ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್ ಶಿಪ್: ಆಳ್ವಾಸ್ ಗೆ ಚಿನ್ನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ. 28 : 29ನೇ ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್ ಶಿಪ್‌ನ 18 ವಯೋಮಿತಿ ವೈಯಕ್ತಿಕ ವಿಭಾಗದಲ್ಲಿ ಮೂಡಬಿದ್ರೆಯ ಆಳ್ವಾಸ್ ನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವೀರಭದ್ರ ಎಂ.ಚಿನ್ನದ ಪದಕ ಜಯಿಸಿದ್ದಾರೆ. ಇದು ಕರ್ನಾಟಕದ ಮಲ್ಲಕಂಬ ಇತಿಹಾಸದಲ್ಲೇ ಗೆದ್ದ ಪ್ರಪ್ರಥಮ ಚಿನ್ನದ ಪದಕ ಇದಾಗಿದೆ.

ಮಧ್ಯಪ್ರದೇಶದ ಉಜ್ಜಯಿನಿಯ ಮಾದವ್ ಸೇವಾ ನ್ಯಾಸ್ ನಲ್ಲಿ ಫೆಬ್ರವರಿ 18ರಿಂದ 20ರವರೆಗೆ ನಡೆದ ಈ ಚಾಂಪಿಯನ್ ಶಿಪ್ ನ 14 ಹಾಗೂ 18ರ ವಯೋಮಿತಿ ಬಾಲಕರ ವಿಭಾಗ, ಬಾಲಕಿಯರ 12 ಮತ್ತು 16 ವಯೋಮಿತಿ ವಿಭಾಗದಲ್ಲಿ ಕರ್ನಾಟಕ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. [ಅಥ್ಲೆಟಿಕ್ಸ್ ನಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ]

Veerabhadra M from Moodubidire Alva's college bags gold in 29th Mallkhamb Championship

ಆಳ್ವಾಸ್ ನ ಅನನ್ಯಾ 12 ರ ವಯೋಮಿತಿಯ ವೈಯಕ್ತಿಕ ವಿಭಾಗದ 5 ನೇ ಸ್ಥಾನವನ್ನು ಗೆದ್ದುಕೊಂಡಿದ್ದಾಳೆ. ಈ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಕರ್ನಾಟಕ ತಂಡದ 32 ಮಂದಿ ಕ್ರೀಡಾಪಟುಗಳಲ್ಲಿ 18 ಮಂದಿ ವಿದ್ಯಾರ್ಥಿಗಳು ಆಳ್ವಾಸ್ ನವರು ಎನ್ನುವುದು ಗಮನಾರ್ಹ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಪ್ರಾಥಮಿಕ ವಿಭಾಗದಿಂದ ಪದವಿಯವರೆಗೆ 60 ಮಂದಿ ವಿದ್ಯಾರ್ಥಿಗಳನ್ನು ಮಲ್ಲಕಂಬಕ್ಕಾಗಿ ದತ್ತು ಪಡೆದು ಅವರಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಆಳ್ವಾಸ್ ಹಾಗೂ ಕರ್ನಾಟಕ ತಂಡದ ಮಲ್ಲಕಂಬ ಸ್ಪರ್ಧಿಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.

English summary
Veerabhadra M, first puc commerce student of Alvas College Moodubidire bags gold in Mallkhamb Championship. 29th National Mallkhamb Championship held at Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X