದರಿದ ಜನಬೆದ್ರಕಾಡು ಪ್ರದೇಶಕ್ಕೆ ಬಂದ ವಿಚಿತ್ರ ಬಣ್ಣದ ಹಾವು ಕಂಡು ಬೆದರಿದ ಜನ

ಈ ಬಿಳಿ ಬಣ್ಣದ ಹೆಬ್ಬಾವು ಆಫ್ರಿಕಾದ ಪಶ್ಚಿಮ ಹಾಗೂ ಮಧ್ಯ ಪ್ರಾಂತ್ಯಗಳಲ್ಲಿ ಕಂಡುಬರುತ್ತವೆ. ಈ ಹಾವು ಮಂಗಳೂರಿನಲ್ಲಿ ಕಂಡುಬಂದಿರುವುದು ಅಚ್ಚರಿ ಎನಿಸಿದೆ. ಅತಿ ಇಕ್ಕಟ್ಟಾದ ಜಾಗದಲ್ಲಿ ಸೇರಿಕೊಳ್ಳುವ ಇವು, ರಾತ್ರಿ ಹೊತ್ತು ಚಟುವಟಿಕೆಯಿಂದ ಕೂಡಿರುತ್ತವೆ. ಬಣ್ಣವೇ ಈ ಹಾವಿನ ಆಕರ್ಷಣೆ. ಈ ಹೆಬ್ಬಾವುಗಳು ಹುಟ್ಟುವಾಗ ಚರ್ಮದ ವರ್ಣ ದ್ರವ್ಯದ ಕೊರತೆಯಿಂದ ಹುಟ್ಟುತ್ತವೆ. ಆದ್ದರಿಂದ ಇಂತಹ ಜೀವಿಗಳಿಗೆ ಆಲ್ಟಿನೊ ಎನ್ನುತ್ತಾರೆ.

Very Rare White Albino Python Found In House Of Bantwal At Dakshina Kannada

ಬೇರೆ ಹಾವುಗಳು ಇದರ ಬಣ್ಣದ ಮೇಲೆ ಆಕರ್ಷಣೆಗೊಳಗಾಗಿ ಇದನ್ನು ತಿಂದು ಬಿಡುವ ಪ್ರಸಂಗವೇ ಹೆಚ್ಚಾಗಿರುವುದರಿಂದ ಈ ಹಾವುಗಳು ಆಯಸ್ಸು ಕಡಿಮೆ.

English summary
A rare white albino python found at house in bantwal of dakshina kannada district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X