ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಬಗ್ಗೆ ಸಿಎಂ ಹೇಳಿಕೆ ಸಂವಿಧಾನ ವಿರೋಧಿ: ವೇದವ್ಯಾಸ್ ಕಾಮತ್

|
Google Oneindia Kannada News

ಮಂಗಳೂರು, ನವೆಂಬರ್ 19: ಕಬ್ಬು ಬೆಳೆಗಾರರ ಕುರಿತು ಮುಖ್ಯಮಂತ್ರಿಯವರ ಹೇಳಿಕೆ ಸಂವಿಧಾನ ವಿರೋಧಿಯಾಗಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಕಿಡಿ ಕಾರಿದ್ದಾರೆ.

ಕುಮಾರಸ್ವಾಮಿ ಅವರೇ ಸೃಷ್ಟಿಸಿಕೊಂಡಿರುವ ಖತರ್ನಾಕ್ ಟೈಂಬಾಂಬು! ಕುಮಾರಸ್ವಾಮಿ ಅವರೇ ಸೃಷ್ಟಿಸಿಕೊಂಡಿರುವ ಖತರ್ನಾಕ್ ಟೈಂಬಾಂಬು!

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರು ರೈತರ ಸಮಸ್ಯೆ ಬಗೆಹರಿಸುವುದು ಬಿಟ್ಟು ನೊಂದ ರೈತರ ಸಮಸ್ಯೆಗಳ ಮೇಲೆ ಬರೆ ಎಳೆಯುತ್ತಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮಹಿಳೆಗೆ ಬೈಗುಳ, ವಿವಾದಕ್ಕೆ ಸ್ಪಷ್ಟನೆ ಕೊಟ್ಟರು ಕುಮಾರಸ್ವಾಮಿ ರೈತ ಮಹಿಳೆಗೆ ಬೈಗುಳ, ವಿವಾದಕ್ಕೆ ಸ್ಪಷ್ಟನೆ ಕೊಟ್ಟರು ಕುಮಾರಸ್ವಾಮಿ

ಚುನಾವಣೆಯಲ್ಲಿ ತನಗೆ ಮತ ನೀಡಿಲ್ಲ ಎನ್ನುವ ಕೋಪವನ್ನು ಅಧಿಕಾರ ಹಿಡಿದ ಮೇಲೆ ಕುಮಾರ ಸ್ವಾಮಿಯವರು ಜನ ಸಾಮಾನ್ಯರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು ಹಾಗಾದರೆ ಕುಮಾರ ಸ್ವಾಮಿಯವರು ಕೇವಲ ಅವರ ಪಕ್ಷದ ಮತದಾರರಿಗೆ ಮಾತ್ರ ಮುಖ್ಯಮಂತ್ರಿಯೇ ಎಂದು ಅವರರು ಪ್ರಶ್ನಿಸಿದ್ದಾರೆ ?

ರೈತರ ಬಗ್ಗೆ ಕುಮಾರಸ್ವಾಮಿ ಹೇಳಿಕೆ : ಯಾರು, ಏನು ಹೇಳಿದರು? ರೈತರ ಬಗ್ಗೆ ಕುಮಾರಸ್ವಾಮಿ ಹೇಳಿಕೆ : ಯಾರು, ಏನು ಹೇಳಿದರು?

Veedavyas Kamath slams CM H D Kumarswamy

ಇಂತಹ ದ್ವೇಷ ರಾಜಕಾರಣ ಘನ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ.ರೈತ ತಾನು ಕಹಿ ನುಂಗಿ ರಾಜ್ಯಕ್ಕೆ ಸಿಹಿ ನೀಡುತ್ತಾನೆ. ಒಂದು ಕ್ಷಣ ಅವರ ಸ್ಥಾನದಲ್ಲಿ ನಿಂತು ಅವರ ಪರಿಸ್ಥಿತಿಯನ್ನು ಅವಲೋಕಿಸಿದರೆ ಮುಖ್ಯಮಂತ್ರಿಗಳು ಇಂತಹ ಮಾತನ್ನು ಆಡುತ್ತಿರಲಿಲ್ಲ.ಅದಲ್ಲದೆ ಒಬ್ಬ ರೈತ ಮಹಿಳೆಯ ಬಗ್ಗೆ ಮಾನಹಾನಿಕರವಾಗಿ,ರೈತರ ಬಗ್ಗೆ ಅಮಾನವೀಯವಾಗಿ ಮಾತನಾಡುತ್ತಿರಲಿಲ್ಲ. ಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸುವುದಾಗಿ ಅವರು ತಿಳಿಸಿದರು.

English summary
Speaking to media persons in Mangaluru Managaluru south constituency MLA Veedayvas Kamath slams CM H D Kumaraswamy over his statement on farmer woman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X